Asianet Suvarna News Asianet Suvarna News

'3,666 ಎಕರೆ ಜಾಗ ಬರೀ ₹20 ಕೋಟಿಗೆ ಜಿಂದಾಲ್‌ಗೆ ಮಾರಾಟ, 'ಇದೇನು ನಿಮ್ಮಪ್ಪನ ಮನೆ ಆಸ್ತಿನಾ?' ಸಿಎಂ ವಿರುದ್ಧ ಬೆಲ್ಲದ್ ಗರಂ

ಕಳೆದ ಹದಿನೈದು ತಿಂಗಳಿಂದ ಒಂದಾದ ಮೇಲೊಂದು ಕಾಂಗ್ರೆಸ್ ಸರ್ಕಾರದ ಹಗರಣಗಳು ನಡೆಯುತ್ತಿವೆ. ಅವೆಲ್ಲವೂ ಬಯಲಿಗೆ ಬರುತ್ತಿವೆ.  ಹದಿನೈದು ತಿಂಗಳಲ್ಲೇ ಅತಿ ಭ್ರಷ್ಟ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಎಂಬ ಕೀರಿಟವನ್ನು ಜನರೇ ಕೊಟ್ಟಿದ್ದಾರೆ ಎಂದ ವಿಧಾನ ಪರಿಷತ್ ವಿಪಕ್ಷ ನಾಯಕ ಅರವಿಂದ ಬೆಲ್ಲದ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

BJP leader arvind bellad outraged against cm siddaramaiah about karnataka cabinet again decides to sell 3667 acres to jsw steel rav
Author
First Published Aug 24, 2024, 3:30 PM IST | Last Updated Aug 24, 2024, 3:31 PM IST

ಧಾರವಾಡ (ಆ.24): ಕಳೆದ ಹದಿನೈದು ತಿಂಗಳಿಂದ ಒಂದಾದ ಮೇಲೊಂದು ಕಾಂಗ್ರೆಸ್ ಸರ್ಕಾರದ ಹಗರಣಗಳು ನಡೆಯುತ್ತಿವೆ. ಅವೆಲ್ಲವೂ ಬಯಲಿಗೆ ಬರುತ್ತಿವೆ.  ಹದಿನೈದು ತಿಂಗಳಲ್ಲೇ ಅತಿ ಭ್ರಷ್ಟ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಎಂಬ ಕೀರಿಟವನ್ನು ಜನರೇ ಕೊಟ್ಟಿದ್ದಾರೆ ಎಂದ ವಿಧಾನ ಪರಿಷತ್ ವಿಪಕ್ಷ ನಾಯಕ ಅರವಿಂದ ಬೆಲ್ಲದ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವ ಸನ್ನಿವೇಶ ಹತ್ತಿರದಲ್ಲಿದೆ. ಆದ್ರೆ ಸಿದ್ದರಾಮಯ್ಯ ಕುರ್ಚಿ ಹೋಗುವ ಮುನ್ನ ಜಿಂದಾಲ್ ಕಂಪನಿಗೆ ಬೆಲೆಬಾಳು ಭೂಮಿಯನ್ನ ಕಡಿಮೆ ಬೆಲೆಗೆ ಕೊಡುವ ಮೂಲಕ ಮತ್ತೊಂದು ಹಗರಣ ಮೈಮೇಲೆ ಎಳೆದುಕೊಂಡಿದ್ದಾರೆ. ಅಂದು ವಿರೋಧ ಮಾಡಿದ್ದ ಹೆಚ್‌ಕೆ ಪಾಟೀಲ್ ಇಂದು ಪ್ರೆಸ್ ಬ್ರೀಫ್ ಮಾಡಿದ್ದಾರೆ. ಜೆಎಸ್‌ಡಬ್ಲ್ಯು ಅಗ್ರಿಮೆಂಟ್ ಮಾಡಿಕೊಂಡಿದೆ. ಪುರಾತನ ಕಾಲದಿಂದ ಬಂದ ಮಿನರಲ್ ಆಸ್ತಿಯನ್ನು ಎಕರೆಗೆ 1ಲಕ್ಷ 20ಸಾವಿರಕ್ಕೆ ಕೊಡ್ತಿದ್ದಾರೆ. ಇಷ್ಟು ಕಡಿಮೆ ಬೆಲೆಗೆ ಕೊಡ್ತಿರಲ್ಲ ಸಿದ್ದರಾಮಯ್ಯನವರೇ ಇದೇನು ನಿಮ್ಮಪ್ಪನ ಮನೆ ಆಸ್ತಿಯೇನು? ಎಂದು ಹರಿಹಾಯ್ದರು.

