ಬಿಜೆಪಿ ಅಂದ್ರೆ ಭ್ರಷ್ಟಜನತಾ ಪಾರ್ಟಿ: ಪ್ರಿಯಾಂಕ್ ಖರ್ಗೆ ವಾಗ್ದಾಳಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ‘ಮೈ ಭಿ ಖಾವೂಂಗಾ ತುಮ್ಕೋ ಭಿ ಖಿಲಾವೂಂಗಾ’ ಸ್ಲೋಗನ್ ಅಡಿಯಲ್ಲಿ ಕಾರ್ಯಾಚರಿಸುತ್ತಿದೆ. ಇವರದ್ದು ಬರೀ ಸುಳ್ಳುಗಳ ಸರ್ಕಾರ, ಚೋರ ಗುರು ಚಾಂಡಾಲ ಶಿಷ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಳ್ತಾ ಇದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಮಂಗಳೂರು (ಜ.21) : ರಾಜ್ಯದಲ್ಲಿ ಬಿಜೆಪಿ ಸರ್ಕಾರ ‘ಮೈ ಭಿ ಖಾವೂಂಗಾ ತುಮ್ಕೋ ಭಿ ಖಿಲಾವೂಂಗಾ’ ಸ್ಲೋಗನ್ ಅಡಿಯಲ್ಲಿ ಕಾರ್ಯಾಚರಿಸುತ್ತಿದೆ. ಇವರದ್ದು ಬರೀ ಸುಳ್ಳುಗಳ ಸರ್ಕಾರ, ಚೋರ ಗುರು ಚಾಂಡಾಲ ಶಿಷ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಳ್ತಾ ಇದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಸುರತ್ಕಲ್(Suratkal) ಜಂಕ್ಷನ್‌ನಲ್ಲಿ ಶುಕ್ರವಾರ ಮಂಗಳೂರು ಉತ್ತರ ಕಾಂಗ್ರೆಸ್(Congress) ಪಕ್ಷದ ವತಿಯಿಂದ ಆಯೋಜಿಸಿದ್ದ ‘ಸುಳ್ಳುಗಳ ವಿರುದ್ಧ ಸಮರ’ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
'ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಪ್ರಜಾಧ್ವನಿ ಯಾತ್ರೆ'
ಬಿಜೆಪಿ ಅಂದ್ರೆ ಭ್ರಷ್ಟಜನತಾ ಪಾರ್ಟಿ. ರಾಜ್ಯದಲ್ಲಿ ಗುತ್ತಿಗೆದಾರರು ನೇಣು ಹಾಕಿಕೊಳ್ಳುತ್ತಿದ್ದಾರೆ. ಇವರ ಡಬಲ್ ಎಂಜಿನ್ ಸರ್ಕಾರದಿಂದ ಜನರಿಗೆ ಭ್ರಷ್ಟಾಚಾರ ಭಾಗ್ಯ ಸಿಕ್ಕಿದೆಯೇ ಹೊರತು ಬೇರೇನೂ ಸಿಕ್ಕಿಲ್ಲ. ನಳಿನ್ ಕುಮಾರ್ ಕಟೀಲ್ ಅವರು ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇನೆ ಅಂತ ಹೇಳಿ ನಾಪತ್ತೆಯಾಗಿದ್ದಾರೆ. ನಿಮಗೆ ನಾಚಿಕೆ ಆಗುವುದಿಲ್ಲವೇ? ತಾಕತ್ತಿದ್ದರೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಮಾತನಾಡಿ, ನಾನು ಶಾಸಕನಾಗಿದ್ದಾಗ 62 ಕೋಟಿ ರು. ವೆಚ್ಚದಲ್ಲಿ ಸುರತ್ಕಲ್ ನೂತನ ಮಾರುಕಟ್ಟೆಸಂಕೀರ್ಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಶಿಲಾನ್ಯಾಸ ನೆರವೇರಿಸಿದ್ದೆ. 11 ಕೋಟಿ ರುಪಾಯಿ ವೆಚ್ಚದಲ್ಲಿ ಅರ್ಧ ಕಾಮಗಾರಿಯನ್ನೂ ಮಾಡಲಾಗಿತ್ತು. ಆದರೆ ಇಂದು ಬಿಜೆಪಿ ಕುಟಿಲ ರಾಜಕೀಯಕ್ಕೆ ಕಾಮಗಾರಿ ಅರ್ಧಕ್ಕೇ ನಿಂತಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಭವ್ಯ ನರಸಿಂಹಮೂರ್ತಿ, ನಿಕೇತ್ ರಾಜ್ ಮೌರ್ಯ, ನವೀನ್ ಡಿಸೋಜ, ಶಶಿಧರ ಹೆಗ್ಡೆ, ಗುಲ್ಜಾರ್ ಬಾನು, ಮಮತಾ ಗಟ್ಟಿ, ಗಿರೀಶ್ ಆಳ್ವ, ಪ್ರತಿಭಾ ಕುಳಾಯಿ, ಅನಿಲ್ ಕುಮಾರ್, ಉಮೇಶ್ ದಂಡೆಕೇರಿ, ಸುರೇಂದ್ರ ಕಂಬಳಿ, ಪುರುಷೋತ್ತಮ್ ಚಿತ್ರಾಪುರ, ಶಾಲೆಟ್ ಪಿಂಟೋ, ಮುಹಮ್ಮದ್ ಸಮೀರ್ ಕಾಟಿಪಳ್ಳ, ಶಶಿಕಲಾ ಪದ್ಮನಾಭ ಮತ್ತಿತರರು ಇದ್ದರು.
ಮುಂದಿನ 75 ದಿನ ಬಿಜೆಪಿ ವಿರುದ್ಧ ತೀವ್ರ ಹೋರಾಟ: ಸುರ್ಜೇವಾಲ
ಇದಕ್ಕೂ ಮೊದಲು ಬೈಕಂಪಾಡಿ ಎಪಿಎಂಸಿಯಿಂದ ಗೋವಿಂದದಾಸ್ ಕಾಲೇಜ್‌ತನಕ ಬೈಕ್ ರಾರಯಲಿ ನಡೆಯಿತು. ಪ್ರಿಯಾಂಕ್ ಖರ್ಗೆ ಅವರನ್ನು ಮೊಹಿಯುದ್ದೀನ್ ಬಾವ ಬೈಕ್‌ನಲ್ಲಿ ಕೂರಿಸಿ ತಾವೇ ರೈಡ್ ಮಾಡಿದರು. ಮುಂದೆ ಸುರತ್ಕಲ್ ಮಾರುಕಟ್ಟೆಮುಂಭಾಗದವರೆಗೆ ಪಾದಯಾತ್ರೆಯಲ್ಲಿ ನಾಯಕರು, ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಸಾಗಿಬಂದರು.