ಬಿಜೆಪಿ-ಜೆಡಿಎಸ್ ಮೈತ್ರಿ ಪಾದಯಾತ್ರೆ ಆ.3ರಿಂದ ಆರಂಭ; ಹೆಚ್ಡಿಕೆ ವಾರ್ನಿಂಗ್‌ಗೆ ಪ್ರೀತಂಗೌಡನನ್ನು ಹೊರಗಿಟ್ಟ ಬಿಜೆಪಿ

ಕಾಂಗ್ರೆಸ್ ಹಗರಣಗಳ ವಿರುದ್ಧ ನಡೆಸಲಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಪಾದಯಾತ್ರೆಯಲ್ಲಿ ಹಾಸನ ಮಾಜಿ ಶಾಸಕ ಪ್ರೀತಂಗೌಡ ಪಾತ್ರವೂ ಇಲ್ಲ, ಮಹತ್ವವೂ ಇಲ್ಲ. 

BJP JDS alliance padayatra starts from Saturday There is no role of Preetham Gowda in Padayatra sat

ನವದೆಹಲಿ (ಆ.01): ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಆ.3ರಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಪಾದಯಾತ್ರೆ ಆರಂಭವಾಗಲಿದೆ. ಇದರಲ್ಲಿ ಹಾಸನ ಮಾಜಿ ಶಾಸಕ ಪ್ರೀತಂಗೌಡ ಪಾತ್ರವೂ ಇಲ್ಲ, ಮಹತ್ವವೂ ಇಲ್ಲ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್ ಮಾಹಿತಿ ನೀಡಿದರು.

ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ವಿರೋಧಿಸಿ ಬಿಜೆಪಿ- ಜೆಡಿಎಸ್ ಮೈತ್ರಿಯಾಗಿ ಪಾದಯಾತ್ರೆ ಮಾಡುವುದಕ್ಕೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ದೇವೇಗೌಡರ ಕುಟುಂಬವನ್ನು ಮುಗಿಲು ಮುಂದಾಗಿದ್ದ ಪ್ರೀತಂಗೌಡನನ್ನು ಪಕ್ಕದಲ್ಲಿಟ್ಟುಕೊಂಡು ಪಾದಯಾತ್ರೆ ಮಾಡಲು ಬರುಯವುದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಖಡಕ್ ಸೂಚನೆ ರವಾನಿಸಿದ್ದರು. ಇದರ ಬೆನ್ನಲ್ಲಿಯೇ ದೆಹಲಿಯಲ್ಲಿ ಸಭೆ ನಡೆಸಿದ ಬಿಜೆಪಿ ಹೈಕಮಾಂಡ್ ಪ್ರೀತಂ ಗೌಡನಿಗೆ ಮಹ್ವತ ನೀಡದೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ. ಇದರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ ಪಾದಯಾತ್ರೆ ಮಾಡಲಿವೆ ಎಂದು ಬಿಜೆಪಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ.

ಮೈತ್ರಿ ಪಾದಯಾತ್ರೆಗೆ ಬ್ರೇಕ್ ಹಾಕಿದ ಕೇಂದ್ರ ಸಚಿವ HDK : ಚುನಾವಣಾ ಮೈತ್ರಿ ಬೇರೆ ರಾಜಕೀಯ ಬೇರೆ ಎಂದ ದಳಪತಿ!

ನವದೆಹಲಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್ ಅವರು, ರಾಜ್ಯದ ಎಲ್ಲ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಶಾಸಕರು, ಸಂಸದರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ಆಗಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ. 6 ಕೋಟಿ ಕನ್ನಡಿಗರ ಪರವಾಗಿ ನಾವು ಮೈತ್ರಿ ಕೂಟ ಧ್ವನಿ ಎತ್ತುತ್ತಿದ್ದೇವೆ. ಆಗಸ್ಟ್ 3ರ ಶನಿವಾರದಿಂದ ಪಾದಯಾತ್ರೆಯನ್ನು ಬೆಂಗಳೂರಿನ ನೈಸ್ ರಸ್ತೆ ಜಂಕ್ಷನ್‌ನಿಂದ ಆರಂಭಿಸಲಾಗುತ್ತದೆ. ಜೆಡಿಎಸ್, ಬಿಜೆಪಿ ಪಕ್ಷಗಳು ಪಾದಯಾತ್ರೆ ಉಸ್ತುವಾರಿ ಹೊತ್ತುಕೊಳ್ಳಲಿವೆ. ಇನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಾದಯಾತ್ರೆಯಲ್ಲಿ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಅವರ ನೇತೃತ್ವ ಇರುವುದಿಲ್ಲ. ಮುಖ್ಯವಾಗಿ ಪಾದಯಾತ್ರೆಲ್ಲಿ ಪ್ರೀತಂಗೌಡ ಅವರ ಪಾತ್ರವೂ ಇಲ್ಲ, ಮಹತ್ವವೂ ಇಲ್ಲ ಎಂದು ಹೇಳಿದರು.

