* ನೆದಹರು ದೇಶ ವಿಭಜನೆ ಮಾಡಿದ ಉದಾರವಾದಿ* ದೇಶ ವಿಭಜನೆ ತಡೆಯಲು ಮಹಾತ್ಮ ಗಾಂಧಿ ಏನ್ ಮಾಡಿದ್ರು?* ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರಶ್ನೆ

ನವದೆಹಲಿ, (ಮೇ 30) : ನೆಹರು ದೇಶ ವಿಭಜನೆ ಮಾಡಿದ ಉದಾರವಾದಿ. ದೇಶ ವಿಭಜನೆ ತಡೆಯಲು ಮಹಾತ್ಮ ಗಾಂಧಿ ಏನ್ ಮಾಡಿದ್ರು? ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರಶ್ನಿಸಿದ್ದಾರೆ.

ಇಂದು(ಸೋಮವಾರ) ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ಎರಡನೇ ಮಹಾಯುದ್ಧದ ನಂತರ ತನ್ನ ಸಾಮರ್ಥ್ಯ ಕಳೆದುಕೊಂಡಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದ ದೇಶಗಳಿಗೂ ಸ್ವಾತಂತ್ರ್ಯ ನೀಡಿದ್ದಾರೆ. ಅದರಂತೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ತು. ದೇಶ ವಿಭಜನೆ ತಡೆಯಲು ಮಹಾತ್ಮ ಗಾಂಧಿ ಏನ್ ಮಾಡಿದ್ರು? ಎಂದರು

"

ಗಾಂಧಿವಾದದಲ್ಲಿ ದೌರ್ಬಲ್ಯಗಳು ಇವೆ. ಒಳ್ಳೆಯ ಗುಣಗಳು ಇವೆ. ಗಾಂಧಿ ಜನಸಮೂಹ ಜೋಡಿಸಿರು, ಕ್ರಾಂತಿಕಾರಿಗಳು ಬ್ರಿಟಿಷರ ಎದೆ ನಡುಗಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಏನು ಸಿಕ್ತು ? ಅತ್ಯಾಚಾರ, ಮತಾಂತರ ಬಿಟ್ಟು ಬೇರೆನು ಸಿಕ್ತು? ಸೇನೆಯಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಾಗಿದ್ದರೇ ಕಾಶ್ಮೀರ, ದೆಹಲಿ ಭಾರತ ಯಾವುದು ಉಳಿಯುತ್ತಿರಲಿಲ್ಲ. ಇದಕ್ಕಾಗಿ ಹಿಂದೆ ವೀರ ಸಾರ್ವರಕರ್ ಸೇನೆ ಸೇರುವಂತೆ ಕರೆ ನೀಡಿದ್ದರು ಎಂದು ಹೇಳಿದರು.

RSS ಮೂಲ ಪ್ರಶ್ನಿಸಿದ ಸಿದ್ದುಗೆ ಬಿಜೆಪಿ ತರಾಟೆ: ದೇಶ ಕಟ್ಟುವ ಸಂಸ್ಥೆ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ!

ಇನ್ನು ಇದೇ ವೇಳೆ ಸಿದ್ದರಾಮಯ್ಯ ಅವರೇ ಸೋನಿಯಾ ಗಾಂಧಿ ಅವರು ಯಾವ ಮೂಲ ಅಂಥ ಹೇಳೋ ಧೈರ್ಯ ಇದೆಯಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿರುಗೇಟು ನೀಡಿದ್ದಾರೆ.

 ಸತ್ತು ಹೋಗಿದ್ದ ಆರ್ಯ-ದ್ರಾವಿಡ ವಿಷಯಕ್ಕೆ ಜೀವಕ್ಕೆ ತುಂಬಿದ್ದಾರೆ. ಐರಿಷ್ ಪಾದ್ರಿ ಇಂಹದೊಂದು ವಾದ ಮಂಡಿಸಿದ್ರು. ಉತ್ತರ ಹಾಗೂ ದಕ್ಷಿಣದವರ ಡಿಎನ್‌ಎ ಒಂದೇ. ಯಾವುದನ್ನು ಅದುಮಿಡಲಿಕ್ಕೆ ಸಿದ್ದರಾಮಯ್ಯ ಬಯಸುತ್ತಿದ್ದಾರೆ? ಶ್ರೀರಾಮನನ್ನು ಆರ್ಯನೋ..? ದ್ರಾವಿಡ ನೋ..? ಆದರೆ ನಿವೇಕೆ ನಿಮ್ಮ ಹೆಸರಲ್ಲಿ ಸಿದ್ದ'ರಾಮ'ಯ್ಯ ಅಂತ ಹೆಸರಿಟ್ಟುಕೊಂಡಿರಿ..? ಎಂದು ಪ್ರಶ್ನಿಸಿದರು.

