ಕಾಂಗ್ರೆಸ್‌ ಹಗರಣ ಬಯಲು ಮಾಡ್ತೇವೆ: ವಿಧಾನಪರಿಷತ್‌ ಸದಸ್ಯ ರವಿಕುಮಾರ್‌

ಕಾಂಗ್ರೆಸ್‌ ಆಡಳಿತದಲ್ಲಿ ಸಾಲು ಸಾಲು ಅಕ್ರಮಗಳು ನಡೆದಿದ್ದು, ಪಿಎಸ್‌ಐ ನೇಮಕಾತಿ, ಶಿಕ್ಷಕರ ನೇಮಕಾತಿ ಸೇರಿದಂತೆ ಇತರೆ ಹಗರಣಗಳ ಎಲ್ಲ ಮಾಹಿತಿಯನ್ನು ಜನತೆಯ ಮುಂದಿಡಲಾಗುವುದು. ಕಾಂಗ್ರೆಸ್‌ನ ಅಕ್ರಮಗಳ ಇತಿಹಾಸವನ್ನು ಮುರಿಯಲು ಯಾರಿಂದಲೂ ಅಸಾಧ್ಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಹೇಳಿದ್ದಾರೆ. 

Bjp Leader N Ravikumar Slams on Congress gvd

ಬೆಂಗಳೂರು (ಸೆ.17): ಕಾಂಗ್ರೆಸ್‌ ಆಡಳಿತದಲ್ಲಿ ಸಾಲು ಸಾಲು ಅಕ್ರಮಗಳು ನಡೆದಿದ್ದು, ಪಿಎಸ್‌ಐ ನೇಮಕಾತಿ, ಶಿಕ್ಷಕರ ನೇಮಕಾತಿ ಸೇರಿದಂತೆ ಇತರೆ ಹಗರಣಗಳ ಎಲ್ಲ ಮಾಹಿತಿಯನ್ನು ಜನತೆಯ ಮುಂದಿಡಲಾಗುವುದು. ಕಾಂಗ್ರೆಸ್‌ನ ಅಕ್ರಮಗಳ ಇತಿಹಾಸವನ್ನು ಮುರಿಯಲು ಯಾರಿಂದಲೂ ಅಸಾಧ್ಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಹೇಳಿದ್ದಾರೆ. ಪಿಎಸ್‌ಐ ನೇಮಕಾತಿ ಮತ್ತು ಶಿಕ್ಷಕರ ನೇಮಕಾತಿ ಅಕ್ರಮ ಸಂಬಂಧ ಪಾರದರ್ಶಕತೆಯಿಂದ ತನಿಖೆ ನಡೆಸಲಾಗಿದೆ. ಅಕ್ರಮಗಳ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂಬುದನ್ನು ಬಿಜೆಪಿ ಸಾಬೀತುಪಡಿಸಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಬಂಧಿಸಿದ ಸರ್ಕಾರ ಬಿಜೆಪಿಯದ್ದಾಗಿದೆ ಎಂದು ಹೇಳಿದರು.

2012-13ನೇ ಸಾಲಿನಲ್ಲಿ ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಸೇರಿ 3,407 ಹುದ್ದೆಗಳಿಗೆ ಮತ್ತು 2014-15ರಲ್ಲಿ 1,689 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ನೇಮಕಾತಿ ಸಂದರ್ಭದಲ್ಲಿ ಎಲ್ಲಾ ಪ್ರತಿಭಾವಂತರನ್ನು ಆಯ್ಕೆ ಮಾಡದೆ ಹೆಚ್ಚು ಅಂಕ ಪಡೆಯದ ಕೆಲವು ಅಭ್ಯರ್ಥಿಗಳಿಗೂ ಹುದ್ದೆ ಲಭಿಸಿದೆ. ಪರೀಕ್ಷೆ ಬರೆಯದವರಿಗೂ ನೇಮಕಾತಿ ಮಾಡಲಾಗಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರ್ಕಾರವು ರಾಜ್ಯದ ಯುವಜನತೆ, ವಿದ್ಯಾರ್ಥಿಗಳು ಮತ್ತು ಪ್ರತಿಭಾವಂತರಿಗೆ ಸ್ಪಷ್ಟಸಂದೇಶ ನೀಡಲು ಇಷ್ಟಪಡುತ್ತದೆ. ಹಿಂದಿನ ಅಕ್ರಮಗಳ ತನಿಖೆ ಮಾಡಿ ತಪ್ಪಿತಸ್ಥರನ್ನು ಕಾನೂನಿನ ಕುಣಿಕೆಗೆ ತರಲಿದ್ದೇವೆ ಎಂದು ತಿಳಿಸಿದರು.

ಭಾರತ್‌ ಜೋಡೋ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಸ್ಥಳ ಪರಿಶೀಲಿಸಿದ ಸಂಸದ ಡಿ.ಕೆ.ಸುರೇಶ್‌

2017-18, 18-19ನೇ ಸಾಲಿನ ನೇಮಕಾತಿ ಸಂದರ್ಭದಲ್ಲಿ ಮುಖ್ಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾಗದ ಹುದ್ದೆಗಳಿಗೆ ಆಯ್ಕೆ ಪಟ್ಟಿಯಲ್ಲಿ ಇಲ್ಲದವರನ್ನು ಆಯ್ಕೆ ಮಾಡಲಾಗಿದೆ. ಮೆರಿಟ್‌ ಲಿಸ್ಟ್‌ ಬಿಟ್ಟು ನಾನ್‌ ಮೆರಿಟ್‌ ಇರುವವರು, ಕನಿಷ್ಠ ಅಂಕಗಳನ್ನೂ ಪಡೆಯದವರಿಗೂ ನೇಮಕಾತಿ ಮಾಡಿಕೊಳ್ಳಲಾಗಿದೆ. ನಕಲಿ ದಾಖಲೆ ಸಲ್ಲಿಸುವಿಕೆ, ಅಧಿಕಾರ ದುರ್ಬಳಕೆ, ಅಧಿಸೂಚನೆಯ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ನೋಂದಣಿ ಸಂಖ್ಯೆಯನ್ನು ಬಳಸಿ ಭಾಗಶಃ ಹೋಲಿಕೆಯಾಗುವ ಮತ್ತು ಪರೀಕ್ಷೆಯನ್ನೇ ಬರೆಯದ ವ್ಯಕ್ತಿಗಳಿಗೆ ನೇಮಕಾತಿ ಪತ್ರ ಆದೇಶ ನೀಡಲಾಗಿದೆ. ಇಂತಹ ಅಕ್ರಮಗಳಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ಟೀಕಾಪ್ರಹಾರ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪಿ.ರಾಜೀವ್‌, ಪಕ್ಷದ ಮುಖಂಡ ಎಂ.ಡಿ.ಲಕ್ಷ್ಮೇನಾರಾಯಣ ಉಪಸ್ಥಿತರಿದ್ದರು.

ಭಾವಚಿತ್ರಕ್ಕೆ ಹಾಲೆರೆಯುವುದಕ್ಕೆ ಬಿಜೆಪಿ ನಿರ್ಬಂಧ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಶನಿವಾರ ಜನಸ್ನೇಹಿ ಕಾರ್ಯಕ್ರಮವನ್ನಾಗಿ ರಾಜ್ಯಾದ್ಯಂತ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರ ಭಾವಚಿತ್ರಕ್ಕೆ ಹಾಲು ಎರೆಯುವುದು, ಭಾವಚಿತ್ರಕ್ಕೆ ಪೂಜೆ-ಹೋಮ ಹವನ ಮಾಡಬಾರದು. ಈ ಬಗ್ಗೆ ಪಕ್ಷದ ಜಿಲ್ಲಾ ಮತ್ತು ಮಂಡಲ ಘಟಕಗಳಿಗೂ ಸೂಚನೆ ನೀಡಲಾಗಿದೆ ಎಂದರು.

ಭಟ್ಕಳದಲ್ಲಿ ಭುಗಿಲೆದ್ದ ದೇವಸ್ಥಾನ ಮಹಾದ್ವಾರ V/s ಟಿಪ್ಪು ಗೇಟ್ ನಿರ್ಮಾಣ ವಿವಾದ

ಮೋದಿಯವರು ಹೇಗೆ ಬಡವರು, ದಲಿತರು ಮತ್ತು ಶೋಷಿತರು, ಮಹಿಳೆಯರು, ಅಂಗವಿಕಲರು ಹಾಗೂ ಪರಿಸರದ ಪರ ಎಂಬುದರ ಹಿನ್ನೆಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮೋದಿ ಅವರ ಪರಿಚಯದ ದೃಷ್ಟಿಯಿಂದ ಅವರ ಬಗೆಗಿನ ‘ಮೋದಿ 20 ಡ್ರೀಮ… ಮೀಟ್‌ ಡೆಲಿವರಿ’ ಪುಸ್ತಕ ಬಿಡುಗಡೆ ಮಾಡಲಾಗುವುದು ಹಾಗೂ ಸಾಧನೆಗಳ ಪ್ರದರ್ಶಿನಿ ಏರ್ಪಡಿಸಲಾಗುವುದು ಎಂದರು. ಬರುವ ಅ.2ರಂದು ಗಾಂಧಿ ಜಯಂತಿಯಂದು ಒಂದು ಜೊತೆ ಖಾದಿ ಡ್ರೆಸ್‌ ಖರೀದಿ, ಖಾದಿ ಕರ್ಚೀಫ್‌, ಖಾದಿ ಬಳಕೆ ಅಭಿಯಾನ ಮಾಡುತ್ತೇವೆ ಎಂದು ರವಿಕುಮಾರ್‌ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios