Asianet Suvarna News Asianet Suvarna News

ಗುಣ ನೋಡಿ ಹೆಣ್ಣು ಕೊಟ್ಟಂತೆ ಬಿಜೆಪಿ ಪಕ್ಷ ಟಿಕೆಟ್ ಕೊಡುತ್ತೆ: ಟಿಕೆಟ್‌ಗೆ ನಾನಂತೂ ಹಠ ಹಿಡಿಯೊಲ್ಲ: ತವನಪ್ಪ ಅಷ್ಟಗಿ

ಬಿಜೆಪಿ ರಾಷ್ಟ್ರೀಯ ಪಕ್ಷ, ಅದರಲ್ಲೂ ಶಿಸ್ತಿನ ಪಕ್ಷ. ಟಿಕೆಟ್‌ಗಾಗಿ ನಾನಂತೂ ಹಠ ಹಿಡಿಯೋದಿಲ್ಲ. ನನ್ನ ರಾಜಕೀಯ ಸೇವೆ, ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ, ಕ್ಷೇತ್ರದಲ್ಲಿ ನಡೆಸಲಾಗಿರುವ ಸಮೀಕ್ಷೆ ಎಲ್ಲವನ್ನು ಗಮನಿಸಿ ವರಿಷ್ಠರು ಗುಣನೋಡಿ ಹೆಣ್ಣು ಕೊಟ್ಟರೀತಿಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್‌ ನೀಡುತ್ತಾರೆ ಎಂದು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಹೇಳಿದರು.

BJP is a disciplined party says tavanappa ashtragi at dharwad rav
Author
First Published Mar 18, 2023, 11:54 AM IST

ಧಾರವಾಡ (ಮಾ.18) : ಬಿಜೆಪಿ ರಾಷ್ಟ್ರೀಯ ಪಕ್ಷ, ಅದರಲ್ಲೂ ಶಿಸ್ತಿನ ಪಕ್ಷ. ಟಿಕೆಟ್‌ಗಾಗಿ ನಾನಂತೂ ಹಠ ಹಿಡಿಯೋದಿಲ್ಲ. ನನ್ನ ರಾಜಕೀಯ ಸೇವೆ, ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ, ಕ್ಷೇತ್ರದಲ್ಲಿ ನಡೆಸಲಾಗಿರುವ ಸಮೀಕ್ಷೆ ಎಲ್ಲವನ್ನು ಗಮನಿಸಿ ವರಿಷ್ಠರು ಗುಣನೋಡಿ ಹೆಣ್ಣು ಕೊಟ್ಟರೀತಿಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಟಿಕೆಟ್‌ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ(Tavanappa ashtagi) ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಲಿ ಶಾಸಕ ಅಮೃತ ದೇಸಾಯಿ(MLA Amrit desai) ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿದರೆ ಕಳೆದ ಬಾರಿಯಂತೆ ಈ ಬಾರಿಯೂ ಪಕ್ಷದ ಆದೇಶದಂತೆ ಅವರ ಗೆಲುವಿಗೆ ಶ್ರಮಿಸುತ್ತೇನೆ. ಒಂದು ವೇಳೆ ನನಗೆ ನೀಡಿದರೂ ಅವರು ಶ್ರಮಿಸುತ್ತಾರೆ. ಟಿಕೆಟ್‌ ಸಿಕ್ಕಿಲ್ಲ ಎಂದ ಮಾತ್ರಕ್ಕೆ ಪಕ್ಷ ಬಿಡುವ ಪ್ರಶ್ನೆ ಇಲ್ಲ ಅಥವಾ ಪಕ್ಷೇತರ ಸ್ಪರ್ಧಿಸುವ ಅಗತ್ಯತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಜೊತೆಗೆ ಗ್ರಾಮೀಣದಲ್ಲಿ ಶಾಸಕ ಅಮೃತ ದೇಸಾಯಿ ಅಭಿವೃದ್ಧಿ ಕೆಲಸಗಳಲ್ಲಿ ಹಿಂದೆ ಬಿದ್ದಿಲ್ಲ ಎಂದೂ ಹೇಳಿದರು.

ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಬ್ರಾಹ್ಮಣರು. ಜಾತಿ ನೋಡಿ ಪದೇ ಪದೇ ಆಯ್ಕೆ ಮಾಡಲಾಗಿದೆಯೇ ಎಂದ ಅವರು, ಕ್ಷೇತ್ರದಲ್ಲಿ ಜನರೊಂದಿಗೆ ಬೆರೆಯುವುದು, ಅವರೊಂದಿಗೆ ಹೊಂದಿರುವ ನಂಟು ಹಾಗೂ ಮಾಡುವ ಕೆಲಸಗಳಿಂದ ಜನರು ರಾಜಕಾರಣಿಗಳನ್ನು ಅಳೆಯುತ್ತಾರೆ. ಈ ಕಾರಣದಿಂದ ಜಾತಿ ವಿಷಯ ನಗಣ್ಯ ಎಂದರು.

ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ 140 ಸ್ಥಾನ ಖಚಿತ: ಜಗದೀಶ ಶೆಟ್ಟರ್‌ 

ಕುಂದಗೋಳದಲ್ಲಿ ಬಿಜೆಪಿ ರೋಡ್ ಶೋಓ: 

ರಸ್ತೆಯುದ್ದಕ್ಕೂ ಪುಷ್ಪವೃಷ್ಟಿ, ಎಲ್ಲೆಡೆ ರಾರಾಜಿಸಿದ ಬಿಜೆಪಿ ಧ್ವಜ, ಕೇಸರಿ ಟೋಪಿ, ಕೇಸರಿ ಶಲ್ಯೆ ಧರಿಸಿ ಗಮನ ಸೆಳೆದ ಬಿಜೆಪಿ ಕಾರ್ಯಕರ್ತರು, ಪ್ರಧಾನಿ ಮೋದಿ(PM Narendra Modi) ಹಾಗೂ ರಾಷ್ಟ್ರೀಯ ನಾಯಕರ ಪರ ಜಯ ಘೋಷಣೆ ಮೊಳಗಿಸಿದರು.

ಕುಂದಗೋಳ ಹಾಗೂ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕಂಡು ಬಂದ ದೃಶ್ಯವಿದು.

ಯಾತ್ರೆಯಲ್ಲಿ ಪಾಲ್ಗೊಳ್ಳಲು ಕ್ಷೇತ್ರದ ಆಕಾಂಕ್ಷಿಗಳು ಕಾರ್ಯಕರ್ತರು ಮತ್ತು ಅಪಾರ ಬೆಂಬಲಿಗರ ಜತೆಯಲ್ಲಿ ಆಗಮಿಸಿದರು. ಇನ್ನು ಕೆಲ ಆಕಾಂಕ್ಷಿಗಳು ವಿವಿಧ ಕಲಾತಂಡಗಳ ಮೆರವಣಿಗೆಯಲ್ಲಿ ಬೆಂಬಲಿಗರೊಂದಿಗೆ ಬಂದು ಯಾತ್ರೆಯ ಭಾಗವಾದರು. ಇನ್ನೊಂದೆಡೆ ಮಹಿಳೆಯರು ಸಹ ಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಶ್ರೀರಂಗಪಟ್ಟಣದ ಆಂಜನೇಯನಿಗೆ ಬಿಜೆಪಿಯಿಂದಲೇ ನ್ಯಾಯ: ಸಿ.ಟಿ.ರವಿ

ಕುಂದಗೋಳ: ತಾಲೂಕಿನ ಗುಡಗೇರಿಯಲ್ಲಿ ನಡೆದ ಯಾತ್ರೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಮೇಳಗಳು ಮೆರಗು ತಂದವು. ಮೋದಿ ಪರ ಜಯ ಘೋಷಗಳು ಮೊಳಗಿದವು. ಇದಕ್ಕೂ ಮುನ್ನ ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Follow Us:
Download App:
  • android
  • ios