ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕಗೆ ಟಿಕೆಟ್‌ ಪಕ್ಕಾ ಆಗಿದ್ದರೂ ಆಂತರಿಕ ಸಮೀಕ್ಷೆಯಲ್ಲಿ ಪಕ್ಷದ ಪದಾಧಿಕಾರಿಗಳು ರೂಪಾಲಿ ಪರ ಭರ್ಜರಿ ಬ್ಯಾಟಿಂಗ್‌ ಮಾಡಿದ್ದಾಗಿ ತಿಳಿದುಬಂದಿದ್ದು, ಇದರಿಂದ ಪಕ್ಷದ ಕಾರ್ಯಕರ್ತರೂ ರೂಪಾಲಿ ಅವರಿಗೇ ಮಣೆ ಹಾಕಿದಂತಾಗಿದೆ.

ಕಾರವಾರ (ಏ.2) : ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕಗೆ ಟಿಕೆಟ್‌ ಪಕ್ಕಾ ಆಗಿದ್ದರೂ ಆಂತರಿಕ ಸಮೀಕ್ಷೆಯಲ್ಲಿ ಪಕ್ಷದ ಪದಾಧಿಕಾರಿಗಳು ರೂಪಾಲಿ ಪರ ಭರ್ಜರಿ ಬ್ಯಾಟಿಂಗ್‌ ಮಾಡಿದ್ದಾಗಿ ತಿಳಿದುಬಂದಿದ್ದು, ಇದರಿಂದ ಪಕ್ಷದ ಕಾರ್ಯಕರ್ತರೂ ರೂಪಾಲಿ ಅವರಿಗೇ ಮಣೆ ಹಾಕಿದಂತಾಗಿದೆ.

Add Asianetnews Kannada as a Preferred SourcegooglePreferred

ಪಕ್ಷದ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಗ್ರಾಮೀಣ ಹಾಗೂ ನಗರ ಮಂಡಳ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಸುಮಾರು 150ರಷ್ಟುಜನರು ಶಿರಸಿಯಲ್ಲಿ ನಡೆದ ಆಂತರಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಹುತೇಕ ಎಲ್ಲರೂ ರೂಪಾಲಿ ನಾಯ್ಕ ಅವರಿಗೆ ಟಿಕೆಟ್‌ ನೀಡುವಂತೆ ಸೂಚಿಸಿದ್ದಾರೆ. ಕೇವಲ ಬೆರಳೆಣಿಕೆಯಷ್ಟುಜನರು ಮಾತ್ರ ಬೇರೆ ಅಭ್ಯರ್ಥಿಗಳ ಹೆಸರು ಸೂಚಿಸಿದ್ದಾಗಿ ತಿಳಿದುಬಂದಿದೆ.

ಈ ಐದು ಮತಗಟ್ಟೆಯಲ್ಲಿ ಪೂರ್ಣ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸಲಿದ್ದಾರೆ!

ರೂಪಾಲಿ ನಾಯ್ಕ(Roopali naik MLA) ಶಾಸಕರಾದ ಮೇಲೆ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ(Karwar-Ankola assembly constituency)ದಲ್ಲಿ ಇದೆ ಮೊದಲ ಬಾರಿಗೆ ಬಿಜೆಪಿ ಸಂಘಟನಾತ್ಮಕವಾಗಿ ಬೆಳೆದು ನಿಂತಿದೆ. ಇದರಲ್ಲಿ ರೂಪಾಲಿ ನಾಯ್ಕ ಕೊಡುಗೆ ಸಾಕಷ್ಟಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು, ಅವರಲ್ಲಿ ಉತ್ಸಾಹ ತುಂಬಿ ಎಲ್ಲರ ಶ್ರಮದಿಂದ ಪಕ್ಷವನ್ನು ಬಲಿಷ್ಠಗೊಳಿಸಿದ್ದಾರೆ. ಬಹುಪಾಲು ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿಗರ ಆಡಳಿತ, ಕಾರವಾರ ನಗರಸಭೆ, ಅಂಕೋಲಾ ಪುರಸಭೆಗಳಲ್ಲಿ ಬಿಜೆಪಿಗೆ ಅಧಿಕಾರ, ವಿಧಾನಪರಿಷತ್‌ ಹಾಗೂ ಲೋಕಸಭೆ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ದೊರೆತ ಲೀಡ್‌ ಇದೆಲ್ಲವೂ ಬಿಜೆಪಿಯ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.

ಸಿಎಂ ಯಾರು ಆಗ್ತಾರೆ ಎಂಬುದು ಮುಖ್ಯವಲ್ಲ; ದೇಶ ಸಮೃದ್ಧವಾಗಬೇಕು: ಸಚಿವ ಕೋಟಾ

ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ, ಪಕ್ಷ ಸಂಘಟನೆ ಎರಡರಲ್ಲೂ ಗಮನಾರ್ಹ ಸಾಧನೆ ಮಾಡಿ ರೂಪಾಲಿ ನಾಯ್ಕ ಅವರಿಗೆ ಟಿಕೆಟ್‌ ನೀಡಿಕೆಯಲ್ಲಿ ಯಾವುದೇ ಅಪಸ್ವರ ಇರಲಿಲ್ಲ. ಇದೀಗ ಕಾರ್ಯಕರ್ತರೂ ರೂಪಾಲಿ ನಾಯ್ಕ ಅವರ ಪರವಾಗಿ ಬ್ಯಾಟ್‌ ಬೀಸಿರುವುದು ಬಿಜೆಪಿಯ ಸ್ಪರ್ಧಾಕಾಂಕ್ಷಿಗಳಿಗೆ ತಣ್ಣೀರೆರಚಿದಂತಾಗಿದೆ. ಪಕ್ಷದ ಮುಖಂಡ ಸುನೀಲಕುಮಾರರ್‌ ನೇತೃತ್ವದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಯಿತು.

Political Express: ಮಹಿಳಾ ಮತದಾರರಿಗೆ ಕೊಟ್ಟ ಬೆಳ್ಳಿ ಪೋಟೋ ಅಸಲಿಯತ್ತು ಬಯಲು! ಪ್ರೀತಂ ಗೌಡ ವಿರುದ್ಧ ಆಕ್ರೋಶ