ರಾಜಕೀಯಕ್ಕಾಗಿ ಬಿಜೆಪಿ ಹೋರಾಟ ಮಾಡುತ್ತಿದೆ: ಸಚಿವ ಗುಂಡೂರಾವ್
ಕೇಂದ್ರದ ತಂಡ ಬಂದು ಹೋಗಿ ಸುಮಾರು ತಿಂಗಳುಗಳೇ ಕಳೆದು ಹೋದವು. ಈಗಾಗಲೇ ರಾಜ್ಯದಿಂದ ಬರಗಾಲದ ಕುರಿತು ಸಂಪೂರ್ಣ ವರದಿ ಕಳಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಈವರೆಗೂ ಒಂದು ಬಿಡಿಗಾಸು ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಳಗಾವಿ (ಡಿ.14): ಕೇಂದ್ರದ ತಂಡ ಬಂದು ಹೋಗಿ ಸುಮಾರು ತಿಂಗಳುಗಳೇ ಕಳೆದು ಹೋದವು. ಈಗಾಗಲೇ ರಾಜ್ಯದಿಂದ ಬರಗಾಲದ ಕುರಿತು ಸಂಪೂರ್ಣ ವರದಿ ಕಳಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಈವರೆಗೂ ಒಂದು ಬಿಡಿಗಾಸು ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅನುದಾನ ಕುರಿತಂತೆ ಕೃಷ್ಣ ಭೈರೈಗೌಡ ಘೋಷಣೆ ಮಾಡಿದ್ದಾರೆ. ಮುಂದೆಯೂ ಸಹಿತ ಏನು ಮಾಡುತ್ತೇವೆ ಅನ್ನೋದು ಸಿಎಂ ಹೇಳುತ್ತಾರೆ ಎಂದರು. ಆದರೆ, ಬಿಜೆಪಿಯವರ ಜವಾಬ್ದಾರಿ ಏನೂ ಇಲ್ಲವಾ? ಕೇಂದ್ರದ 25 ಸಂಸದರನ್ನು ಕರೆದುಕೊಂಡು ಒಂದು ಮಾತೂ ಸಹ ಆಡೋದಕ್ಕೆ ತಯಾರಿಲ್ಲ.
ರಾಜ್ಯದಲ್ಲಿ ಅವರ ಸರ್ಕಾರ ಹೋಯಿತು ಅಂತ ಉದ್ದೇಶಪೂರ್ವಕಾಗಿ ನಮ್ಮ ಜನರಿಗೆ ತೊಂದರೆ ಕೊಡಬೇಕೆಂದು ಮೋದಿಯವರು ಮಾಡುತ್ತಿದ್ದಾರೆ. ಇಷ್ಟು ನಿರ್ಲಕ್ಷ್ಯ ಮನೋಭಾವನೆ ಯಾಕೆ ಎಂದು ಪ್ರಶ್ನಿಸಿದರು. ನಮ್ಮ ಮಂತ್ರಿಗಳು ಹೋದರೆ ಭೇಟಿ ಆಗೋಕೂ ಕೂಡ ತಯಾರಿಲ್ಲ. ಇಷ್ಟು ತಾತ್ಸಾರ ಮನೋಭಾವ ಮಾಡಬೇಕಾದರೇ ಬಿಜೆಪಿಯವರ ಇಂದಿನ ಹೋರಾಟಕ್ಕೆ ಯಾವ ನೈತಿಕತೆ ಇದೆ. ಇವರು ಜನರಿಗೆ ನ್ಯಾಯ ಒದಗಿಸಿ ನಮ್ಮ ವಿರುದ್ಧ ಹೋರಾಟ ಮಾಡಿದರೇ ಒಪ್ಪಿಕೊಳ್ಳಬಹುದು ಎಂದರು.
ಒಂದು ಪರ್ಸೆಂಟ್ ಕೂಡ ನಮಗೆ ಇವರಿಂದ ಸಹಾಯ ಆಗಿಲ್ಲ. ಆದರೆ, ನಾವು ಮಾಡ್ತಿದ್ದೇವೆ. ಹೀಗಾಗಿ ಬಿಜೆಪಿಯವರ ಇಂಥಹ ಹೋರಾಟಗಳಿಗೆ ಯಾವುದೇ ತರ್ಕ ಇಲ್ಲ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕುರಿತು ಸಮಸ್ಯೆ ಚರ್ಚೆ ಆಗುತ್ತಿಲ್ಲ. ವಿರೋಧ ಪಕ್ಷದವರು ಕೇವಲ ರಾಜಕೀಯಕ್ಕೋಸ್ಕರ ಬಾವಿಗಿಳಿಯುತ್ತಿದ್ದಾರೆ. ಯಾವುದೇ ಸಮಸ್ಯೆ ಬಗ್ಗೆ ಚರ್ಚೆ ಮಾಡೋಕೆ ಅವಕಾಶ ಕೊಡುತ್ತಿಲ್ಲ. ಸ್ಪಷ್ಟವಾಗಿ ಒಂದೂ ವಿಷಯವನ್ನೂ ಸಹ ಎತ್ತುತ್ತಿಲ್ಲ ಎಂದರು.
ಲೋಕಸಭೆಗೆ ಕಾಂಗ್ರೆಸ್‌ನಿಂದ ನಾನು ಸ್ಪರ್ಧಿಸುವುದೆಲ್ಲ ಸುಳ್ಳು: ಮಾಜಿ ಸಚಿವ ವಿ.ಸೋಮಣ್ಣ
ನಿನ್ನೆ ಅನಾವಶ್ಯಕವಾಗಿ ಸುನೀಲಕುಮಾರ ಜಾರ್ಜಾ ಅವರನ್ನು ಅಸಮರ್ಥ ಸಚಿವರೆಂದು ಹೇಳಿದರು. ಸಮರ್ಥ ಇರೋದಿಂದಲೇ ಜಾರ್ಜ್ ಕೆಲಸ ಮಾಡುತ್ತಿದ್ದಾರೆ. ಅಸಮರ್ಥ ಆಗಿರೋದು ಇವತ್ತು ವಿರೋಧ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರು. ಜನರ ಸದುದ್ದೇಶಕ್ಕೆ ನಡೆದುಕೊಳ್ಳದೇ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.