ಬಿಜೆಪಿಯವರು ಸೋಲಿನ ಭೀತಿಯಿಂದ ಐಟಿ, ಇಡಿ, ಸಿಬಿಐ ಸಂಸ್ಥೆಗಳಿಂದ ದಾಳಿ ಮಾಡಿಸ್ತಾರೆ; ಸಂಸದ ಡಿ.ಕೆ. ಸುರೇಶ್!
ಬಿಜೆಪಿ ನಾಯಕರು ಸೋಲಿನ ಭೀತಿಯಿಂದಲೇ ಡಿ.ಕೆ. ಬ್ರದರ್ಸ್ ಆಪ್ತರ ಮೇಲೆ ಇಡಿ, ಐಟಿ ಹಾಗೂ ಸಿಬಿಐ ಸಂಸ್ಥೆಗಳಿಂದ ದಾಳಿ ಮಾಡಿಸಿ ನಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು.
ರಾಮನಗರ (ಏ.17): ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಡಿ.ಕೆ.ಬ್ರದರ್ಸ್ ಆಪ್ತರ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ. ಇದನ್ನ ಬಿಟ್ಟು ಅವರು ಬೇರೆ ಏನೂ ಮಾಡೋಕಾಗಲ್ಲ. ನಮ್ಮನ್ನ ಏನಾದ್ರೂ ಮಾಡಿ ಕುಗ್ಗಿಸಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ. ಆ ಪ್ರಯತ್ನ ಯಶಸ್ವಿಯಾಗಲ್ಲ. ಸೋಲಿನ ಭೀತಿಯಿಂದ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪ ಮಾಡಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ಡಿ.ಕೆ.ಬ್ರದರ್ಸ್ ಆಪ್ತರ ಮೇಲೆ ಐಟಿ ದಾಳಿ ಮಾಡಲಾಗುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿದರು. ಬಿಜೆಪಿ-ಜೆಡಿಎಸ್ ನಾಯಕರಿಗೆ ಸೋಲಿನ ಭಯ ಕಾಡ್ತಿದೆ. ನಮ್ಮನ್ನ ಏನಾದ್ರೂ ಮಾಡಿ ಕುಗ್ಗಿಸಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ. ಆ ಪ್ರಯತ್ನ ಯಶಸ್ವಿಯಾಗಲ್ಲ. ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಇರೋದು ಇದೊಂದೆ ಅಸ್ತ್ರ. ಐಟಿ, ಇಡಿ ಅಧಿಕಾರಿಗಳು ಬಿಜೆಪಿ ಪಕ್ಷ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.
ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಮಾಡಿ ಅವರಪ್ಪನ ಆಸ್ತಿ ಬರೆಸಿಕೊಂಡ ದಾಖಲೆಯಿದೆ; ಹೆಚ್.ಡಿ. ದೇವೇಗೌಡ ಆರೋಪ
ಬಿಜೆಪಿ ನಾಯಕರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡಿ ಅಂದ್ರೆ ಇವರಿಗೆ ಆಗಲ್ಲ. ಅವರು ಹಿಂದೆ ಕೊಟ್ಟ ಭರವಸೆ ಏನು, ಅದು ಇಡೇರಿದ್ಯಾ.? ಶ್ರೀರಾಮನವಮಿದಿನ ಸತ್ಯ ಹೇಳಬೇಕು. ಬಿಜೆಪಿಯವ್ರು ಮೊದಲು ಸತ್ಯ ಹೇಳಲಿ. ನಮ್ಮನ್ನ ಏನಾದ್ರೂ ಮಾಡಿ ಕುಗ್ಗಿಸಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ. ಆ ಪ್ರಯತ್ನ ಯಶಸ್ವಿಯಾಗಲ್ಲ.