ಬಣ್ಣ,ಜಾತಿ ಇಟ್ಟುಕೊಂಡು ವಾದ ಮಾಡಲು ಆಗುತ್ತೋ..?
ಯಾವ ಆಧಾರ ಇಟ್ಟುಕೊಂಡು ಆರ್ಯ ದ್ರಾವಿಡ ಮಾಡುತ್ತಿದ್ದಾರೆ..? ನಿಮ್ಮ ದೃಷ್ಟಿಯಲ್ಲಿ ವಾಲ್ಮೀಕಿ ಯಾರು.? ಮಹಾಭಾರತ ರಚಿಸಿದ ವ್ಯಾಸ ಯಾರು.? ಚಂದ್ರಗುಪ್ತ ಮೌರ್ಯನನ್ನು ಯಾರಿಗೆ ಹೋಲಿಸ್ತಿರಿ? ಕಾಳಿದಾಸ, ಅಹಲ್ಯಬಾಯಿ ಹೋಳ್ಕರ್ ರನ್ನು ಯಾರಿಗೆ ಸೇರಿಗೆ ಸೇರಿಸ್ತಿರಿ ನಿಮ್ಮದು ಅರೆಬರೆ ತಿಳುವಳಿಕೆ, ಎಡಬಿಡಗಿಂತನ. ಆರ್ಯ ಎನ್ನುವುದು ಜನಾಂಗ ಸೂಚಕವಲ್ಲ. ಸೀತೆ ರಾಮನನ್ನು ಆರ್ಯ ಎಂದು ಕರೆದಿದ್ದರು. ಆರ್ಯ ಅಂದ್ರೆ ಶ್ರೇಷ್ಠ ಅಂಥ. ಒಡೆದು ಆಳುವ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಉತ್ತರ ದಕ್ಷಿಣದಲ್ಲಿ ಶಿವನನ್ನು ,ವಿಷ್ಣುವನ್ನು ಪೂಜೆಸುತ್ತಾರೆ. ರಾಮ,ಶಿವ,ಕೃಷ್ಣ ಕಪ್ಪು ಅವರನ್ನು ಯಾರಿಗೆ ಹೋಲಿಸ್ತಿರಿ..? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.

ಮೆಂಟಲ್ ಗಿರಾಕಿ ಅಂದುಕೊಳ್ತಾರೆ : 
ಸಿದ್ದರಾಮಯ್ಯ ಅವರಿಗೆ ಪಕ್ಷದೊಳಗೆ ಆಗುತ್ತಿರುವ ಪೈಪೋಟಿಯನ್ನು ಎದುರಿಸಲಾಗುತ್ತಿಲ್ಲ. ನಾನೊಬ್ಬ ಆರ್ ಎಸ್ ಎಸ್ ಸೇವಕನಾಗಿ ನಿಮ್ಮಗೆ ಉತ್ತರ ಕೊಡುತ್ತೇನೆ. ಆರ್ ಎಸ್ ಎಸ್ ಪೇರಣೆಯನ್ನು ಜನರು ಪಡೆಯುತ್ತಿದ್ದಾರೆ. ಆರ್ ಎಸ್ ಎಸ್ ಬಗ್ಗೆ ನೆಹರು ಅವರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಚೀನಾ ಯುದ್ದದಲ್ಲಿ ಮಾಡಿದ ಸಹಾಯಕ್ಕೆ ಆರ್ ಎಸ್ ಎಸ್ ಗೆ ರಿಪಬ್ಲಿಕ್ ಡೇ ಪೆರೇಡ್ ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ನೂರಾರು ವಿದ್ಯಾಸಂಸ್ಥೆಗಳನ್ನು ಕಟ್ಟಿ ವಿದ್ಯೆ ನೀಡುತ್ತಿದ್ದಾರೆ. ದೇಶದ ಪ್ರಧಾನಿ, ರಾಷ್ಟ್ರಪತಿ ಆರ್ ಎಸ್ ಎಸ್ ನಿಂದ ಬಂದವರು ಎಂದರು. 

ಸಿದ್ದರಾಮಯ್ಯ ಅವರೇ ಕರ್ನಾಟಕದ ಮರ್ಯಾದೆ ಕಳೆಯೋ ಕೆಲಸ ಮಾಡಬೇಡಿ. ಹೀಗೆ ಮಾತಾಡಿದರೆಬಯಾವುದೋ ಮೆಂಟಲ್ ಗಿರಾಕಿ ಎಂದು ಜನರು ಹೇಳುತ್ತಾರೆ. ಯಾರೋ ತಲೆ ತಿರುಕರು ಹೇಳಿಕೊಟ್ಟಿದ್ದನ್ನು ಹೇಳಬೇಡಿ. ನಿಮ್ಮ ಹೇಳಿಕೆಗಳಿಗೆ ಆಧಾರ ಪ್ರಬುದ್ಧತೆ ಇರಬೇಕು.
ಆರ್ ಎಸ್ ಎಸ್ ಸಂಸ್ಕಾರ ಕೊಡುವ ಕೆಲಸ ಮಾಡುತ್ತೆ. ಮಹಮದ್ ಅಲಿ ಜಿನ್ನಾ ಕೂಡ ಕಾಂಗ್ರೆಸ್ ಮೂಲದವರೇ. ಹಾಗಾದ್ರೆ ದೇಶ ಇಬ್ಬಾಗ ಮಾಡಿದ್ರಲ್ಲ ಎಂದು ಹೇಳಿದರು.