ಚಿಕ್ಕಮಗಳೂರು: ಹೊಸ ವರ್ಷಕ್ಕೆ ಕಂಠಪೂರ್ತಿ ಕುಡಿದು ರಾಗಿಮುದ್ದೆ ಉಂಡೋರು, ಶಿವನ ಪಾದ ಸೇರಿದ್ರು!
ಹೊಸ ವರ್ಷದ ದಿನ ಕಂಠಪೂರ್ತಿ ಮದ್ಯ ಸೇವನೆ ಮಾಡಿ ಮನೆಯಲ್ಲಿ ಮಾಡಿದ್ದ ರಾಗಿಮುದ್ದೆ ಊಟ ಮಾಡಿ ಮಲಗಿದವರು ಒಬ್ಬರು ಸ್ಥಳದಲ್ಲಿ ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು (ಜ.02): ಮನೆಯಲ್ಲಿ ನಿನ್ನೆ ಸಂಜೆ ವೇಳೆ ರಾಗುಮುದ್ದೆ ಮಾಡಿಕೊಂಡು ಊಟ ಮಾಡಿ ಮಲಗಿದ್ದವರಿಗೆ ಹೊಟ್ಟೆನೋವು ಶುರುವಾಗಿದೆ. ಸಹೊಸಲಾರದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮನೆಯವರನ್ನು ಕೂಡಲೇ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ದಿನಂಪ್ರತಿ ಮನೆಯಲ್ಲಿ ಆಹಾರ ತಯಾರಿಸುವಂತೆ ತಯಾರಿಸಿದ್ದ ರಾಗಿಮುದ್ದೆ ಹಾಗೂ ಅನ್ನ ಸಾಂಬಾರ್ ಊಟ ಮಾಡಿ ಮಲಗಿದ್ದ ಇಬ್ಬರು ಹೊಟ್ಟೆ ನೋವಿನಿಂದ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ವಿಷಾಹಾರ ಸೇವನೆಯೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇವರು ಕುಟುಂಬ ಸಮೇತವಾಗಿ ಆತ್ಮಹತ್ಯೆಗೆ ಯತ್ನಿಸಿದ್ದರೋ ಅಥವಾ ಇವರಿಗೆ ಗೊತ್ತಿಲ್ಲದೆ ಮನೆಯಲಲಿ ತಯಾರಿಸಿದ್ದ ಅಡುಗೆಯಲ್ಲಿ ವಿಷಜಂತು ಅಥವಾ ವಿಷ ಬಿದ್ದಿತ್ತೋ ಗೊತ್ತಿಲ್ಲ. ಆದರೆ, ಈ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರಿಗೆ ಚಿಕಿತ್ಸೆ ಕೊಡುತ್ತಿದ್ದರೂ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಚಿಕ್ಕಮಗಳೂರು: ಸ್ಕೂಲ್ ಬಸ್ ಡ್ರೈವರ್ ಅಂಕಲ್ ಪ್ರೇಮಪಾಶಕ್ಕೆ ಬಲಿಯಾದ 8ನೇ ಕ್ಲಾಸ್ ಹುಡುಗಿ!
ಹೊಸ ವರ್ಷಾಚರಣೆ ಮುನ್ನಾ ದಿನ ಡಿಸೆಂಬರ್ 31ರಂದು ಕುಟುಂಬದ ಮೂವರು ಮದ್ಯ ಸೇವನೆ ಮಾಡಿದ್ದರು. ಜೊತೆಗೆ, ಹೊಸ ವರ್ಷಾಚರಣೆ ನಿಮಿತ್ತವಾಗಿ ಜ.1ರಂದು ಸ್ನೇಹಿತರು ಹಾಗೂ ನೆಂಟರಿಷ್ಟರು ಕೊಟ್ಟಿದ್ದ ಮದ್ಯವನ್ನು ಸೇವನೆ ಮಾಡಿದ್ದರು. ನಂತರ ಸಂಜೆ ಚೇಳೆ ರಾಗುಮುದ್ದೆ ಅನ್ನ ಸಾಂಬಾರ್ ಮಾಡಿಕೊಂಡು ಊಟ ಮಾಡಿದ್ದಾರೆ. ಊಟದ ಬಳಿಕ ಹೊಟ್ಟೆನೋವು ಎಂದು ನರಳಾಡಲು ಆರಂಭಿಸಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ದೊಡ್ಡಯಲ್ಲಪ್ಪ (75) ಎನ್ನುವವರು ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಇವರಿಗೆ ಗಂಭೀರ ಸಮಸ್ಯೆ ಎದುರಾಗಿದೆ ಎಂದು ನೆರೆಹೊರೆಯವರು ಉಳಿದವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಗೆ ದಾಖಲಿಸಿದ ಬಳಿಕ ಯಲ್ಲಮ್ಮ (50) ಮೃತಪಟ್ಟಿದ್ದಾರೆ. ಇನ್ನು ಇಬ್ಬರು ಮೃತರನ್ನು ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತಂತೆ ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆದರೆ, ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ಕಾರಣ ತಿಳಿಯಲಿದೆ. ಮದ್ಯ ಸೇವನೆಯಿಂದ ಸಾವು ಸಂಭವಿಸಿದೆಯೋ ಅಥವಾ ಊಟದಿಂದ ಸಾವು ಸಂಭವಿಸಿದೆಯೋ ತಿಳಿಯದೇ ಅವರ ಸಂಬಂಧಿಕರು ಗೋಳಾಡುತ್ತಿದ್ದಾರೆ.
ಹೊಸಕೋಟೆ: ಹನುಮ ಜಯಂತಿ ವೇಳೆ ವಿತರಿಸಿದ ಪ್ರಸಾದ ಸೇವಿಸಿ ಓರ್ವ ಸಾವು; 150ಕ್ಕೂ ಹೆಚ್ಚು ಜನ ಅಸ್ವಸ್ಥ!
ಹೌದು, ರಾಜ್ಯದಲ್ಲಿ ಆಗಾಗ ವಿಷಾಹಾರ ಸೇವನೆ ಹಾಗೂ ಕಲುಷಿತ ಈರು ಸೇವನೆಯಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ರಾಯಚೂರು, ಕೊಪ್ಪಳದಲ್ಲಿ ಕಲುಷಿತ ನೀರು ಸೇವನೆಯಿಂದ ಹಲವು ಜೀವಗಳು ಬಲಿಯಾಗಿದ್ದವು. ಇದಾದ ನಂತರ ಕಳೆದ ತಿಂಗಳಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ದೇವಸ್ಥಾನದ ಪ್ರವಾಸ ಸೇವಿಸಿದ್ದ ಮಹಿಳೆಯೊಬ್ಬರು ಪ್ರಾಣ ಬಿಟ್ಟಿದ್ದರು. ಇದೇ ಘಟನೆಯಲ್ಲಿ 165ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಸೇರಿದ್ದಾರೆ, ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.