ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ವಿರೋಧವಿಲ್ಲ, ಸರಿಯಾಗಿ ಅನುಷ್ಠಾನ ಮಾಡಿ: ಸುದರ್ಶನ್‌ ಎಂ.

 ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನÜ ಮಾಡಲು ಕಾಂಗ್ರೆಸ್‌ ಸರ್ಕಾರ ಒದ್ದಾಡುತ್ತಿರುವ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲು ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ಮಾಡುತ್ತಿರುವ ಅಪಪ್ರಚಾರವನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಹೇಳಿದರು.

BJP is not against congress guarantee scheme Implement properly says sudarshan m at mangaluru rav

ಮಂಗಳೂರು (ಜು.1) : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನÜ ಮಾಡಲು ಕಾಂಗ್ರೆಸ್‌ ಸರ್ಕಾರ ಒದ್ದಾಡುತ್ತಿರುವ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸಲು ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್‌ ಮಾಡುತ್ತಿರುವ ಅಪಪ್ರಚಾರವನ್ನು ಬಿಜೆಪಿ ಖಂಡಿಸುತ್ತದೆ. ಬಿಜೆಪಿ ಸರ್ಕಾರ ಯೋಜನೆಗಳನ್ನು ತಿರಸ್ಕರಿಸುವುದಿಲ್ಲ. ಸರಿಯಾಗಿ ಅನುಷ್ಠಾನÜ ಮಾಡಿ ಎಂದು ಆಗ್ರಹಿಸುತ್ತದೆ. ಧಮ್‌ ಇದ್ದರೆ ಗ್ಯಾರಂಟಿ ಯೋಜನೆಯು ಕಾಂಗ್ರೆಸ್‌ಗೆ ಓಟ್‌ ಹಾಕಿದವರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಕಾಂಗ್ರೆಸಿಗರು ಘೋಷಣೆ ಮಾಡಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಆಗ್ರಹಿಸಿದ್ದಾರೆ.

ಯಾವುದೇ ಷರತ್ತು ಹಾಕದೇ ಗ್ಯಾರಂಟಿ ಘೋಷಣೆ ಮಾಡಿ ಅನುಷ್ಠಾನ ಮಾಡುವಾಗ ಹಲವಾರು ಷರತ್ತುಗಳನ್ನು ಧಿಕ್ಕರಿಸಿ ರಾಜ್ಯದ ಜನತೆಗೆ ವಂಚಿಸುತ್ತಿದ್ದೀರಿ. ಕಾಂಗ್ರೆಸ್‌ ಜಾತಿ, ಮತದ ಅಧಾರದಲ್ಲಿ ಯೋಜನೆಗಳನ್ನು ತಂದಿರುವ ಇತಿಹಾಸ ನಮ್ಮ ಕಣ್ಣ ಮುಂದೆ ಇದೆ. ಕೇಂದ್ರದಲ್ಲಿ ಅಕ್ಕಿ ದಾಸ್ತಾನಿರುವುದು ಇಡೀ ದೇಶದ ಬಡವರಿಗೆ ಹಂಚಲು ಹೊರತು ಸಿದ್ದರಾಮಯ್ಯನವರ ಗ್ಯಾರಂಟಿಗಲ್ಲ ಎಂದಿದ್ದಾರೆ.

ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ಕರಾವಳಿ ಸ್ವಾಮೀಜಿಗಳ ತೀವ್ರ ವಿರೋಧ

ಮೋದಿ ಭತ್ತ ಬೆಳೆಸುತ್ತಾರಾ ಎಂದು ಪ್ರಶ್ನೆ ಮಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್‌ ಅವರೇ, ಅನ್ನ ಭಾಗ್ಯ ನೀಡಲು ಸಿದ್ದರಾಮಯ್ಯ ಅವರೇನು ಭತ್ತ ಬೆಳೆಸುತ್ತಾರಾ? ರಾಹುಲ್‌ ಗಾಂಧಿ ಭತ್ತ ಬೆಳೆಸುತ್ತಾರಾ? ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸುದರ್ಶನ್‌ ಪತ್ರಿಕಾ ಹೇಳಿಕೆಯಲ್ಲಿ ವ್ಯಂಗ್ಯವಾಡಿದ್ದಾರೆ.

Latest Videos
Follow Us:
Download App:
  • android
  • ios