ಈ ಐದು ಮತಗಟ್ಟೆಯಲ್ಲಿ ಪೂರ್ಣ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸಲಿದ್ದಾರೆ!
ಪ್ರಸಕ್ತ ನಡೆಯುವ ವಿಧಾನಸಭಾ ಚುನಾವಣೆ ಸುಗಮವಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕಾರವಾರ ಉಪವಿಭಾಧಿಕಾರಿ ಜಯಲಕ್ಷ್ಮೀ ರಾಯಕೋಡ ಹೇಳಿದರು.
ಕಾರವಾರ (ಏ.1) : ಪ್ರಸಕ್ತ ನಡೆಯುವ ವಿಧಾನಸಭಾ ಚುನಾವಣೆ ಸುಗಮವಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕಾರವಾರ ಉಪವಿಭಾಧಿಕಾರಿ ಜಯಲಕ್ಷ್ಮೀ ರಾಯಕೋಡ ಹೇಳಿದರು.
ಇಲ್ಲಿನ ಎಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರ(Ankola assembly constituency)ದಲ್ಲಿ ಒಟ್ಟು 262 ಮತಗಟ್ಟೆಗಳಿವೆ. ನಗರ ಪ್ರದೇಶದಲ್ಲಿ 66 ಮತ್ತು ಗ್ರಾಮೀಣ ಭಾಗದಲ್ಲಿ 196 ಮತಗಟ್ಟೆಗಳಿವೆ. 2,16,138 ಮತದಾರರಿದ್ದಾರೆ. ಅಂಕೋಲಾದ ಜೈಹಿಂದ್ ಹೈಸ್ಕೂಲ್(Jai hind highschool), ಶಿರಕುಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಡಗೇರಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಾರವಾರ ನಗರದ ಯೂನಿಟಿ ಹೈಸ್ಕೂಲ್, ಬಾಡದ ನ್ಯೂ ಹೈಸ್ಕೂಲ್ ಮಹಿಳಾ ಮತಗಟ್ಟೆಅಂದರೆ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುವ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸಿಎಂ ಯಾರು ಆಗ್ತಾರೆ ಎಂಬುದು ಮುಖ್ಯವಲ್ಲ; ದೇಶ ಸಮೃದ್ಧವಾಗಬೇಕು: ಸಚಿವ ಕೋಟಾ
ಅಂಗಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಶೇಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಕಲಚೇತನ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಅಂಕೋಲಾ ತಾಲೂಕಿನ ಅಜ್ಜಿಕಟ್ಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾರವಾರ ಸೆಂಟ್ ಮೈಕಲ್ ಕಾನ್ವೆಂಟ್ ಶಾಲೆಗಳಲ್ಲಿ ಯುವ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದಿವೇಕರ್ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅಂಕೋಲಾ ತಾಲೂಕಿನ ಬೆಳಾಬಂದರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದರಿ ಮತಗಟ್ಟೆನಿರ್ಮಿಸಲು ಉದ್ದೇಶಿಸಲಾಗಿದೆ ಮಾಹಿತಿ ನೀಡಿದರು.
ಮಜಲಿಗೆ ಸಿದ್ಧಾವಾಗುತ್ತಿದ್ದಾರೆ ಮಹಿಳಾ ಚಂಡೆವಾದಕರು!
ಶಿರಸಿ : ಯಕ್ಷಗಾನ ಕ್ಷೇತ್ರ ಈಗ ಪುರುಷ ಪ್ರಧಾನವಾಗಿಲ್ಲ. ಮಾತುಗಾರಿಕೆ, ನೃತ್ಯ, ಭಾಗವತಿಕೆಯಲ್ಲಿ ಮಹಿಳೆಯರೂ ತಾವೇನೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ಆದರೆ, ಯಕ್ಷಗಾನದ ಪ್ರಧಾನ ಭಾಗವಾದ ಚಂಡೆ ವಾದನದಲ್ಲಿ ಮಹಿಳಾ ಕಲಾವಿದರ ಸಂಖ್ಯೆ ಕಡಿಮೆ. ಈಗ ಈ ಕ್ಷೇತ್ರಕ್ಕೂ ಮಹಿಳೆಯರು ತರಬೇತಿ ಪಡೆದು ಪಳಗತೊಡಗಿದ್ದಾರೆ.
ಹೌದು, ಶಿರಸಿಯ ಯಕ್ಷ ಕಲಾ ಸಂಗಮ ಈ ವಿನೂತನ ಯತ್ನವನ್ನು ಆರಂಭಿಸಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದ 15ಕ್ಕೂ ಅಧಿಕ ಯುವತಿಯರು, ಮಹಿಳೆಯರು ಚಂಡೆ ವಾದನದ ಆಸಕ್ತಿ ತೋರುತ್ತಿದ್ದಾರೆ. ಈ ಕಲೆಯ ಒಂದೊಂದೇ ಸೂಕ್ಷ್ಮತೆಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.
Karnataka election 2023: ಕಾಂಗ್ರೆಸ್, ಬಿಜೆಪಿ ಕಾಲೆಳೆಯುವ ಆಟ ಜೋರು!
ಇಲ್ಲಿಯ ಆದರ್ಶ ವನಿತಾ ಸಮಾಜದಲ್ಲಿ ಖ್ಯಾತ ಚಂಡೆ ವಾದಕ ಪ್ರಶಾಂತ ಹೆಗಡೆ ಈ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ. ಶುಕ್ರವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲೆ ಅಹಲ್ಯಾ ಹೆಗಡೆ, ಮಹಿಳೆಗೆ ಕಲಿಯುವ ಅವಕಾಶ ಅತ್ಯಗತ್ಯ. ಯಕ್ಷಗಾನ ಗಂಡು ಕಲೆ ಎಂದ ಮಾತ್ರಕ್ಕೆ ಹೆಂಗಸರಿಗೆ ಕಲಿಯಲು ಸಾಧ್ಯವಿಲ್ಲ ಎಂಬರ್ಥವಲ್ಲ. ಯಕ್ಷಗಾನದಲ್ಲಿ ಹಾಡುಗಾರಿಕೆಯ ಜತೆ ಮಾತುಗಾರಿಕೆ ಸಹ ಪೂರಕ. ಪೌರಾಣಿಕ ಕಥೆಗಳು ಯಕ್ಷಗಾನದ ಮೂಲಕ ಮುಂದಿನ ಜನಾಂಗಕ್ಕೆ ಸಾಗಲಿ ಎಂದರು.