ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದೇ ಬಿಜೆಪಿ-ಜೆಡಿಎಸ್ ಮೈತ್ರಿ ಆದ್ಯತೆ: ಎಚ್‌ಡಿಕೆ

ರಾಜ್ಯದ ಹಿತಕ್ಕಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆಯೇ ಹೊರತು ಸ್ಥಾನಮಾನಕ್ಕಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ 28 ಸ್ಥಾನವನ್ನು ಗೆಲ್ಲುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 
 

BJP JDS alliances priority is to win 28 seats in Lok Sabha elections Says HD Kumaraswamy gvd

ಹಾಸನ (ನ.10): ರಾಜ್ಯದ ಹಿತಕ್ಕಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆಯೇ ಹೊರತು ಸ್ಥಾನಮಾನಕ್ಕಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ 28 ಸ್ಥಾನವನ್ನು ಗೆಲ್ಲುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಹಾಸನಾಂಬ ದರ್ಶನದ ಬಳಿಕ ಜೆಡಿಎಸ್‌ ಶಾಸಕರ ಜೊತೆಗಿನ ಸಭೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಗಾಜಿನ ಮನೆಯಲ್ಲಿ ಕುಳಿತಿರುವವರು ನೀವು. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದೀರಿ. ಇದನ್ನು ಮೊದಲು ನಿಲ್ಲಿಸಿ’ ಎಂದು ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.

ಪ್ರತಿನಿತ್ಯ ನಮ್ಮ ರಾಜ್ಯದ ಉಪಮುಖ್ಯಮಂತ್ರಿಗಳು ಕಾಂಗ್ರೆಸ್ ಶಾಸಕರನ್ನು ಒಳಗೊಂಡಂತೆ ಬಹಳ ಮಂದಿ ಜೆಡಿಎಸ್ ಶಾಸಕರು ಪಕ್ಷಾಂತರ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಯಾಕೆ ಮಾನಸಿಕ ಹಿಂಸೆ ಕೊಡುತ್ತಿದ್ದೀರಿ. ರಾಜ್ಯದ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಇದನ್ನೇ ಮಾಡಿಕೊಂಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಬರ ಪರಿಹಾರಕ್ಕೆ 17000 ಕೋಟಿ ರು. ಕೊಡಲು ಸಾಧ್ಯವೇ? ಯುಪಿಎ ಸರ್ಕಾರವಿದ್ದಾಗ ಎಷ್ಟು ಹಣವನ್ನು ಬಿಡುಗಡೆ ಮಾಡಿದ್ದಾರೆ. ಒಮ್ಮೆಲೇ ಸಾವಿರಾರು ಕೋಟಿ ರು. ಹಣ ಕೊಟ್ಟಿರುವ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದರು .

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಮರ್ಥ ಆಡಳಿತ ನಡೆಸಲು ವಿಫಲ: ಕೋಟ ಶ್ರೀನಿವಾಸ ಪೂಜಾರಿ