ಸಿದ್ದು ರಣವ್ಯೂಹ ರೆಡಿ, ಕುರ್ಚಿ ಉಳಿಸಿಕೊಳ್ಳಲು ದೆಹಲಿ ಚದುರಂಗ: ಗಟ್ಟಿಯಾಗುತ್ತಾ ಸಿಂಹಾಸನ..?

ಭೂಮಿಯನ್ನು ಕಡಿಮೆ ಬೆಲೆ ಮಾರಾಟ ಮಾಡಿ ಒಳ ಒಪ್ಪಂದ ಮಾಡಿಕೊಂಡು ಲೂಟಿ ಹೊಡೆಯುತ್ತಿದ್ದಾರೆ. ಇಂದಿನ ದರಕ್ಕೆ ಮಾರಾಟ ಮಾಡಿದ್ರೆ ನಮ್ಮ  ವಿರೋಧ ಇಲ್ಲ. ಜಡ್ಜಮೆಂಟ್ ಪ್ರಕಾರ ಇಂದಿನ ದರ ಎಷ್ಟಿದೆಯೋ ಆ ಬೆಲೆ ಭೂಮಿ ಮಾರಾಟ ಮಾಡಬೇಕು. ಆದರೆ 3,666 ಎಕರೆ ಜಾಗ ಬರೀ 20 ಕೋಟಿಗೆ ಮಾರಾಟ ಮಾಡ್ತೀದ್ದೀರಿ. ನೀವು ಮತ್ತೆ ಸಿಎಂ ಆಗೊಲ್ಲ ಅಂತಾ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಿದ್ದೀರಾ? ನಾನು ನಮ್ಮ ಪಕ್ಷ ಇದರ ವಿರುದ್ಧ ತೀವ್ರವಾಗಿ ಹೋರಾಟ ಮಾಡುತ್ತೇವೆ. ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡ್ತೇವೆ. ವಯನಾಡಿನಲ್ಲಿ ಏನಾಯ್ತು ಗಮನಿಸಿದ್ದೀರಿ.  ಸಿದ್ದರಾಮಯ್ಯ ತಮ್ಮ ನಿರ್ಧಾರ ಕೂಡಲೇ ಹಿಂಪಡೆದರೆ ಸರಿ. ಇಲ್ಲವಾದರೆ ಇದನ್ನ ತಾರ್ಕಿಕ ಅಂತ್ಯ ಕಾಣುವವರೆಗೆ ಕಾನೂನು ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ಪಕ್ಷ ಲೂಟಿ ಮಾಡುವುದರಲ್ಲಿ ನಿಸ್ಸಿಮರು. ಇದೀಗ ಜಿಂದಾಲ್ ಕೊಟ್ಟ ಭೂಮಿಯಲ್ಲಿ ಭಾರೀ ಲೂಟಿ ನಡೆದಿದೆ. ಇಲ್ಲಿದ್ರೆ ಇಷ್ಟೊಂದು ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವೇ ಇಲ್ಲ. ನಾವು ಇದನ್ನ ಬಿಡೋದಿಲ್ಲ.  ಈ ಭೂಮಿಯನ್ನ ಕೇಂದ್ರ ಸರ್ಕಾರ ಹಿಂದೆ ಸ್ಟೀಲ್ ಕಂಪನಿ ಮಾಡಲು ತೆಗೆದುಕೊಂಡ ಜಮೀನಾಗಿತ್ತು. ಕಾರ್ಖಾನೆ ಸ್ಥಗಿತೊಂಡಾಗ ಕೇಂದ್ರ ಸರ್ಕಾರ, ರಾಜ್ಯಕ್ಕೆ ಕಡಿಮೆ ಹಣದಲ್ಲಿ ನೀಡಿತ್ತು. 3.666 ಎಕರೆ ಜಮೀನು ಇದು. ಕಾಂಗ್ರೆಸ್ ಕಡಿಮೆ ದರಲ್ಲಿ ಮಾರಾಟ ಮಾಡಲು ಕೋಟ್ ಮಾಡಿತ್ತು. 1ಲಕ್ಷ 20 ಸಾವಿರ ಎಕರೆಗೆ ಮಾರಾಟಕ್ಕೆ ನಿರ್ಧಾರ ಮಾಡಿತ್ತು. ಬಳಿಕ ಯಡಿಯೂರಪ್ಪ ಸರ್ಕಾರ ಬಂದಾಗಲೂ ಜಿಂದಾಲ್‌ಗೆ ಮಾರಾಟ ಮಾಡಲು ಮುಂದಾದಾಗಲೂ ವಿರೋಧ ಮಾಡಿದೆವು, ನಾವೆಲ್ಲ ಮನವಿ ಮಾಡಿಕೊಂಡಾಗ ನಿರ್ಧಾರ ಪೆಂಡಿಂಗ್ ಇಡಲಾಯ್ತು. ಕೋರ್ಟ್ ಮೊರೆ ಹೋದಾಗ ಇಷ್ಟು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡದಂತೆ ಆದೇಶ ನೀಡಿತ್ತು. ಬಳಿಕ ಹೆಚ್ಚಿನ ಬೆಲೆಗೆ ಮಾರಾಟ ಮಾಡೋದಾಗಿ ಯಡಿಯೂರಪ್ಪ ಸರ್ಕಾರ ಸ್ಪಷ್ಟಪಡಿಸಿತ್ತು.

