ಯತ್ನಾಳ್‌, ಜಾರಕಿಹೊಳಿ ಗೌಪ್ಯ ಸಭೆ?: ಅರವಿಂದ ಬೆಲ್ಲದ ಪ್ರತಿಕ್ರಿಯೆ

ಪಕ್ಷದೊಳಗೆ ಕುಳಿತು ಎಲ್ಲರೂ ಮಾತನಾಡುವ ಅವಶ್ಯಕತೆ ಇದೆ. ಅದನ್ನು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ. ರಾಷ್ಟ್ರೀಯ ಪಕ್ಷದಲ್ಲಿ ಬೇರೆ ಬೇರೆ ವಿಚಾರಗಳು ಇರುತ್ತವೆ. ಪಕ್ಷದ ಕುರಿತಾಗಿ ಅವರು ಹೇಳುವ ಕೆಲ ವಿಚಾರಗಳು ಸರಿಯಾಗಿದ್ದು, ಅವುಗಳನ್ನು ಪಕ್ಷದೊಳಗೆ ಚರ್ಚೆ ಮಾಡಲಿದ್ದೇವೆ. ಈ ವಿಚಾರಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ. ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದ ವಿಧಾನಸಭೆ ಪ್ರತಿ ಪಕ್ಷದ ಉಪನಾಯಕ ಅರವಿಂದ ಬೆಲ್ಲದ 

bjp leader aravind bellad react to basanagouda patil yatnal ramesh jarkiholi Secret Meeting grg

ಧಾರವಾಡ(ಆ.13): ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಹಾಗೂ ಮಾಜಿ ಸಂಸದ ಸಿದ್ದೇಶ್ವರ ಅವರು ಗೌಪ್ಯವಾಗಿ ಅಲ್ಲ, ಬಹಿರಂಗವಾಗಿಯೇ ಬೆಳಗಾವಿಯಲ್ಲಿ ಸಭೆ ಮಾಡಿದ್ದಾರೆ ಎಂದು ವಿಧಾನಸಭೆ ಪ್ರತಿ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದೊಳಗೆ ಕುಳಿತು ಎಲ್ಲರೂ ಮಾತನಾಡುವ ಅವಶ್ಯಕತೆ ಇದೆ. ಅದನ್ನು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ. ರಾಷ್ಟ್ರೀಯ ಪಕ್ಷದಲ್ಲಿ ಬೇರೆ ಬೇರೆ ವಿಚಾರಗಳು ಇರುತ್ತವೆ. ಪಕ್ಷದ ಕುರಿತಾಗಿ ಅವರು ಹೇಳುವ ಕೆಲ ವಿಚಾರಗಳು ಸರಿಯಾಗಿದ್ದು, ಅವುಗಳನ್ನು ಪಕ್ಷದೊಳಗೆ ಚರ್ಚೆ ಮಾಡಲಿದ್ದೇವೆ. ಈ ವಿಚಾರಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ. ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದರು.

ಮುಡಾ ಹಗರಣದಿಂದಲೇ ಸಿದ್ದು ರಾಜಕೀಯ ಅಂತ್ಯ: ಅರವಿಂದ ಬೆಲ್ಲದ

ಕಾಂಗ್ರೆಸ್‌ನಲ್ಲೂ ಒಂದು ರೀತಿಯ ಅಸಮಾಧಾನ ಇದ್ದೇ ಇದೆ. ಒಂದೊಂದು ದಿನ ಒಬ್ಬೊಬ್ಬರು ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ಇದು ಎಲ್ಲ ಪಕ್ಷಗಳಲ್ಲಿ ಇರುವ ಸಾಮಾನ್ಯ ಸಂಗತಿ ಎಂದ ಬೆಲ್ಲದ, ಈ ಹಿಂದೆ ಹಂಸರಾಜ್‌ ಭಾರದ್ವಾಜ್‌ ಅವರು ರಾಜ್ಯಪಾಲರಿದ್ದಾಗ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಆಗ ಭಾರದ್ವಾಜ್‌ ಅವರು ಸ್ಪಷ್ಟನೆ ಕೇಳದೆ ಕ್ರಮಕ್ಕೆ ಮುಂದಾಗಿದ್ದರು. ಆದರೆ ಈಗಿನ ರಾಜ್ಯಪಾಲರು ಸಿದ್ದರಾಮಯ್ಯನವರಿಗೆ ಸ್ಪಷ್ಟನೆಗೆ ಅವಕಾಶ ಕೊಟ್ಟಿದ್ದಾರೆ. ಅವರ ಸ್ಪಷ್ಟನೆ ಸಮರ್ಪಕವಾಗಿದ್ದರೆ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಅಸಮರ್ಪಕ ಇದ್ದಾಗ ಮಾತ್ರ ಮುಂದಿನ ಕ್ರಮ ಆಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ನೀಡಿದ ನೋಟಿಸ್‌ ವಿಚಾರದ ಕುರಿತ ಪ್ರಶ್ನೆಗೆ ಪ್ರಸ್ತಾಪಿಸಿದರು.

Latest Videos
Follow Us:
Download App:
  • android
  • ios