Asianet Suvarna News Asianet Suvarna News

ಉದಯನಿಧಿ ಆಯೋಗ್ಯ, ರಾಕ್ಷಸ ವಂಶಸ್ಥ: ಈಶ್ವರಪ್ಪ

ಸಿದ್ದರಾಮಯ್ಯ ಬಜೆಟ್‌ ಮಂಡನೆ ಸೇರಿ ಹಲವು ಕಡೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡುತ್ತಾರೆ. ಇಂಡಿಯಾ ಒಕ್ಕೂ​ಟ​ದ​ಲ್ಲಿ​ರುವ, ಡಿಎಂಕೆ ಸರ್ಕಾ​ರ​ದಲ್ಲಿ ಸಚಿ​ವ​ರಾ​ಗಿ​ರುವ ಉದಯನಿಧಿ ಸ್ಟಾಲಿನ್‌ ಹೇಳಿಕೆ ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನೆಂದು ಇಬ್ಬ​ರೂ ತಿಳಿಸಬೇಕು ಎಂದು ಆಗ್ರ​ಹಿ​ಸಿ​ದ​ ಮಾಜಿ ಉಪ ಮುಖ್ಯ​ಮಂತ್ರಿ ಕೆ.ಎಸ್‌.ಈಶ್ವರಪ್ಪ 

BJP Leader KS Eshwarappa Slams Udhayanidhi Stalin grg
Author
First Published Sep 6, 2023, 3:30 AM IST

ತುಮಕೂರು(ಸೆ.06): ತಮಿ​ಳು​ನಾಡು ಮುಖ್ಯ​ಮಂತ್ರಿ ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ಒಬ್ಬ ಅಯೋಗ್ಯ. ಅವರು ರಾಕ್ಷಸ ವಂಶ​ದ​ವರು ಅಂತ ಈಗ ಗೊತ್ತಾ​ಗಿ​ದೆ ಎಂದು ಮಾಜಿ ಉಪ ಮುಖ್ಯ​ಮಂತ್ರಿ ಕೆ.ಎಸ್‌.ಈಶ್ವರಪ್ಪ ಹರಿಹಾಯ್ದಿದ್ದಾರೆ. 

ನಗ​ರ​ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂಥ ಅಯೋಗ್ಯ ಮಂತ್ರಿ ತಮಿಳುನಾಡಿನಲ್ಲಿ ಇದ್ದಾರೆ ಅನ್ನುವುದು ಒಂದು ಹೇಳಿಕೆಯಿಂದ ಗೊತ್ತಾಗಿದೆ ಎಂದು ತಿಳಿ​ಸಿ​ದ​ರು. 

ಉದಯನಿಧಿ ಇನ್ನೂ ಬಚ್ಚಾ, ಕಣ್ಣು ತೆರೆದು ಜಗತ್ತು ನೋಡಿಲ್ಲ: ಮುತಾಲಿಕ್‌

ಕರ್ನಾಟಕದ ಮುಖ್ಯ​ಮಂತ್ರಿ ಹಾಗೂ ಉಪ ಮುಖ್ಯ​ಮಂತ್ರಿ ಇಬ್ಬರು ಬಹಳ ದೈವಭಕ್ತರು. ಇವ​ರಲ್ಲಿ ಒಬ್ಬರು ನೊಣವಿನಕೆರೆ ಸ್ವಾಮೀಜಿ ಬಳಿ ಹೋಗಿ ಅವರ ಬಳಿ ಆಶೀರ್ವಾದ ಪಡೆಯುತ್ತಾರೆ. ಡಿ.ಕೆ.​ಶಿ​ವ​ಕು​ಮಾರ್‌ ಇಡೀ ಜೀವನ ಅವರು ಹೇಳಿದಂತೆ ಕೇಳುತ್ತೇನೆ ಅಂತಾರೆ. ಸಿದ್ದರಾಮಯ್ಯ ಬಜೆಟ್‌ ಮಂಡನೆ ಸೇರಿ ಹಲವು ಕಡೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡುತ್ತಾರೆ. ಇಂಡಿಯಾ ಒಕ್ಕೂ​ಟ​ದ​ಲ್ಲಿ​ರುವ, ಡಿಎಂಕೆ ಸರ್ಕಾ​ರ​ದಲ್ಲಿ ಸಚಿ​ವ​ರಾ​ಗಿ​ರುವ ಉದಯನಿಧಿ ಸ್ಟಾಲಿನ್‌ ಹೇಳಿಕೆ ವಿಚಾರದಲ್ಲಿ ತಮ್ಮ ಅಭಿಪ್ರಾಯ ಏನೆಂದು ಇಬ್ಬ​ರೂ ತಿಳಿಸಬೇಕು ಎಂದು ಆಗ್ರ​ಹಿ​ಸಿ​ದ​ರು.

Follow Us:
Download App:
  • android
  • ios