ಬಿಜೆಪಿಯಲ್ಲಿ ಉಳಿಯುವ ಹೆಚ್ಚುವರಿ ಮತಗಳು ಮತ್ತು ಜೆಡಿಎಸ್‌ನ ಮತಗಳು ಕುಪೇಂದ್ರ ರೆಡ್ಡಿಗೆ ಬರಲಿವೆ. ಆದರೂ ಜೆಡಿಎಸ್‌ನ ಕೆಲವು ಮತಗಳು ಅಡ್ಡಮತದಾನ ವಾಗುವ ಭೀತಿ ಇದೆ. ಇದನ್ನು ತಡೆಯಲು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ. ಈ ವೇಳೆ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೊಬೈಲ್ ಮೂಲಕ ಮಾತುಕತೆ ನಡೆಸಿ ಕುಪೇಂದ್ರ ರೆಡ್ಡಿ ಅವರ ಗೆಲುವಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚಿಸಿದರು. 

ಬೆಂಗಳೂರು(ಫೆ.27): ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆಗೆ ಎನ್‌ಡಿಎನ ಎರಡನೇ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರನ್ನು ಗೆಲ್ಲಿಸುವ ಸಂಬಂಧ ಮಿತ್ರ ಪಕ್ಷಗಳಾದ ಬಿಜೆಪಿ ಪಿ ಮತ್ತು ಮತ್ತು ಜೆಡಿಎಸ್‌ ಮಿತ್ರಪಕ್ಷಗಳು ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದವು.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಸಿದ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆ‌ರ್.ಅಶೋಕ್, ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿದಂತೆ ಇತರರು ಭಾಗಿಯಾಗಿದ್ದರು. ಪಕ್ಷೇತರರು, ಕಾಂಗ್ರೆಸ್ ನ ಕೆಲವು ಅಸಮಾಧಾನಿತರನ್ನು ಸೆಳೆಯುವ ಹಾಗೂ ತಮ್ಮ ಶಾಸಕರನ್ನು ಕಾಂಗ್ರೆಸ್‌ನತ್ತ ವಾಲದಂತೆ ತಡೆವ ಕುರಿತು ಸಮಾಲೋಚಿಸಲಾಯಿತು ಎಂದು ಮೂಲಗಳು ಹೇಳಿವೆ.

Rajyasabha Election: ದೋಸ್ತಿಗೆ ತಿರುಮಂತ್ರ ಹಾಕಲು ಕೈ ಪ್ಲ್ಯಾನ್.. ನಡೆಯುತ್ತಾ ಅಡ್ಡ ಮತದಾನ..?

ಬಿಜೆಪಿಯಲ್ಲಿ ಉಳಿಯುವ ಹೆಚ್ಚುವರಿ ಮತಗಳು ಮತ್ತು ಜೆಡಿಎಸ್‌ನ ಮತಗಳು ಕುಪೇಂದ್ರ ರೆಡ್ಡಿಗೆ ಬರಲಿವೆ. ಆದರೂ ಜೆಡಿಎಸ್‌ನ ಕೆಲವು ಮತಗಳು ಅಡ್ಡಮತದಾನ ವಾಗುವ ಭೀತಿ ಇದೆ. ಇದನ್ನು ತಡೆಯಲು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ. ಈ ವೇಳೆ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೊಬೈಲ್ ಮೂಲಕ ಮಾತುಕತೆ ನಡೆಸಿ ಕುಪೇಂದ್ರ ರೆಡ್ಡಿ ಅವರ ಗೆಲುವಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚಿಸಿದರು ಮೂಲಗಳು ತಿಳಿಸಿವೆ.

ವಿಶ್ವಾಸದ ಮತಗಳು ನನಗೆ: ಕುಪೇಂದ್ರ ರೆಡ್ಡಿ ವಿಶ್ವಾಸ 

ಬೆಂಗಳೂರು: ವಿಶ್ವಾಸದ ಮತಗಳು ನನಗೆ ಬರುತ್ತವೆ ಎಂಬ ವಿಶ್ವಾಸ ಇದೆ ಎಂದು ರಾಜ್ಯ ಸಭೆಯ ಎನ್‌ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಹೇಳಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಶ್ವಾಸದ ಮತಗಳು ಪಕ್ಷೇತರರಿಂದ ಬರುತ್ತ ವೆಯೋ ಅಥವಾ ಬೇರೆ ರೀತಿ ಬರುತ್ತವೆಯೋ ಎನ್ನುವುದು ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದಾಗಲೂ ನಾನು ವಿಶ್ವಾಸದಲ್ಲಿದ್ದೆ. ಈ ಬಾರಿ ಯೂ ಗೆಲ್ಲುವ ವಿಶ್ವಾಸವಿದೆ. ಗೆಲ್ಲುವುದಕ್ಕಿಂತ ಹೆಚ್ಚಾಗಿ ನಮ್ಮ ಮತಗಳನ್ನು ಕ್ರೋಢೀ ಕರಣದ ಉದ್ದೇಶ ಇದೆ. ನಮ್ಮ ಮತಗಳು ಚದುರಿ ಹೋಗಬಾರದೆಂಬ ಕಾರಣ ಕೈ ಕ್ರೋಢೀಕರಣ ಮಾಡಲಾಗುತ್ತದೆ. ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಹ ಯಾವುದೇ ಮತಗಳು ಚದುರಬಾರದು ಎಂದಿದ್ದಾರೆಂದು ಹೇಳಿದರು.