ಅವರು ಕೇವಲ ಕಾಂಗ್ರೆಸ್ ಪಕ್ಷವನ್ನ ಕಟ್ಟಿಹಾಕಲು ಬಂದಿದ್ದಾರೆ. ಇದನ್ನ ನಾವು ಹೊಸದಾಗಿ ನೋಡ್ತಿಲ್ಲ. ಎಲ್ಲಾ ಚುನಾವಣೆಗಳಲ್ಲೂ ಇದೇ ರೀತಿ ಮಾಡ್ತಿರೋದು ಗೊತ್ತಾಗಿದೆ ಎಂದು ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಕಾಂಗ್ರೆಸ್ ರಾಮನನ್ನ ಕಾಲ್ಪನಿಕ ಅಂದ್ರು ಎಂಬ ಅಶ್ವಥ್ ನಾರಾಯಣ್ ಹೇಳಿದ ಬಗ್ಗೆ ಮಾತನಾಡಿ, ಇದೇ ಜಿಲ್ಲೆಯಲ್ಲಿ ಇದ್ದ ಅಶ್ವಥ್ ನಾರಾಯಣ್ ಜಿಲ್ಲೆ ಕ್ಲೀನ್ ಮಾಡ್ತೀನಿ ಎಂದಿದ್ದರು ಅದನ್ನು ಮಾಡಿದ್ರಾ? ರಾಮದೇವರ ಬೆಟ್ಟದ ಅಭಿವೃದ್ಧಿಗೆ ಎಷ್ಟು ಹಣ ಇಟ್ಟಿದ್ರಿ.? ಆಕ್ಷನ್ ಫ್ಲಾನ್ ಏನ್ ಮಾಡಿದ್ರು, ಅರಣ್ಯ ಇಲಾಖೆ ಅನುಮತಿ ಪಡೆದಿದ್ದಾರಾ.? ಅನುಮತಿಗೆ ಅರ್ಜಿ ಹಾಕಿದ್ದಾರಾ.? ಇದು ಚುನಾವಣಾ ತಂತ್ರ. ರಾಮ ನಮ್ಮೂರಲ್ಲೂ ಅವನೆ. ನಮ್ಮೂರಲ್ಲೂ ರಾಮಮಂದಿರ ಕಟ್ಟಿದ್ದಿವಿ. ನಾವೂ ರಾಮನ ಪೂಜೆ ಮಾಡ್ತೀವಿ. ರಾಮ ಕೇವಲ ಬಿಜೆಪಿಯವ್ರ ಸ್ವತ್ತಲ್ಲ. ಅವ್ರಿಗೆ ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಮ ನೆನಪಾಗ್ತಾನೆ ಕೇಸರಿ ಶಾಲು ಹಾಕೊಂಡು ರಾಮದೇವರ ಬೆಟ್ಟ ಹತ್ತಿದ್ರೆ ಇವರು ರಾಮ ಭಕ್ತರಾಗೋದಿಲ್ಲ ಎಂದು ಟಾಂಗ್ ನೀಡಿದರು.
ರಾಹುಲ್ ಗಾಂಧಿ ಕಾಲ್ಗುಣ ಶಕ್ತಿಶಾಲಿಯಾಗಿದೆ; ಪಾದಯಾತ್ರೆ ಮಾಡಿದಲ್ಲೆಲ್ಲಾ ಕಾಂಗ್ರೆಸ್ ಗೆದ್ದಿದೆ: ಡಿ.ಕೆ. ಶಿವಕುಮಾರ್
ರಾಜ್ಯದಲ್ಲಿ ಕಾಂಗ್ರೆಸ್ ತತ್ವ-ಸಿದ್ದಾಂತಗಳನ್ನ ಒಪ್ಪಿ ಸಾಕಷ್ಟು ಮುಖಂಡರು ಪಕ್ಷಕ್ಕೆ ಬರ್ತಿದ್ದಾರೆ. ಇಂದು ರಾಮನಗರ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಕಾಂಗ್ರೆಸ್ ಗೆ ಬಂದಿದ್ದಾರೆ. ಅಭಿವೃದ್ಧಿ ನಿಟ್ಟಿನಲ್ಲಿ ನಮಗೆ ಕೈಜೋಡಿಸ್ತಿದ್ದಾರೆ. ನಾನು ಎಲ್ಲಾ ಜೆಡಿಎಸ್-ಬಿಜೆಪಿ ಕಾರ್ಯಕರ್ತರಿಗೂ ಕರೆ ನೀಡ್ತೇನೆ. ಕ್ಷೇತ್ರ ಅಭಿವೃದ್ಧಿ ಪಡಿಸಲು ಎಲ್ಲರೂ ನಮ್ಮ ಜೊತೆ ಕೈಜೋಡಿಸಿದ್ದಾರೆ. ಕಾಂಗ್ರೆಸ್ ಗೆ ಬೆಂಬಲ ನೀಡಿ ಪಕ್ಷಕ್ಕೆ ಬರುವವರಿಗೆ ಮುಕ್ತ ಆಹ್ವಾನ ಇದೆ. ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕಾಂಗ್ರೆಸ್‌ಗೆ ಬರಬಹುದು ಎಂದು ಸಂಸದ ಡಿ.ಕೆ. ಸುರೇಶ್ ಮುಕ್ತ ಆಹ್ವಾನ ನೀಡಿದರು.