Assembly election: ಬಿಜೆಪಿ ಅಯೋಗ್ಯ ಸರ್ಕಾರ ಮತದಾರರ ಆತ್ಮವನ್ನೆ ಕಸಿಯುತ್ತಿದೆ: ಎಚ್. ವಿಶ್ವನಾಥ್‌ ಕಿಡಿ

ಚುನಾವಣೆ ಅಂದ್ರೆ ಎಷ್ಟು ದುಡ್ಡಿಟ್ಟಿದ್ದೀಯಾ ಅಂತಾರೆ 
ರಾಜಕಾರಣಿಗಳು ತಾಕತ್‌, ಧಮ್‌ ಬಗ್ಗೆ ಮತಾಡಿ ಕನ್ನಡ ಭಾಷೆ ಕೊಲ್ಲುತ್ತಿದ್ದಾರೆ
ಮ್ಯಾಜಿಕ್‌ ನಂಬರ್‌ ಡಬ್ಬಕ್ಕೆ ತುಂಬಿಕೊಳ್ತೀರಾ.?

BJP incompetent government is stealing the soul of voters H Vishwanath Outrage sat

ಹುಬ್ಬಳ್ಳಿ (ಜ.31): ಬಿಜೆಪಿಯವರೆಲ್ಲ ಯಡವಟ್ಟು ಗಿರಾಕಿ. ಶಿಕ್ಷಣ ವ್ಯವಸ್ಥೆ ಹಾಳು ಮಾಡಿದ್ದಾರೆ. ಶಾಲೆಗೆ ಕಾವಿ ಬಣ್ಣ ಹೊಡೆಯೋದು ಒಂದು ಯೋಜನೆನಾ? ಬರೀ ಈ ಸರ್ಕಾರದಲ್ಲಿ ದುಡ್ಡು.. ದುಡ್ಡು.. ಇದು ಸರ್ಕಾರಾನಾ? ಬಿಜೆಪಿ ಅಯೋಗ್ಯ ಸರ್ಕಾರವಾಗಿದ್ದು, ಮತದಾರರ ಆತ್ಮವನ್ನೆ ಕಸಿಯುತ್ತಿದೆ. ಮತದಾರ ಹೆಸರನ್ನೆ ಡಿಲೀಟ್ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ನಮ್ಮ‌ ಮ್ಯಾಜಿಕ್ 150 ಅಂತಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್  115 ನಮ್ಮ ಮ್ಯಾಜಿಕ್ ಅಂತಾರೆ. ಮತ್ತೊಂದೆಡೆ ಕುಮಾರಸ್ವಾಮಿ 123 ಅಂತಾರೆ. ಯಾರಪ್ಪ ನೀವು, ನೀವೆ ಡಬ್ಬ ತುಂಬಕೊಂಡ ಬಿಡ್ತೀರಾ..? ಟಿಕೆಟ್ ಗೆ ಹತ್ತು ಕೋಟಿ ಕೊಡ್ತೀವಿ ಅಂತೀದಾರೆ. ನಾವೆಲ್ಲ ಚುನಾಚಣೆಗೆ ನಿಲ್ಲೋಕೆ ಆಗಲ್ಲ. ಇವತ್ತು ಸೇವಾ ರಾಜಕಾರಣ ಹೋಯ್ತು. ನನ್ನನ್ನು ಒಳಗೊಂಡಂತೆ ರಾಜ್ಯದಲ್ಲಿ ಬಹುತೇಕ ರಾಜಕಾರಣಿಗಳು ಮೌಲ್ಯವನ್ನು ಕಳೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. 

ಇದು 'ಹಳ್ಳಿ ಹಕ್ಕಿ'ಯಲ್ಲ, ಹಾರುವ ಹಕ್ಕಿ: ವಿಶ್ವನಾಥ್ ಜಂಪಿಂಗ್ ಪುರಾಣದ ಕಾರಣ ಏನು?

ರಾಜಕಾರಣ ಹೊಲಸು ಹಿಡಿದಿದೆ: ನಾನು 50 ವರ್ಷದಿಂದ ರಾಜಕಾರಣ ನೋಡಿದ್ದೇನೆ. ಆದರೆ, ಈಗ ರಾಜಕಾರಣ ಹೊಲಸು ಹಿಡದಿದೆ. ಇವತ್ತು ಚುನಾವಣೆ ಎಂದರೆ ಎಷ್ಟು ದುಡ್ಡ ಇಟ್ಟಿದೀಯಾ ಅಂತಾರೆ. ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿ ತಾಕತ್, ಧಮ್ ಇದೆಯಾ ಅಂತಾರೆ. ಎಲ್ಲಿಗೆ ಹೋಗಿದೀವಿ ನಾವು.? ರಾಜಕಾರಣಿಗಳು ಕನ್ನಡ ಭಾಷೆಯನ್ನು‌ ಕೊಲ್ಲುತ್ತಿದ್ದಾರೆ. ಇವತ್ತು ಪಕ್ಷಕ್ಕಿಂತ ಪಕ್ಷದ ನಾಯಕರು ದೊಡ್ಡವಾರಾಗಿದ್ದಾರೆ. ಇವತ್ತು ಚುನಾವಣೆ ಕೂಡಾ ಹಾಗೆ ಆಗಿವೆ. ಇದು ರಿಪೇರಿ ಆಗಲೇಬೇಕು. ಇವತ್ತು ಚಳುವಳಿಗಳನ್ನ ಸ್ವಾಮೀಜಿಗಳ ಕಡೆ ಕೊಟ್ಟಿದ್ದೇವೆ ಎಂದರು.

