Chikkamagaluru: ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಪಾತ್ರ ಕಂಡುಬಂದಿಲ್ಲ: ಸಿ.ಟಿ.ರವಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನು ಮೂಡಿಸಿದೆ. ಈ ಪ್ರಕರಣದ ಬಗ್ಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಚಿಕ್ಕಮಗಳೂರಿನಲ್ಲಿ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.13): ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ಆತ್ಮಹತ್ಯೆ (Suicide) ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನು ಮೂಡಿಸಿದೆ. ಈ ಪ್ರಕರಣ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಸಾಕಷ್ಟು ತಲ್ಲಣವನ್ನೇ ಉಂಟುಮಾಡಿದೆ. ಪ್ರತಿಪಕ್ಷವಾದ ಕಾಂಗ್ರೆಸ್ (Congress) ಸರ್ಕಾರದ ವಿರುದ್ದ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದೆ. ಇದರ ನಡುವೆ ಕಾಂಗ್ರೆಸ್ ಪಕ್ಷದ ಕೇಂದ್ರ, ರಾಜ್ಯ ನಾಯಕರು ಸಚಿವ ಈಶ್ವರಪ್ಪ (KS Eshwarappa) ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಚಿಕ್ಕಮಗಳೂರಿನಲ್ಲಿ (Chikkamagaluru) ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ಮುಖ್ಯಮಂತ್ರಿ, ಈಶ್ವರಪ್ಪ ಸೂಕ್ತ ನಿರ್ಣಾಯ ಕೈಗೊಳ್ಳುತ್ತಾರೆ: ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಹೆಸರು ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ಸರ್ಕಾರ, ಸಚಿವ ಈಶ್ವರಪ್ಪ ವಿರುದ್ದ ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದರ ನಡುವೆ ಆಡಳಿತ ಪಕ್ಷವಾದ ಬಿಜೆಪಿ ಈ ಪ್ರಕರಣ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರತಿಪಕ್ಷಗಳು ರಾಜೀನಾಮೆ ಕೇಳೋದು ಸ್ವಾಭಾವಿಕ, ನಾವು ವಿಪಕ್ಷದಲ್ಲಿದ್ರು ಅದೇ ಮಾಡ್ತಾ ಇದ್ವಿ, ಆದರೆ ಪ್ರಕರಣದಲ್ಲಿ ಮೇಲ್ನೋಟಕ್ಕೆ ಈಶ್ವರಪ್ಪ ಪಾತ್ರ ಕಂಡುಬಂದಿಲ್ಲ ನಾನು ಹೇಳಿದರೆ ಯಾರು ನಂಬಲ್ಲ ಎಂದರು. ನಾನು ತನಿಖಾ ಏಜೆನ್ಸಿ ಅಲ್ಲ, ಕಾಂಗ್ರೆಸ್ ಸೇರಿದಂತೆ ಯಾರೇ ಸಾರ್ವಜನಿಕರು ದಾಖಲೆ ಇದ್ದರೆ ತನಿಖಾ ಏಜೆನ್ಸಿ ಮುಂದೆ ಸಲ್ಲಿಸಲಿ ಎಂದು ತಿಳಿಸಿದ್ದರು. ತನಿಖೆಗೆ ಈಗಾಗಲೇ ಸರ್ಕಾರ ಆದೇಶ ಮಾಡಿದ್ದು ತಪ್ಪು ಮಾಡಿದವರು ಶಿಕ್ಷೆ ಅನುಭವಿಸ್ತಾರೆ ಎಂದರು.
