'ಕಾಂಗ್ರೆಸ್ ಪಕ್ಷ ಟೀಕಿಸಿದ ಸಿದ್ದರಾಮಯ್ಯ ಆ ಪಕ್ಷಕ್ಕೆ ಹೋದ್ರು'

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಟೀಕಿಸಿ ಆ ಪಕ್ಷಕ್ಕೆ ಹೋದ್ರು, ಸುಳ್ ಹೇಳೋದ್ರಲ್ಲಿ ಅವರು ನಿಸ್ಸೀಮರು ಎಂದು ನಾಯಕರೋರ್ವರು ವಾಗ್ದಾಳಿ ನಡೆಸಿದ್ದಾರೆ. 

BJP Leader CT Ravi Slams Congress Leader Siddaramaiah snr

ಚಿಕ್ಕಮಗಳೂರು (ಡಿ.01): ಕಾಂಗ್ರೆಸ್‌ ಪಕ್ಷಕ್ಕೆ ಸುಳ್ಳೇ ಮನೆ ದೇವರು. ಮಾಜಿ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು. 

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವನ್ನು ಟೀಕಿಸಿ, ಅದೇ ಪಕ್ಷಕ್ಕೆ ಹೋದ ನಂತರ ಸಿದ್ದರಾಮಯ್ಯ ಅವರು ಸಹ ಸುಳ್ಳನ್ನೇ ಮನೆದೇವರನ್ನಾಗಿ ಮಾಡಿಕೊಂಡಿದ್ದಾರೆ. 

ಸಿಎಎ ವಿರುದ್ಧ ಭಯ ಹುಟ್ಟಿಸಿ ಮುಸ್ಲಿಂರನ್ನು ಬೀದಿಗೆ ಇಳಿಸಿದರು. ಕೇಂದ್ರದ ನೂತನ ಕೃಷಿ ಕಾಯಿದೆಯ ಬಗ್ಗೆಯೂ ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್‌ಗೆ ಸುಳ್ಳೇ ಮನೆದೇವರು ಎಂದು ಟೀಕಿಸಿದರು. 

ಬೇಲೂರಿನಿಂದ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಈಗಲೇ ಫಿಕ್ಸ್ : ಗೆಲುವು ಫಿಕ್ಸ್ ಎಂದ ವಿಜಯೇಂದ್ರ ...

ಖ್ಯಾತ ನಟ ರಜನಿಕಾಂತ್‌ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿ, ರಜನಿಕಾಂತ್‌ ಅವರು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬುದು ಕಳೆದ 10 ವರ್ಷದಿಂದ ಕೇಳಿ ಬರುತ್ತಿರುವ ಮಾತು. ಅವರು ನಿರ್ಣಯ ಮಾಡದೆ ನಾವು ಪ್ರತಿಕ್ರಿಯಿಸುವುದು ಸಮಂಜಸವಲ್ಲ ಎಂದರು.

Latest Videos
Follow Us:
Download App:
  • android
  • ios