‘ಕೇಂದ್ರ ಬರ ಅಧ್ಯಯನ ತಂಡದ ಪರಿಶೀಲನೆ ನಂತರ ನಿಮ್ಮ ಕಚೇರಿಯಲ್ಲೇ ಅವರ ಜೊತೆ ಮೀಟಿಂಗ್ ಮಾಡಿದ್ದೀರಿ. ನಂತರ ಕೇಂದ್ರಕ್ಕೆ ಯಾವ ಮಾಹಿತಿ ಸಹ ಕೊಟ್ಟಿಲ್ಲ ಎಂದು ಆರೋಪಿಸುತ್ತೀರಿ. ಬರ ಅಧ್ಯಯನ ತಂಡ ಬಂದು ಹೋದ ನಂತರ ಅಗತ್ಯ ಮಾಹಿತಿಯನ್ನು ಪಡೆದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಾಗಿತ್ತು. ಇದನ್ನು ಮಾಡದೆ ಉದಾಸೀನ ಧೋರಣೆ ಅನುಸರಿಸುತ್ತೀರಿ. ಇದು ನಿಮ್ಮ ಆಡಳಿತವೇ’ ಎಂದು ಪ್ರಶ್ನೆ ಮಾಡಿದರು. ‘136 ಶಾಸಕರನ್ನು ಹೊಂದಿರುವ ಮುಖ್ಯಮಂತ್ರಿಗಳು ಏತಕ್ಕಾಗಿ ಡಿನ್ನರ್ ಪಾರ್ಟಿಯನ್ನು ಏರ್ಪಡಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನಮ್ಮ ಪಕ್ಷದ ಶಾಸಕರು ಪಕ್ಷ ಬಿಡುವುದಾಗಲಿ ಆಮಿಷಗಳಿಗೆ ಒಳಗಾಗುವುದಾಗಲಿ ಮಾಡುವುದಿಲ್ಲ. ಅಭಿವೃದ್ಧಿಗೆ ಅನುದಾನ ಕೊಡದೆ ಜನತೆಗೆ ಅನಾನುಕೂಲ ಆಗುತ್ತೆ ಎಂಬ ಭಾವನೆ ಎಲ್ಲ ಶಾಸಕರ ಮನದಲ್ಲಿದೆ. ಕಾಂಗ್ರೆಸ್ ಬಲವಂತಕ್ಕೆ ಯಾರು ಸಹ ಪಕ್ಷ ತೊರೆಯುವವರು ಇಲ್ಲ. ಇಂತಹ ಪುಕಾರನ್ನು ಪದೇ ಪದೇ ಏಕೆ ಸೃಷ್ಟಿ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ನಮಗೆ ಯಾರ ಮೇಲು ಅನುಮಾನಪಡುವ ಸ್ಥಿತಿ ನಿರ್ಮಾಣವಾಗಿಲ್ಲ. ಅಪಪ್ರಚಾರಕ್ಕೆ ಸ್ಪಷ್ಟವಾದ ಬಲವಾದ ಸಂದೇಶ ಕೊಡಲು ಎಲ್ಲರೂ ಒಗ್ಗೂಡಿ ಅವರ ಸಮಸ್ಯೆಗಳನ್ನು ಚರ್ಚಿಸಲು ಸಭೆ ಮಾಡಿ ಎಂದು ಸಲಹೆ ನೀಡಿದರು. ಅದಕ್ಕಾಗಿ ರಾಜ್ಯದ ಹೊರಗೆ ಹೋಗುವುದು ಬೇಡ ಇಲ್ಲೇ ಸಭೆ ಮಾಡೋಣ ಎಂದು ಹಾಸನದಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ’ ಎಂದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿ ಆಯ್ಕೆ ಸಂಬಂಧ ಜನರ ಹಾಗೂ ಪಕ್ಷದ ಶಾಸಕರು ಹಾಗೂ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಎಚ್ ಡಿ ದೇವೇಗೌಡರು ಸ್ಪರ್ದಿಸಲು ವಯಸ್ಸಿನ ಸಮಸ್ಯೆ ಇದೆ ಎಂದು ಕುಮಾರಸ್ವಾಮಿ ಹೇಳಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿ ಆಯ್ಕೆ ಸಂಬಂಧ ಜನರ ಹಾಗೂ ಪಕ್ಷದ ಶಾಸಕರು ಹಾಗೂ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಎಚ್ ಡಿ ದೇವೇಗೌಡರು ಸ್ಪರ್ದಿಸಲು ವಯಸ್ಸಿನ ಸಮಸ್ಯೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.

ಬರದಿಂದ ರೈತರಿಗೆ ಸಂಕಷ್ಟ, ರಾಜ್ಯ ಸರ್ಕಾರ ಕಚ್ಚಾಟ: ಮಾಜಿ ಸಿಎಂ ಸದಾನಂದಗೌಡ ತರಾಟೆ!

ಜೆಡಿಎಸ್ ಕೋರ್ ಕಮಿಟಿ ಅದ್ಯಕ್ಷರಾದ .ಜಿ.ಟಿ. ದೇವೇಗೌಡರು , ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸಿ.ಎನ್.ಬಾಲಕೃಷ್ಣ. ಸ್ವರೂಪ್ ಪ್ರಕಾಶ್. ರಾಜುಗೌಡ. ಕರೆಯಮ್ಮ, ವೆಂಕಟಾಶಿವರೆಡ್ಡಿ, ನರಸಿಂಹನಾಯಕ್, ಹರೀಶ್, ಶಿಡ್ಲಗಟ್ಟ ರವಿ, ಕೆ.ಆರ್.ಪೇಟೆ ಮಂಜು, ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ, ಮಾಜಿ ಸಚಿವ ನಾಡಗೌಡ, ಮಾಜಿ ಶಾಸಕರಾದ ಮಾಗಡಿ ಮಂಜುನಾಥ್, ಕೆ.ಎಸ್.ಲಿಂಗೇಶ್ ಇದ್ದರು‌.

Latest Videos
Follow Us:
Download App:
  • android
  • ios