ಬಡವರ ಹಣವನ್ನ ಲೂಟಿಮಾಡೊ ಸರ್ಕಾರವಾಗಿದೆ. ಸರ್ಕಾರಿ ಯೋಜನೆಯ ಹಣವನ್ನ ಚುನಾವಣೆಗೆ ಬಳಕೆ ಮಾಡಿಕೊಂಡಿದೆ. ಇದರ ಹಿನ್ನಲೆ ಲೋಕಸಭೆ ಚುನಾವಣೆಯಲ್ಲಿ ಜನರು ಉತ್ತರ ನೀಡಿದ್ದಾರೆ. ಚುನಾವಣೆಯ ನಂತರವು ಭ್ರಷ್ಟಾಚಾರ ಮುಂದುವರೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಬೆಲೆ ಬಾಳದ ಭೂಮಿಯ ಬದಲಾಗಿ, ಭ್ರಷ್ಟಾಚಾರದಿಂದ ಬೆಲೆಬಾಳೋ 14 ಸೈಟ್ ಪಡೆದಿದ್ದಾರೆ. ಇದು ಅತಿದೊಡ್ಡ ಭ್ರಷ್ಟಾಚಾರವಾಗಿದೆ. ಸ್ವತಃ ಸಿಎಂರವರೇ ಸದನದಲ್ಲಿ ವಾಲ್ಮಿಕಿ ನಿಗಮದಲ್ಲಿ ಹಗರಣವಾಗಿರೋದನ್ನ ಒಪ್ಪಿಕೊಂಡಿದ್ದಾರೆ. ಇದರ ವಿರುದ್ದ ನಮ್ಮ ಹೋರಾಟ ಪಾದಯಾತ್ರೆ ಮೂಲಕ ನಡೆಯಲಿದೆ. ಆ.3ರಿಂದ ಜೆಡಿಎಸ್ ಮತ್ತು ಬಿಜೆಪಿಯಿಂದ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯಲ್ಲಿ ಜೆಡಿಎಸ್ ನ ಶಾಸಕರು, ಸಚಿವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಮುಡಾ ಪ್ರಾಸಿಕ್ಯೂಷನ್ ನೊಟೀಸ್ ವಾಪಸಿಗೆ ಸಚಿವ ಸಂಪುಟ ನಿರ್ಧಾರ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ನಮ್ಮ ಪಾದಯಾತ್ರೆ ಇದೇ ಶನಿವಾರದಿಂದ ನಿಗದಿಯಂತೆ ಆರಂಭವಾಗಲಿದೆ. ನಮ್ಮ ಹೋರಾಟ ಮೂಡಾ ಮತ್ತು ವಾಲ್ಮಿಕಿ ಹಗರಣಗಳ ವಿರುದ್ದ ಹೋರಾಟ ಮಾಡಲಾಗುತ್ತದೆ. ಎನ್ ಡಿ ಎಯಿಂದ ಹೋರಾಟ ನಡೆಯಲಿದೆ. ಪಾದಯಾತ್ರೆಯ ಬಗ್ಗೆ ಕುಮಾರಸ್ವಾಮಿ ಜೊತೆಗೆ ಮಾತನಾಡಿದ್ದೆವೆ. ಇರೋ ಸ್ವಲ್ಪಗೊಂದಲ ಬಗೆಹರಿಸಿಕೊಂಡಿದ್ದೇವೆ. ಒಟ್ಟು 7 ದಿನಗಳ ಪಾದಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios