Asianet Suvarna News Asianet Suvarna News

ಸಿಎಂ ಪದತ್ಯಾಗಕ್ಕೆ ಮೈಸೂರು ಚಲೋ: ಸಿದ್ದು ವಿರುದ್ಧ ಬಿಜೆಪಿ, ದಳ ಇಂದಿನಿಂದ ಪಾದಯಾತ್ರೆ..!

ಮೊದಲ ದಿನ ಶನಿವಾರ ಕೆಂಗೇರಿಯಿಂದ ಬಿಡದಿವರೆಗೆ ಯಾತ್ರೆ ಸಾಗಲಿದೆ. ಎರಡನೇ ದಿನ ಆ.4ರಂದು ಬಿಡದಿಯಿಂದ ರಾಮನಗ ರದವರೆಗೆ, ಆ.5ರಂದು ರಾಮನಗರದಿಂದ ಚನ್ನಪಟ್ಟಣದವರೆಗೆ, ಆ.6ರಂದು ಚನ್ನಪಟ್ಟಣದಿಂದ ಮದ್ದೂರಿನವರೆಗೆ, ಆ.7ರಂದು ಮದ್ದೂರಿನಿಂದ ಮಂಡ್ಯ ದವರೆಗೆ, ಆ.8ರಂದು ಮಂಡ್ಯದಿಂದ ಶ್ರೀರಂಗಪಟ್ಟಣದವರೆಗೆ ಆ.9ರಂದು ಹಾಗೂ ಶ್ರೀರಂಗಪಟ್ಟಣದಿಂದ ಮೈಸೂರಿನವರೆಗೆ ಸಂಚರಿಸಲಿದೆ.

bjp jds padayatra against cm siddaramaiah's resignation on muda scam grg
Author
First Published Aug 3, 2024, 8:14 AM IST | Last Updated Aug 5, 2024, 3:37 PM IST

ಬೆಂಗಳೂರು(ಆ.03):  ರಾಜ್ಯದ ಕಾಂಗ್ರೆಸ್ ಸರ್ಕಾರ ನಡೆಸಿದೆ ಎನ್ನ ಲಾದ ವಿವಿಧ ಹಗರಣಗಳ ವಿರುದ್ಧ ಪ್ರತಿಪಕ್ಷ ಗಳಾದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಬೆಂಗಳೂರಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ ಹಮ್ಮಿಕೊಂಡಿರುವ 'ಮೈಸೂರು ಚಲೋ' ಪಾದಯಾತ್ರೆ ಶನಿ ವಾರದಿಂದ ಆರಂಭ ವಾಗಲಿದೆ. ಒಟ್ಟು ಏಳು ದಿನ ಗಳ ಪಾದಯಾತ್ರೆ ಇದಾಗಿದ್ದು, 8ನೇ ದಿನ ಆ.10ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಮೂಲಕ ಅಂತ್ಯಗೊಳ್ಳಲಿದೆ.

ಹಿಂದೆ 2010ರಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಅಂದಿನ ಬಿಜೆಪಿ ಸರ್ಕಾರದಲ್ಲಿನ ಗಣಿ ಹಗರಣದ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸಿದ್ದರು. ನಂತರ ಅವರು ಮುಖ್ಯಮಂತ್ರಿಯಾಗಿದ್ದು ಈಗ ಇತಿಹಾಸ. ಇದೀಗ ಅದೇ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದ ವೇಳೆ ಅವರ ವಿರುದ್ದ ಬಿಜೆಪಿ ನಾಯಕರು ಜೆಡಿಎಸ್ ಜತೆಗೂಡಿ ಮುಡಾ ಅಕ್ರಮ ನಿವೇಶನ ಹಗರಣ ಮುಂದಿಟ್ಟುಕೊಂಡು ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಕೆಂಗೇರಿಯ ಕೆಂಪಮ್ಮ ದೇವಸ್ಥಾನದ ಬಳಿಯ ಒ ಜೆಕೆ ಗ್ಯಾಂಡ್ ಅರೆನಾ ಸೆಂಟರ್‌ನಲ್ಲಿ ಕಹಳೆ ಊದುವ ಮೂಲಕ ಪಾದಯಾತ್ರೆಯನ್ನು ಉದ್ಘಾಟಿಸಲಾಗುತ್ತದೆ. 

ಬಿಜೆಪಿ-ಜೆಡಿಎಸ್‌ ಕ್ಷಮಾಯಾತ್ರೆ ಮಾಡಲಿ: ಸಲೀಂ ಅಹಮದ್‌

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್‌ವಾಲ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿರಲಿದ್ದಾರೆ.

