ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ: ತಮ್ಮದೇ ಪಕ್ಷದ ಶಾಸಕರೊಬ್ಬರಿಗೆ ಸಿಟಿ ರವಿ ರಾಜೀನಾಮೆ ಸವಾಲು
* ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಶಾಸಕರ ನಡುವೆ ಶುರುವಾಯ್ತು ಟಾಕ್ ವಾರ್
* ಎಂಪಿ ಕುಮಾರಸ್ವಾಮಿಗೆ ರಾಜೀನಾಮೆ ಸವಾಲು ಹಾಕಿದ ಸಿಟಿ ರವಿ
*ಅತಿ ಹೆಚ್ಚು ಅನುದಾನ ಹೋಗದಿದ್ದರೇ ನಾನು ರಾಜೀನಾಮೆ ಕೊಡ್ತೀನಿ. ಅವರು. ಕೊಡುತ್ತಾರೆಯೇ..? ಎಂದ ರವಿ
ಚಿಕ್ಕಮಗಳೂರು, (ಆ.13): ಒಂದೇ ಜಿಲ್ಲೆಯ ಒಂದೇ ಪಕ್ಷದ ಶಾಸಕರಾದ ಸಿಟಿ ರವಿ ಹಾಗೂ ಎಂಪಿ ಕುಮಾರಸ್ವಾಮಿ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಹೌದು..ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ತಮ್ಮದೇ ಪಕ್ಷದ ಮೂಡಿಗೇರೆ ಶಾಸಕ ಎಂಪಿ ಕುಮಾರಸ್ವಾಮಿಗೆ ರಾಜೀನಾಮೆ ಸವಾಲು ಹಾಕಿದ್ದಾರೆ.
"
ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕನಿಂದಲೇ ಧರಣಿ: ಮೂಡಿಗೆರೆ ಶಾಸಕನ ಪ್ರತಿಭಟನೆ!
ಇಂದು (ಆ.13) ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ನಾನು ಸಚಿವನಾಗಿದ್ದಾಗ ಅತೀ ಹೆಚ್ಚು ಅನುದಾನ ಕೊಟ್ಟಿರುವುದು ಮೂಡಿಗೆರೆಗೆ. ಅತಿ ಹೆಚ್ಚು ಅನುದಾನ ಹೋಗದಿದ್ದರೇ ನಾನು ರಾಜೀನಾಮೆ ಕೊಡ್ತೀನಿ. ಅವರು. ಕೊಡುತ್ತಾರೆಯೇ..? ಎಂದು ಎಂ.ಪಿ. ಕುಮಾರಸ್ವಾಮಿಗೆ ಪ್ರಶ್ನಿಸಿದರು.
ಕುಮಾರಸ್ವಾಮಿ ಮನಸ್ಸಲ್ಲಿ ಏನೋ ಇಟ್ಕೊಂಡು, ಏನೋ ಮಾತನಾಡ್ತಿದ್ದಾರೆ. ಕುಮಾರಸ್ವಾಮಿ ಮೊದಲು ತಮ್ಮ ಕ್ಷೇತ್ರದ ವ್ಯಾಪ್ತಿಯನ್ನ ತಿಳಿದುಕೊಳ್ಳಲಿ. ನಾನು ಸಚಿವನಾಗಿದ್ದ ವೇಳೆ ಮೂಡಿಗೆರೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದೇನೆ. ಅನುಮಾನವಿದ್ದರೇ, ಜಿಲ್ಲಾಧಿಕಾರಿಗಳ ಬಳಿ ದಾಖಲೆ ತೆಗೆಸಿ ನೋಡಲಿ ಎಂದು ಗರಂ ಆಗಿ ಹೇಳಿದರು.
ಸಿದ್ದರಾಮಯ್ಯ ಭೇಟಿಗೆ ಸ್ಪಷ್ಟನೆ ಕೊಟ್ಟ ಬಿಜೆಪಿ ಶಾಸಕ
ಕುಮಾರಸ್ವಾಮಿ ಅವರು ಉದ್ದೇಶವೇ ಬೇರೆ ಇದೆ. ಅವರಿಗೆ ಶಕ್ತಿ ಮೀರಿ ಅನುದಾನವನ್ನು ಕೊಟ್ಟಿದ್ದೇನೆ. ಅನುದಾನ ಕೊಟ್ಟಿಲ್ಲ ಅಂದರೇ, ನಾನು ರಾಜೀನಾಮೆಗೆ ಸಿದ್ದ. ಅವರು ಸಿದ್ದನಾ ಎಂದು ಸವಾಲೆಸೆದಿರುವ ಸಿ.ಟಿ. ರವಿ, ಕುಮಾರಸ್ವಾಮಿ ಗೆಲುವಿಗೆ ನನ್ನ ಒಂದು ಸಹ ಪಾತ್ರವಿದೆ. ನನ್ನ ಕುಟುಂಬದ ವೋಟ್‌ಗಳು ಮೂಡಿಗೇರೆ ಕ್ಷೇತ್ರಕ್ಕೆ ಬರುತ್ತವೆ. ನಾವು ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹಾಕಲ್ಲ ಎಂದು ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.
ಸಿ.ಟಿ ರವಿ ಅವರಿಗೂ ನನಗೂ ಯಾವತ್ತಿಗೂ ಚೆನ್ನಾಗಿಲ್ಲ. ರಾಜಕೀಯಕ್ಕೆ ಬಂದಾಗಿಂದಲೂ ಚೆನ್ನಾಗಿಲ್ಲ. ಮತದಾರರ ಜೊತೆ ನಾನು ಚೆನ್ನಾಗಿದ್ದೇನೆ. ಬೇರೆಯವರ ಜೊತೆಗೂ ಭಿನ್ನಾಭಿಪ್ರಾಯ ಇರಬಹುದು. ನಾನೇನು ದೇವರಲ್ಲ, ಆದರೆ ನನ್ನ ನಾಯಕತ್ವ ಸಾಬೀತಾಗಿದೆ. ನಾನು ನಾಯಕತ್ವ ವಹಿಸಿದ ಯಾವುದೇ ಚುನಾವಣೆಗಳು ಸೋತಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು.