'ಭಗವದ್ಗೀತೆ - ಕುರಾನ್‌ನಲ್ಲಿ ಕೆಟ್ಟ ಸಂಗತಿ ಇದ್ರೆ ಎರಡನ್ನೂ ಅರಬ್ಬೀ ಸಮುದ್ರಕ್ಕೆ ಬಿಸಾಕಿ'
* ಭಗವದ್ಗೀತೆ - ಕುರಾನ್‌ನಲ್ಲಿ ಕೆಟ್ಟ ಸಂಗತಿ ಇದ್ರೆ ಎರಡನ್ನೂ ಅರಬ್ಬೀ ಸಮುದ್ರಕ್ಕೆ ಬಿಸಾಕಿ ಸಿಟಿ ರವಿ
* ಹಲಾಲ್ ಅನ್ನೋದು ಒಂದು ಎಕಾನಾಮಿಕ್ ಜಿಹಾದ್
* ವಿಧಾನಸೌಧದಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ
ಬೆಂಗಳೂರು, (ಮಾ.29): ಹಿಜಾಬ್ ಗಲಾಟೆಯ (Hijab Row) ಬಳಿಕ ಮುಸ್ಲಿಂ ವರ್ತಕರಿಗೆ ಹಿಂದೂಗಳ ಜಾತ್ರೆಯಲ್ಲಿ ಬಹಿಷ್ಕಾರ ಹಾಕಲಾಗುತ್ತಿದೆ. ಬಹಿಷ್ಕಾರದ ಮುಂದುವರಿದ ಭಾಗವಾಗಿ ಈಗ ಹಲಾಲ್ ಮಾಂಸಗಳನ್ನು ಬಹಿಷ್ಕರಿಸುವಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.
ಯುಗಾದಿ ಮರು ದಿವಸ ಕರ್ನಾಟಕದ ಕೆಲ ಭಾಗಗಳಲ್ಲಿ ಆಚರಿಸುವ ಹೊಸತೊಡಕು ವೇಳೆ ಮಾಂಸ ತಿನ್ನಲಾಗುತ್ತದೆ. ಈ ವೇಳೆ ಹಲಾಲ್ ಮಾಂಸವನ್ನು ಸೇವಿಸದಂತೆ ಕರೆ ನೀಡಿದೆ. ಮುಸ್ಲಿಮ್ ದೇವರಿಗೆ ಅರ್ಪಣೆ ಮಾಡಿದ ಬಳಿಕ ಹಿಂದೂ ದೇವರಿಗೆ ಅರ್ಪಣೆ ಮಾಡುವುದು ಸರಿಯಲ್ಲ ಎಂದು ಹಿಂಜಾವೇ ಹೇಳಿದೆ.
"
ರಾಜ್ಯದಲ್ಲಿ ಸದ್ದು ಮಾಡಿದ ಹಲಾಲ್ ಮಾಂಸ ನಿಷೇಧ, ಕೋಳಿ ಕತ್ತರಿಸಿ ಸ್ವಾಮೀಜಿಯಿಂದ ಅಭಿಯಾನಕ್ಕೆ ಚಾಲನೆ!
ಇನ್ನು ಈ ಬಗ್ಗೆ ಇಂದು(ಮಂಗಳವಾರ) ವಿಧಾನಸೌಧದಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ,ಭಗವದ್ಗೀತೆ ಮತ್ತು ಕುರಾನ್ ನಲ್ಲಿ ಒಳ್ಳೆಯ ಸಂಗತಿಗಳಿದ್ದರೆ ಅದನ್ನ ಅಳವಡಿಸಿ. ಒಂದು ವೇಳೆ ಕೆಟ್ಟ ಸಂಗತಿಗಳಿದ್ದರೆ ಎರಡನ್ನೂ ಅರಬ್ಬೀ ಸಮುದ್ರಕ್ಕೆ ಹಾಕಿ ಎಂದು ಹೇಳಿದ ಅವರು, ಹಲಾಲ್ ಮಾಂಸ ಉಪಯೋಗಿಸಿ ಅಂತ ಹೇಗೆ ರೈಟ್ಸ್ ಇದೆಯೋ, ಹಾಗೇ ಅದನ್ನು ಬಹಿಷ್ಕರಿಸಿ ಅಂತ ಹೇಳುವ ರೈಟ್ಸ್ ನಮಗೆ ಇದೆ. ಹಲಾಲ್ ಅಂದ್ರೆ ಮುಸ್ಲಿಂರ ಧಾರ್ಮಿಕ ಕ್ರಿಯೆ. ಅದು ಅವರಿಗೆ ಪ್ರಿಯವಾಗಿರುತ್ತೆ.. ಅದನ್ನ ಎಲ್ಲರೂ ಒಪ್ಪಿಕೊಳ್ಳಬೇಕು ಅಂತೇನಾದ್ರು ಇದ್ಯಾ? ಎಂದು ಪ್ರಶ್ನಿಸಿದರು.