ಸಿದ್ದು ರೀತಿ ಪ್ರಾಸಿಕ್ಯೂಷನ್ ಪಂಜರಕ್ಕೆ ಬೀಳ್ತಾರಾ ದಳಪತಿ? ದಳಪತಿಗೆ ಖೆಡ್ಡಾ ತೋಡಿದ್ರಾ ಸಿದ್ದರಾಮಯ್ಯ?

ಇಷ್ಟಾಗಿಯೂ ಪಿಐಎಲ್ ಕೇಸ್ ಹಾಕಿದವರಿಗೆ ಅಸಮಾಧಾನ ಇದ್ದರೆ ಕೋರ್ಟ್‌ಗೆ ಬನ್ನಿ ಎಂದು ಆದೇಶ ಮಾಡಿತ್ತು. ಆದರೆ ಇದೀಗ  ಸಿದ್ದರಾಮಯ್ಯ ಸರ್ಕಾರ ಸಂಡೂರಿನಲ್ಲಿ 2ಸಾವಿರ ಎಕರೆ 1ಲಕ್ಷ 20ಸಾವಿರಕ್ಕೆ ಮಾರಾಟ ಮಾಡಲು ಮುಂದಾಗಿದೆ.  ಅದರಲ್ಲಿ 954 ಎಕರೆ ಕೆಪಿಸಿಎಲ್‌ ಜಾಗ ಜಿಂದಾಲ್ ಗೆ ಸೇರಿದೆ. ಕಡಿಮೆ ಬೆಲೆ ಮಾರಾಟ ಮಾಡದಂತೆ ಹಿಂದಿನ ಕೋರ್ಟ್ ಆದೇಶ ಇದ್ದರೂ ಒಳ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಲು ಮುಂದಾಗಿರುವ ಕಾಂಗ್ರೆಸ್. ಬೆಲೆ ಬಾಳುವ ಭೂಮಿ ಅಷ್ಟು ದುಡ್ಡಿಗೆ ಒಂದು ಎಕರೆನೂ ಸಿಗೊಲ್ಲ ಅಂತಾದ್ರಲ್ಲಿ ಸಾವಿರಾರು ಎಕರೆ ಮಾರಾಟ ಮಾಡಲು ಮುಂದಾಗಿದ್ದರೆಂದರೆ ಇದರಲ್ಲಿ ಡೀಲ್ ನಡೆದಿರೋದ್ರಲ್ಲಿ ಅನುಮಾನವೇ ಇಲ್ಲ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Latest Videos
Follow Us:
Download App:
  • android
  • ios