ಆ.10ರಂದು ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಹಗರಣಗಳ ಬಗ್ಗೆ ಅದರಲ್ಲೂ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಸ್ತಾಪಿಸಿ ಸಿಬಿಐ ತನಿಖೆಗೆ ನೀಡುವುದರ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಿದ ಪ್ರತಿಪಕ್ಷಗಳು ಮೈಸೂರಿಗೆ ಪಾದಯಾತ್ರೆ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದವು. ನಂತರ ಆ.3ರಿಂದ ಪಾದಯಾತ್ರೆಯನ್ನೂ ಘೋಷಿಸಲಾಗಿತ್ತು.

ಬಳಿಕ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾತ್ರೆಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿ ಮುಂದೂಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಕೊನೆಯ ಕ್ಷಣದಲ್ಲಿ ಬಿಜೆಪಿ ವರಿಷ್ಠರ ಮಧ್ಯೆ ಪ್ರವೇಶದಿಂದ ಗೊಂದಲ ಬಗೆಹರಿದು ನಿಗದಿತ ದಿನದಂದೆ ಪಾದಯಾತ್ರೆ ಆರಂಭವಾಗುವಂತಾಯಿತು.

ಪಾದಯಾತ್ರೆಯಲ್ಲಿ ವಿಜಯೇಂದ್ರ, ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸುರೇಶ್‌ಬಾಬು, ನಿಖಿಲ್ ಕುಮಾರಸ್ವಾಮಿ ಮೊದಲಾದ ನಾಯಕರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಸರಾಸರಿ 20 8.. ಸಂಚರಿಸುವ ಉದ್ದೇಶ ಹೊಂದಲಾಗಿದ್ದು, ಈ ಪಾದಯಾತ್ರೆಯಲ್ಲಿ ಪ್ರತಿದಿನ ಕನಿಷ್ಠ 8ರಿಂದ 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಮೊದಲ ದಿನ ಶನಿವಾರ ಕೆಂಗೇರಿಯಿಂದ ಬಿಡದಿವರೆಗೆ ಯಾತ್ರೆ ಸಾಗಲಿದೆ. ಎರಡನೇ ದಿನ ಆ.4ರಂದು ಬಿಡದಿಯಿಂದ ರಾಮನಗ ರದವರೆಗೆ, ಆ.5ರಂದು ರಾಮನಗರದಿಂದ ಚನ್ನಪಟ್ಟಣದವರೆಗೆ, ಆ.6ರಂದು ಚನ್ನಪಟ್ಟಣದಿಂದ ಮದ್ದೂರಿನವರೆಗೆ, ಆ.7ರಂದು ಮದ್ದೂರಿನಿಂದ ಮಂಡ್ಯ ದವರೆಗೆ, ಆ.8ರಂದು ಮಂಡ್ಯದಿಂದ ಶ್ರೀರಂಗಪಟ್ಟಣದವರೆಗೆ ಆ.9ರಂದು ಹಾಗೂ ಶ್ರೀರಂಗಪಟ್ಟಣದಿಂದ ಮೈಸೂರಿನವರೆಗೆ ಸಂಚರಿಸಲಿದೆ.

ಮುಡಾ ಹಗರಣಕ್ಕೆ ಸಚಿವ ಬೈರತಿ ಸುರೇಶ್ ನೇರ ಕಾರಣ, ಜೈಲಿಗೆ ಕಳಿಸಿ: ಎಚ್.ವಿಶ್ವನಾಥ್

ನಮ್ಮ ಹೋರಾಟ ವ್ಯಕ್ತಿ ವಿರುದ್ಧವಲ್ಲ

ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನಮ್ಮ ಹೋರಾಟ ವ್ಯಕ್ತಿಯ ವಿರುದ್ಧ ಅಲ್ಲ, ಕೆಟ್ಟ ವ್ಯವಸ್ಥೆ ವಿರುದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. 

ಆ.10ಕ್ಕೆ ಮೈಸೂರಲ್ಲಿ ಸಮಾವೇಶ: ಅಮಿತ್ ಶಾ ಭಾಗಿ ಸಾಧ್ಯತೆ

ಆ.10ರಂದು ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ಬೃಹತ್ ಸಮಾರೋಪ ಸಮಾರಂಭ ನಡೆಯಲಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Latest Videos
Follow Us:
Download App:
  • android
  • ios