ಸಾಮರಸ್ಯವನ್ನ ಹೇರೋದಕ್ಕೆ ಬರೋದಿಲ್ಲ. ಹಾಗಂತ ಸಾಮರಸ್ಯ ಒನ್ ವೇ ಅಲ್ಲ ಅದು ಟೂ ವೇ. ಹಲಾಲ್ ಇಲ್ಲದ ಮಾಂಸ ಅವರು ತಿನ್ನೋದಕ್ಕೆ ರೆಡಿಯಾದ್ರೆ. ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ. ಈ ಹಿಂದೆ ಇರುವಂತ ನಿಯಮಗಳನ್ನೆಲ್ಲ ಈಗಲೂ ಒಪ್ಪಿಕೊಳ್ಳಲು ಆಗುತ್ತಾ? ಎಂದರು.
ಹಲಾಲ್ ಅನ್ನೋದು ಒಂದು ಆರ್ಥಿಕ ಜಿಹಾದ್. ಹಲಾಲ್ ಅನ್ನೋದು ಒಂದು ಎಕಾನಾಮಿಕ್ ಜಿಹಾದ್ ,ಎಕಾನಾಮಿಕ್ ಜಿಹಾದ್ ಅಂದ್ರೆ ಮುಸ್ಲಿಂರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಅಂತ ಇದನ್ನ ಅವರು ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ ಎಂದು ಹೇಳಿದರು.
ಹಾಲಾಲ್ ಮಾಂಸ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರಿಯ ನಮ್ಮ ದೇವರಿಗೆ ಎಂಜಲು. ಒಬ್ಬ ಹಿಂದು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಂರು ಬಂದು ತಗೋತಾರಾ?. ಮುಸ್ಲಿಂರ ಅಂಗಡಿಯಲ್ಲಿ ತಗೋಬೇಕು ಅಂತ ನೀವು ಯಾಕೆ ಹೇಳ್ತೀರಾ? ಹೇಳೋಕೆ ಏನ್ ರೈಟ್ಸ್ ಇದೆ ಎಂದು ಪ್ರಶ್ನಿಸಿದರು.
ಹಲಾಲ್ ಮಾಂಸ ನಿಷೇಧ, ಕೋಳಿ ಕತ್ತರಿಸಿ ಸ್ವಾಮೀಜಿಯಿಂದ ಅಭಿಯಾನಕ್ಕೆ ಚಾಲನೆ
ಹಿಜಾಬ್ ವಿವಾದದ ನಂತರ ಇದೀಗ ಕರ್ನಾಟಕದಲ್ಲಿ ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಕರೆ ನೀಡಿದ ಹಿಂದೂ ಜನ ಜಾಗೃತಿ ಹಲಾಲ್ ಮಾಂಸವನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ. ಎಲ್ಲಾ ಹಿಂದೂಗಳಿಗೆ ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಅವರು ರಾಷ್ಟ್ರೀಯ ಮಟ್ಟದಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ಹಿಂದೂ ಜನ ಜಾಗೃತಿ ಮಂಚ್‌ನ ಮೋಹನ್ ಗೌಡರು ಹಲಾಲ್ ಮಾಂಸ ಮತ್ತು ಮುಸಲ್ಮಾನರ ಅಂಗಡಿಯಿಂದ ಮಾಂಸವನ್ನು ಖರೀದಿಸದಂತೆ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಹಲಾಲ್ ಮಾಂಸ ನಿಷೇಧಕ್ಕೆ ಆಗ್ರಹಿಸಿ ರಾಷ್ಟ್ರಮಟ್ಟದಲ್ಲಿ ಅಭಿಯಾನ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಮುಸ್ಲಿಂ ಅಂಗಡಿಯವರಿಂದ ಮಾಂಸವನ್ನು ಖರೀದಿಸಬೇಡಿ ಎಂದು ಅವರು ಹಿಂದೂಗಳನ್ನು ಒತ್ತಾಯಿಸಿದ್ದಾರೆ.
ಅಲ್ಲದೇ 'ಮುಸ್ಲಿಮರು ಪ್ರಾಣಿಯನ್ನು ತುಂಡರಿಸಿದಾಗ ಅದರ ಮುಖವನ್ನು ಮೆಕ್ಕಾ ಕಡೆಗೆ ತಿರುಗಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅದೇ ಮಾಂಸವನ್ನು ಹಿಂದೂ ದೇವತೆಗಳಿಗೆ ಅರ್ಪಿಸಲಾಗುವುದಿಲ್ಲ. ಹಿಂದೂ ಧರ್ಮದಲ್ಲಿ, ಪ್ರಾಣಿಯನ್ನು ಹಿಂಸಿಸಿ (ವಿದ್ಯುತ್) ಆಘಾತದಿಂದ ಕೊಲ್ಲುವುದನ್ನು ನಾವು ನಂಬುವುದಿಲ್ಲ ಎಂದು ಗೌಡರು ತಿಳಿಸಿದ್ದಾರೆ.