ಚಿತ್ತಾಪುರ ಕ್ಷೇತ್ರದಲ್ಲಿ ಕಮಲ ಅರಳಿಸಲು ತಿರುಪತಿ ತಿಮ್ಮಪ್ಪನ ಮೊರೆ ಹೋದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ 

ಕಲಬುರಗಿ(ನ.30): ಕಾಂಗ್ರೆಸ್‌ ನಾಯಕ ಪ್ರಿಯಾಂಕ್ ಖರ್ಗೆ ಸೋಲಿಗಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ತಿರುಪತಿ ತಿಮ್ಮಪ್ಪನಿಗೆ ಮೊಣಕಾಲಿನ ಮೇಲೆ ಬೆಟ್ಟ ಹತ್ತಿ ವಿಶೇಷ ಹರಕೆಯೊಂದನ್ನ ಹೊತ್ತಿದ್ದಾರೆ. ಚಿತ್ತಾಪುರ ಕ್ಷೇತ್ರದಲ್ಲಿ ಕಮಲ ಅರಳಿಸಲು ಮಣಿಕಂಠ ರಾಠೋಡ್ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಲಬುರಗಿಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡರಿಂದ ತಿಮ್ಮಪ್ಪನಿಗೆ ಕಠಿಣ ಹರಕೆ ಹೊತ್ತಿದ್ದಾರೆ. ಮೊಣಕಾಲಿನ ಮೇಲೆ ತಿರುಪತಿ ಬೆಟ್ಟ ಹತ್ತಿ ಮಣಿಕಂಠ ರಾಠೋಡ್ ರಾಠೋಡ್ ಸಂಕಲ್ಪವೊಂದನ್ನ ಮಾಡಿದ್ದಾರೆ. ಬಿಜೆಪಿ ಮುಖಂಡ ಮಣಿಕಂಠ ಮೊಣಕಾಲಿನ ಮೇಲೆ ತಿಮ್ಮಪ್ಪನ ಬೆಟ್ಟ ಹತ್ತಿ ವಿಶೇಷ ಪೂಜೆ ಸಲ್ಲಿಸಿ ಪ್ರಿಯಾಂಕ್ ಖರ್ಗೆ ಸೋಲಿಸೋದಾಗಿ ಪಣ ತೊಟ್ಟಿದ್ದಾರೆ.

ಚಿತ್ತಾಪುರದಲ್ಲಿ ಪೋಸ್ಟರ್ ಪಾಲಿಟಿಕ್ಸ್‌: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ವಾರ್ನಿಂಗ್

ಚಿತ್ತಾಪುರ ಕ್ಷೇತ್ರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಶತಾಯ-ಗತಾಯ ಕಾಂಗ್ರೆಸ್ ಕೆಡವಲು ವಿಶೇಷ ಹರಕೆ ಹೊತ್ತಿದ್ದಾರೆ. ಸಪ್ತ ಗಿರಿ ಹತ್ತುವ ಮೂಲಕ ಚುನಾವಣೆಗೆ ಸಜ್ಜಾಗಿದ್ದಾರೆ. ಈ ವೇಳೆ ಮಾತನಾಡಿದ ಮಣಿಕಂಠ ರಾಠೋಡ್ ಅವರು ಚಿತ್ತಾಪುರ ಕ್ಷೇತ್ರದ ಜನರಿಗೆ ಒಳ್ಳೆಯದಾಗಲಿ ಅಂತ ತಿಮ್ಮಪ್ಪನ ಬಳಿ ಬೇಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರನ್ನ ಸೋಲಿಸುವುದೇ ಒನ್ ಪಾಯಿಂಟ್ ಅಜೆಂಡಾ ಅಂತ ಮಣಿಕಂಠ ರಾಠೋಡ್ ಹೇಳಿಕೊಂಡಿದ್ದರು.