ಸಂತೋಷ್ ಆತ್ಮಹತ್ಯೆ ಪ್ರಕರಣ: ಸಿಎಂ ಕಂಡಲ್ಲೆಲ್ಲಾ ಘೇರಾವ್ ಹಾಕ್ತೀವಿ, ಸುರ್ಜೇವಾಲಾ
ಪಕ್ಷದಿಂದ ರಾಜೀನಾಮೆಗೆ ಯಾವುದೇ ಸೂಚನೆ ಇಲ್ಲ: ಸಚಿವ ಈಶ್ವರಪ್ಪ ರಾಜೀನಾಮೆಗೆ ಪಕ್ಷ ಈ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ, ಆದ್ರೆ ಕೆಲವೊಮ್ಮೆ ಸಾರ್ವಜನಿಕ ಜೀವನದಲ್ಲಿ ಅನಿರ್ವಾಯ ತಲೆಕೊಡುವ ಪರಿಸ್ಥಿತಿ ಬರುತ್ತೆ, ಈ ಪ್ರಕರಣದಲ್ಲೂ ಮುಖ್ಯಮಂತ್ರಿ, ಈಶ್ವರಪ್ಪ ಸೂಕ್ತ ನಿರ್ಣಾಯ ಕೈಗೊಳ್ಳುತ್ತಾರೆ. ಮುಖ್ಯಮಂತ್ರಿ ಇದ್ದಾರೆ, ಸ್ವತಃ ಈಶ್ವರಪ್ಪ ಇದ್ದಾರೆ ವಯಸ್ಸು ಅನುಭವ ಎರಡರಲ್ಲೂ ದೊಡ್ಡವರು ಅವರು ಸಾರ್ವಜನಿಕ ಸಂಶಯ ದೂರಾಗಿಸಲು ಸಿಎಂ, ಈಶ್ವರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು
ಸಂತೋಷ್ ಪಾಟೀಲ್ ಸಾವು ದುರದೃಷ್ಟಕರ: ಉಡುಪಿಯಲ್ಲಿ ಆತ್ಮಹತ್ಯೆ ಶರಣಾಗಿರುವ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಸಿ,ಟಿ ರವಿ ಸಂತಾಪ ವ್ಯಕ್ತಪಡಿಸಿದ್ದಾರೆ.ಸಂತೋಷ್ ಪಾಟೀಲ್ ಸಾವು ದುರದೃಷ್ಟಕರವಾಗಿದ್ದು, ಯಾವುದೇ ಜೀವಕ್ಕೂ ಬೆಲೆ ಇರುತೆ. ಆದ್ರೆ ಅವರು ಅತ್ಮಹತ್ಯೆ ದಾರಿ ಹಿಡಿಯಬಾರದಿತ್ತು ಎಂದು ಸಂತಾಪವನ್ನು ಹೊರಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಸಚಿವ ಈಶ್ವರಪ್ಪ ವಿರುದ್ದ ಈ ಹಿಂದೆ ಸಂತೋಷ್ ಪತ್ರ ಬರೆದಾಗ ಈಶ್ವರಪ್ಪ ಜೊತೆಗೆ ನಾನು ಮಾತನಾಡಿದ್ದೆ.
ಈ ಬಗ್ಗೆ ಈಶ್ವರಪ್ಪನವರು ಕೂಡ ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಸಂತೋಷ್ ಯಾವುದೇ ವರ್ಕ್ ಅರ್ಡರ್ ತೆಗೆದುಕೊಂಡಿಲ್ಲ, ಸ್ಯಾಂಕ್ಷನ್ ಅರ್ಡರ್ ಇಲ್ಲ ಎಂದು ಮಾಹಿತಿ ನೀಡಿದ್ದರು. ಜೊತೆಗೆ ಅಧಿಕಾರಿಗಳ ಹತ್ರ ಬಳಿ ವಿಚಾರಿಸಿದ್ದಾಗ ಅವರು ಕೆಲಸ ಮಾಡಿದ್ದೇನೆ ಅಂತಿದ್ದಾರೆ ವಿತ್ ಔಟ್ ವರ್ಕ್ ಅರ್ಡರ್ ಹೇಗೆ ಪೆಮೆಂಟ್ ಮಾಡೋದು ಹೇಗೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಈಶ್ವರಪ್ಪ ಅವರು ಗಮನಕ್ಕೆ ತಂದಿದ್ದರು. ಈ ಹಿನ್ನಲೆಯಲ್ಲಿ ನೋಡಿದ್ರೆ ಜನರ ಪ್ರೀತಿಗಳಿಸಲು ಜಾತ್ರೆ ಅಂತಾ ಕೆಲಸ ಮಾಡಿರುವ ಸಾಧ್ಯತೆಯಿದೆ.
ಸಂತೋಷ್ ಆತ್ಮಹತ್ಯೆ ಕುರಿತು ವರದಿ ಕೇಳಿದ ಜೆ.ಪಿ. ನಡ್ಡಾ
ಆದರೆ ಸರ್ಕಾರ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು.ವರ್ಕ್ ಅರ್ಡರ್ ಇಲ್ಲದೆ ಬಿಲ್ ಕೊಡೋಕೆ ಸಾಧ್ಯವಿಲ್ಲವೆಂದರು. ಯಾರ ಮಾತು ಕೇಳಿ ಕೆಲಸ ಮಾಡಿರುವ ಸಾಧ್ಯತೆ ಇದೆ ಈ ಬಗ್ಗೆ ತನಿಖೆಯಿಂದ ಗೊತ್ತಾಗಬೇಕು ಅಲ್ಲದೆ ಕೋಟ್ಯಾಂತರ ರೂ ಕೆಲಸವನ್ನು ಪಿಸ್ ವರ್ಕ್ ಕೆಲ್ಸ ಮಾಡಿಸಿದ್ದಾರೆ ಎಂದು ಹೇಳೋಕಾಗಲ್ಲ ವರ್ಕ್ ಅರ್ಡರ್ ಇಲ್ಲದೆ ಕೆಲ್ಸ ಯಾಕೆ ಮಾಡಿದ್ರು ಹೇಗೆ ಮಾಡಿದ್ರು ಈ ಸಮಗ್ರ ತನಿಖೆ ನಡೆಯಬೇಕೆಂದು ಆಗ್ರಹಿಸಿದರು.