ಕಾಂಗ್ರೆಸ್‌ನ ಮಾಯಾಯುದ್ಧದ ಗೆಲುವು ತಾತ್ಕಾಲಿಕ: ಸಿ.ಟಿ.ರವಿ

ಕಾಂಗ್ರೆಸ್‌ನ ಮಾಯಾಯುದ್ಧದ ಗೆಲುವು ತಾತ್ಕಾಲಿಕ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. ಆದರೆ ನಾವು ನಂಬಿದ ಸಿದ್ಧಾಂತಕ್ಕೆ ಸೋಲಾಗಿಲ್ಲ. ದೇಶದಲ್ಲೀಗ ಯುಪಿಎ ಅವಧಿಯ ಸ್ಕ್ಯಾಮ್‌ ವರ್ಸಸ್‌ ಪ್ರಧಾನಿ ಮೋದಿ ಆಡಳಿತದ ಸ್ಕೀಂ ಹೆಚ್ಚಿನ ಸುದ್ದಿಯಲ್ಲಿದೆ.

BJP Leader CT Ravi Slams On Congress Govt At Mangaluru gvd

ಮಂಗಳೂರು (ಜೂ.23): ಕಾಂಗ್ರೆಸ್‌ನ ಮಾಯಾಯುದ್ಧದ ಗೆಲುವು ತಾತ್ಕಾಲಿಕ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. ಆದರೆ ನಾವು ನಂಬಿದ ಸಿದ್ಧಾಂತಕ್ಕೆ ಸೋಲಾಗಿಲ್ಲ. ದೇಶದಲ್ಲೀಗ ಯುಪಿಎ ಅವಧಿಯ ಸ್ಕ್ಯಾಮ್‌ ವರ್ಸಸ್‌ ಪ್ರಧಾನಿ ಮೋದಿ ಆಡಳಿತದ ಸ್ಕೀಂ ಹೆಚ್ಚಿನ ಸುದ್ದಿಯಲ್ಲಿದೆ. ದೇಶವನ್ನಾಳಿದ ಕಾಂಗ್ರೆಸ್‌ ಈವರೆಗೆ ಹಗರಣ ಹಾಗೂ ಭ್ರಷ್ಟಾಚಾರಗಳಲ್ಲಿ ಕಾಲ ಕಳೆದಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಕೇಂದ್ರದಲ್ಲಿ ಮೋದಿ ಸರ್ಕಾರಕ್ಕೆ 9 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಷರಾಜ್ಯದಲ್ಲಿ ನಮ್ಮ ಮತ ಕಡಿಮೆಯಾಗಿ ನಾವು ಅಧಿಕಾರ ಕಳೆದುಕೊಂಡಿಲ್ಲ. 

2013ರಲ್ಲಿ ಕಾಂಗ್ರೆಸ್‌ ಗೆದ್ದಿತ್ತು, ಆದರೆ ಅದೇ ಜನತೆ ಲೋಕಸಭೆಗೆ ಬಿಜೆಪಿ ಗೆಲ್ಲಿಸಿದ್ದರು. ಈ ಲೋಕಸಭಾ ಚುನಾವಣೆಯಲ್ಲೂ ದೇಶ ಗೆಲ್ಲಬೇಕು ಎನ್ನುವವರು ಮೋದಿಯವರನ್ನು ಗೆಲ್ಲಿಸುತ್ತಾರೆ. ದೇಶ ಹಾಳಾಗಬೇಕು ಎನ್ನುವವರು ದೇಶ ಸೋಲಬೇಕು ಎನ್ನುವ ತುಕಡೆ ಗ್ಯಾಂಗ್‌ ಅನ್ನು ಗೆಲ್ಲಿಸುತ್ತಾರೆ ಎಂದರು. ಮುಂಬರುವ 2024ರ ಚುನಾವಣೆಯಲ್ಲಿ ಮೈಮರೆಯಬಾರದು. ದೇಶ ಉಳಿಸುವ ಆ ಚುನಾವಣೆಯಲ್ಲಿ ಮತ್ತೆ ಮೋದಿ ಅಧಿಕಾರಕ್ಕೆ ಬರಲು ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರು ಗೆದ್ದು ಬರಬೇಕು. ಈ ಹಿನ್ನೆಲೆಯಲ್ಲಿ ಮನೆ ಮನೆಯಲ್ಲಿ ಜಾಗೃತಿ ಮೂಡಿಸಬೇಕಿದೆ. ಚುನಾವಣಾ ಫಲಿತಾಂಶದಿಂದ ಹೆದರುವ ಅಗತ್ಯವಿಲ್ಲ. ಕಾಂಗ್ರೆಸ್‌ನ ಮಾಯಾಯುದ್ಧದ ಗೆಲುವು ತಾತ್ಕಾಲಿಕ ಎಂದರು.

ಜೂ.28ರಿಂದ ಪ್ರತಿ ಕ್ಷೇತ್ರದಲ್ಲೂ ಕೆಂಪೇಗೌಡ ಜಯಂತಿ: ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌

ಕರ್ನಾಟಕದಲ್ಲಿ ಒಂದು ತಿಂಗಳು ಹೆಚ್ಚುವರಿ ಅಭಿಯಾನ: ದೇಶದಲ್ಲಿ ಈಗ ಯುಪಿಎ ಅವಧಿಯ ಸ್ಕ್ಯಾಮ್‌ ವರ್ಸಸ್‌ ಪ್ರಧಾನಿ ನರೇಂದ್ರ ಮೋದಿ ಆಡಳಿತದ ಸ್ಕೀಂ ಹೆಚ್ಚಿನ ಸುದ್ದಿಯಲ್ಲಿದೆ. ದೇಶವನ್ನಾಳಿದ ಕಾಂಗ್ರೆಸ್‌ ಈವರೆಗೆ ಹಗರಣ ಹಾಗೂ ಭ್ರಷ್ಟಾಚಾರಗಳಲ್ಲಿ ಕಾಲ ಕಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಒಂಭತ್ತು ವರ್ಷಗಳಲ್ಲಿ 30 ಲಕ್ಷ ಕೋಟಿ ರು.ಗಳ ಯೋಜನೆಗಳನ್ನು ಜನರಿಗೆ ತಲುಪಿಸಿದ್ದಾರೆ. ಈ ಬಗ್ಗೆ ಬಿಜೆಪಿ ಪ್ರತಿ ಮನೆಗೂ ತೆರಳಿ ಒಂದು ತಿಂಗಳು ಹೆಚ್ಚುವರಿಯಾಗಿ ಅಂದರೆ ಜುಲೈ 30ರ ವರೆಗೂ ಅಭಿಯಾನ ನಡೆಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರ ಮೊದಲಿನ ರಾಜಕೀಯ ಪರಿಸ್ಥಿತಿ ಮೊದಲು ಅವಲೋಕನ ಮಾಡಬೇಕಿದೆ. ಆಗ ಹಗರಣಗಳು ಸುದ್ದಿಯಾಗುತ್ತಿತ್ತು, ಈಗ ಅಭಿವೃದ್ಧಿ ಯೋಜನೆಗಳು ಸುದ್ದಿಯಾಗುತ್ತಿವೆ. ಸ್ಕ್ಯಾ‌ಮ್‌ ವರ್ಸಸ್‌ ಸ್ಕೀಮ್‌ ಈಗ ಸುದ್ದಿಯಲ್ಲಿದ್ದು, ಅಭಿವೃದ್ಧಿ ಮೂಲಕ ಬಿಜೆಪಿ ಸುದ್ದಿಯಲ್ಲಿದೆ. ಒಂಭತ್ತು ವರ್ಷಗಳಲ್ಲಿ ಇಡೀ ಜಗತ್ತಿನಲ್ಲಿ ಭಾರತದ ಸ್ಥಾನ ಬದಲಾಗಿದೆ ಎಂದರು.

ಬೆಂಗಳೂರಿನಲ್ಲಿ ಅಪಾರ್ಟ್‍ಮೆಂಟ್‍ನ 10ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ವಿಪಕ್ಷಗಳಿಗೆ ರಾಜಕೀಯ ಭವಿಷ್ಯ ಚಿಂತೆ: ವಿಪಕ್ಷ ನಾಯಕರು ಅವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆಯಲ್ಲಿ ಇದ್ದಾರೆ. ಎಲ್ಲ ಪರಿವಾರ ವಾದಿಗಳು ಲೋಕತಂತ್ರ ಅಪಾಯದಲ್ಲಿ ಇದೆ ಎನ್ನುತ್ತಿದ್ದಾರೆ. ಆದರೆ ಮೋದಿ ಬಂದ ಮೇಲೆ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ವಂಶಪಾರಂಪರ್ಯ ರಾಜಕಾರಣ ಮಾಡುವವರಿಗೆ ಮಾತ್ರ ಅಪಾಯದಲ್ಲಿ ಇದ್ದಂತೆ ಅನಿಸುತ್ತಿದೆ. ಇವರೆಲ್ಲ ಕುಟುಂಬವನ್ನು ಪ್ರತಿನಿಧಿಸಿದರೆ ಮೋದಿ ರಾಷ್ಟ್ರ ವಾದ ಪ್ರತಿನಿಧಿಸುತ್ತಾರೆ. ಭಾರತಕ್ಕೆ ಇಡೀ ಜಗತ್ತಿನಲ್ಲಿ ಬಲ ಬಂದಿದೆ, ಬಿಜೆಪಿ ಸರ್ಕಾರ ಇದನ್ನು ಮಾಡಿದೆ. ದೇಶವನ್ನು ಉರಿಸುವ ಪ್ರಯತ್ನವನ್ನು ಬಹಳಷ್ಟುಮಂದಿ ಮಾಡುತ್ತಿದ್ದಾರೆ. ಆದರೆ ಉರಿಯುತ್ತಿದ್ದ ಕಾಶ್ಮೀರವನ್ನೇ ಮೋದಿ ನಿಯಂತ್ರಣಕ್ಕೆ ತಂದಿದ್ದಾರೆ. ಜಾಗತಿಕ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಗಲಾಟೆಗಳು, ಉಗ್ರ ಕೃತ್ಯ ನಡೆಯುತ್ತಿಲ್ಲ. ಟೂಲ್‌ ಕಿಟ್‌ ರಾಜಕಾರಣ ಹಾಗೂ ಅಸಹಿಷ್ಣು ಮಾನಸಿಕತೆ ಇರುವ ಮಂದಿಯ ಷಡ್ಯಂತರ ನಡೆಯುತ್ತಿದೆ ಎಂದರು.

Latest Videos
Follow Us:
Download App:
  • android
  • ios