Asianet Suvarna News Asianet Suvarna News

ಬಿಜೆಪಿ ಜೊತೆಗೆ ಧೃಡವಾಗಿದ್ದೇನೆ, ಕಾಂಗ್ರೆಸ್ ಸೇರ್ಪಡೆ ಸುದ್ದಿ ತಳ್ಳಿ ಹಾಕಿದ ತೇಜಸ್ವಿನಿ ಅನಂತಕುಮಾರ್‌

ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್‌ ಅವರ ಪತ್ನಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಅವರು ಕಾಂಗ್ರೆಸ್ ಸೇರ್ಪಡೆ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

BJP Leader Tejaswini AnanthKumar clarifies the Congress joining rumors  gow
Author
First Published Jul 17, 2023, 11:03 AM IST

ಬೆಂಗಳೂರು (ಜು.17): ಕೇಂದ್ರ ಸಚಿವರಾಗಿದ್ದ ದಿ.ಅನಂತಕುಮಾರ್‌ ಅವರ ಪತ್ನಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಅವರು ಕಾಂಗ್ರೆಸ್ ಸೇರ್ಪಡೆ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ  ಜನತಾ ಪಕ್ಷದ ಜೊತೆಗೆ ಧೃಡವಾಗಿ ಇದ್ದೇನೆ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತೇಜಸ್ವಿನಿ ಅವರು ಕಾಂಗ್ರೆಸ್ ಸೇರುತ್ತಾರೆ ಎಂದು ಸುದ್ದಿ ಹಬ್ಬಿತ್ತು.

ಪ್ರತಿಪಕ್ಷಗಳಿಗೆ ಸಡ್ಡು: ನಾಳೆ ದಿಲ್ಲಿಯಲ್ಲಿ ಎನ್‌ಡಿಎ ಬಲ ಪ್ರದರ್ಶನ; 30 ರಾಜಕೀಯ ಪಕ್ಷಗ

ವಿಧಾನಸಭೆ ಚುನಾವಣೆ ವೇಳೆ ಜಗದೀಶ್ ಶೆಟ್ಟರ್ , ಲಕ್ಷ್ಮಣ್ ಸವದಿ ಸೇರಿ ಹಲವರು ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿ ಶಾಕ್ ಕೊಟ್ಟಿದ್ದರು.  ಹೀಗಾಗಿ ಕಳೆದೆರಡು ದಿನಗಳ ಹಿಂದೆ  ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆ ಆಗಲಿದೆ ಎಂದು ಸುದ್ದಿ ಹಬ್ಬಿತ್ತು. ತೇಜಸ್ವಿನಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಜಗದೀಶ್‌ ಶೆಟ್ಟರ್‌ ಮುಖ್ಯ ಸೇತುವೆ ಎನ್ನಲಾಗಿತ್ತು. ಇವೆಲ್ಲ ಊಹಾಪೋಹಗಳಿಗೆ ಇಂದು ತೆರೆ ಬಿದ್ದಿದೆ.

ಇಂದು ಕೇಂದ್ರ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆ: ಮೀಟಿಂಗ್‌ನಲ್ಲಿ ಈ 6 ವಿಚಾರಗಳ ಚರ್ಚೆ; ಇಲ್ಲಿದೆ

ಇನ್ನು ಬಿಜೆಪಿಯಿಂದ 6 ಬಾರಿ ಗೆದ್ದು ಸಂಸದರಾಗಿದ್ದ ಅನಂತಕುಮಾರ್‌ ಅವರ ನಿಧನದ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅವರನ್ನು 2018ರ ಲೋಕಸಭೆ ಚುನಾವಣೆಗೆ ನಿಲ್ಲಿಸಲು ತಯಾರಿ ನಡೆದಿತ್ತು. ಆದರೆ, ಕಾರಣಾಂತರಗಳಿಂದ ಯುವ ನಾಯಕ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು.  ಲೋಕಸಭೆಗೆ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ತೇಜಸ್ವಿನಿ ನಿರಾಸೆಯಾಗಿದ್ದರು. ಬಳಿಕ ಅವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿಗೆ ಬಿಜೆಪಿ ಟಿಕೆಟ್ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

 

Follow Us:
Download App:
  • android
  • ios