ಮುಖ್ಯಮಂತ್ರಿಗಳು ಪುಡಿ ರೌಡಿ ತರಹ ಮಾತಾಡ್ತಾರೆ: ರಾಜ್ಯದಲ್ಲಿ ಮುಖ್ಯಮಂತ್ರು ಹಾಗೂ ಮಾಜಿ ಮುಖ್ಯಮಂತ್ರಿಗಳು ಪುಡಿ ರೌಡಿಗಳ ಹಾಗೆ ಮಾತನಾಡುತ್ತಿದ್ದಾರೆ. ನೀನ ಕದ್ದಿಲ್ವಾ.. ನೀನ ಕದ್ದಿಲ್ವಾ ಎಂದು ಮಾತಾಡ್ತಾರೆ. ಇದು ನಮೆಗಲ್ಲ ಆದರ್ಶನಾ. ರಾಜಕೀಯ ನಾಯಕರು ತಮ್ಮ ಮೌಲ್ಯ ಕಳೆದುಕೊಂಡಿದ್ದೇವೆ. ನನ್ನು ಸೇರಿಸಿ ಎಲ್ಲರೂ ಮೌಲ್ಯ ಕಳೆದುಕೊಂಡಿದ್ದೇವೆ. ಮೌಲ್ಯ ಕಳೆದುಕೊಂಡ ಮೇಲೆ ಯಾರ ಮನೆ ಮುಂದೆ ನಿಲ್ತೀರಿ ನೀವು..? ಚುನಾವಣೆಗೆ ನಿಲ್ಲಲ್ಲ. ಒಂದು ಟಿಕೆಟ್‌ಗೆ ೧೦ ಕೋಟಿ ರೂಪಾಯಿಗಳನ್ನು ಕೊಡ್ತೀವಿ ಅಂತೀದಾರೆ. ನಾವೆಲ್ಲ ಚುನಾಚಣೆಗೆ ನಿಲ್ಲೋಕೆ ಆಗಲ್ಲ. ಇವತ್ತು ಸೇವಾ ರಾಜಕಾರಣ ಹೋಯ್ತು. ಕಾಂಗ್ರೆಸ್ ನಮ್ಮ ತಾಯಿ ಆಗಿದೆ. ನಾನು ಯಾವ ಪಾರ್ಟಿ ತೆಗಳೋಕೆ ಹೋಗಲ್ಲ ಎಂದು ಹೇಳಿದರು.

ಭೈರಪ್ಪರಿಗೆ ಪದ್ಮಭೂಷಣ ದೊರಕಿರುವುದು ಸಾಹಿತ್ಯ ಕೃಷಿಯಿಂದ, ಮೋದಿಯಿಂದಲ್ಲ: ವಿಶ್ವನಾಥ್‌

ಯಾರನ್ನು ಯಾರೂ ಮುಗಿಸೋಕೆ ಆಗಲ್ಲ: ರಮೇಶ್‌ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಆರೋಪ ಮಾಡಿದ್ದಾರೆ. ಜೊತೆಗೆ, ಡಿಕೆಶಿ ರಾಜಕೀಯ ಅಂತ್ಯ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ಯಾರು ಯಾರನ್ನೂ ಮುಗಿಸೋಕೆ ಆಗಲ್ಲ. ನಾವೆಲ್ಲ ಒಟ್ಟಿಗೆ ಇದ್ದವರು, ರಮೇಶ್ ಹಾಗೆ ಮಾತಾಡಬಾರದು. ನಾವೆಲ್ಲ ಬಂದು ಬಿಜೆಪಿ ಸರ್ಕಾರ ತಂದಿದ್ದೇವೆ. ಅಂತಿಮವಾಗಿ ಜನರೇ ಮುಖ್ಯವಾಗಿದ್ದಾರೆ. ಜನ ಏನಾದ್ರೂ ಮಾಡಬಹುದು ಆದರೆ ನಾವೇನೂ ಮಾಡೋಕ ಆಗಲ್ಲ. ಜಾರಕಿಹೊಳಿ ಕುಟುಂಬಕ್ಕೂ ಈ ರೀತಿ ಮಾಡೋದು ಗೌರವ ಅಲ್ಲ ಎಂದು ಡಿ.ಕೆ. ಶಿವಕುಮಾರ್ ಬಗ್ಗೆ ಎಚ್.ವಿಶ್ವನಾಥ್‌ ಸಾಫ್ಟ್ ಕಾರ್ನರ್ ತೋರಿಸಿದ್ದಾರೆ.

Latest Videos
Follow Us:
Download App:
  • android
  • ios