Asianet Suvarna News Asianet Suvarna News

ಬಿಜೆಪಿ ಮುಖಂಡ ಯತ್ನಾಳ್‌ಗೆ ಬಂತು ವಾರ್ನಿಂಗ್

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸದಂತೆ ಎಚ್ಚರಿಸಲಾಗಿದೆ. 

BJP High command Warning to Basanagouda patil yatnal snr
Author
Bengaluru, First Published Feb 23, 2021, 9:46 AM IST

 ನವದೆಹಲಿ (ಫೆ.23):  ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಗರಂ ಆಗಿರುವ ಬಿಜೆಪಿ ಹೈಕಮಾಂಡ್‌, ಪಕ್ಷದ ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸದಂತೆ ಕಟ್ಟು​ನಿ​ಟ್ಟಿನ ಸೂಚನೆ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೈಕಮಾಂಡ್‌ ಬಲಾವ್‌ ಹಿನ್ನೆಲೆಯಲ್ಲಿ ಯತ್ನಾಳ್‌ ಸೋಮವಾರ ದೆಹ​ಲಿಗೆ ತೆರಳಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ಯತ್ನಾಳ್‌ ಅವರ ಬಹಿ​ರಂಗ ಹೇಳಿ​ಕೆ​ಗಳ ಕುರಿತು ಅವರು ತೀವ್ರ ಆಕ್ಷೇಪ ವ್ಯಕ್ತ​ಪ​ಡಿ​ಸಿ​ದ್ದಾರೆ ಎನ್ನ​ಲಾ​ಗಿ​ದೆ.

ಪಂಚಮಸಾಲಿ ಹೋರಾಟದಲ್ಲಿ ಕಾಣಿಸಿಕೊಂಡ ಯತ್ನಾಳ್‌ಗೆ ಶಾಕ್; ಹೈಕಮಾಂಡ್‌ನಿಂದ ಬುಲಾವ್ ...

ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದ್ದು, ಸರ್ಕಾರ ಸಮುದಾಯದ ಬೇಡಿಕೆ ಈಡೇರಿಸಬೇಕಿದೆ ಎಂದು ಯತ್ನಾಳ್‌ ತಿಳಿ​ಸಿ​ದಾ​ಗಲೂ ಈ ಸಂಬಂಧ ಯಾವುದೇ ರೀತಿಯ ಬಹಿ​ರಂಗ ಹೇಳಿಕೆ ನೀಡದಂತೆ ನಡ್ಡಾ ನಿರ್ದೇ​ಶನ ನೀಡಿ​ದ್ದಾರೆ. ಪಕ್ಷದಲ್ಲಿ ಮುಂದುವರಿಯಲು ಬಯಸಿದಲ್ಲಿ, ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸಬಾರದು. ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಇರುಸು ಮುರುಸು ಉಂಟು ಮಾಡುವ ನಡೆ ಮುಂದು​ವ​ರಿ​ದರೆ ಶಿಸ್ತು ಕ್ರಮ ಅನಿವಾರ್ಯ ಎಂಬ ಎಚ್ಚರಿಕೆಯನ್ನೂ ನೀಡಿದ್ದು, ತಮ್ಮ ಭೇಟಿ ಬಳಿಕ ಪಕ್ಷದ ಶಿಸ್ತು ಪಾಲನಾ ಸಮಿತಿ ಎದುರು ಹಾಜರಾಗುವಂತೆಯೂ ನಡ್ಡಾ ಸೂಚಿಸಿದ್ದಾರೆ ಎಂದು ತಿಳಿದು ಬಂದಿ​ದೆ.

ಹೈಕ​ಮಾಂಡ್‌ ಸೂಚನೆ ಹಿನ್ನೆ​ಲೆ​ಯಲ್ಲಿ ದಿಢೀರ್‌ ದೆಹ​ಲಿಗೆ ದೌಡಾ​ಯಿ​ಸಿದ್ದ ಯತ್ನಾಳ್‌ ಮಾಧ್ಯ​ಮ​ಗ​ಳಿಂದಲೂ ದೂರ​ವು​ಳಿ​ದಿದ್ದು, ಕರ್ನಾ​ಟಕ ಭವ​ನದ ಬದ​ಲು ಖಾಸಗಿ ಹೋಟೆಲ್‌ನಲ್ಲಿ ಉಳಿ​ದು​ಕೊಂಡಿ​ದ್ದಾ​ರೆ.

Follow Us:
Download App:
  • android
  • ios