* ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಲಂಚ ಕೊಡಬೇಕಿತ್ತು* ನಾಡಿನಲ್ಲಿ ಗಲಾಟೆ, ದೊಂಬಿಗಳನ್ನು ಎಬ್ಬಿಸುತ್ತಿರು ಪ್ರತಿಪಕ್ಷಗಳು* ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಗೋವಿಂದ ಕಾರಜೋಳ
ಮಹಾಲಿಂಗಪುರ(ಜೂ.19): ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಜನಸಾಮಾನ್ಯರ ಮತ್ತು ಊರಿನ ಅಭಿವೃದ್ಧಿ ಕೆಲಸಗಳಿಗೆ ಲಂಚ ಕೊಡಬೇಕಾಗಿತ್ತು, ಈಗ ಪ್ರಧಾನಿ ನರೇಂದ್ರ ಮೋದಿ ಎಲ್ಲ ಭ್ರಷ್ಟವ್ಯವಸ್ಥೆ ತೊಲಗಿಸಿ ದೇಶವನ್ನು ಪ್ರಗತಿಯತ್ತ ಒಯ್ಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
ಸಮೀಪದ ಬೆಳಗಲಿ ಪಟ್ಟಣದ ರನ್ನ ಸಾಂಸ್ಕೃತಿಕ ಭವನದಲ್ಲಿ ಶನಿವಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ 10.16ಕೋಟಿ ಉದ್ಘಾಟನೆ ಮತ್ತು ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಾ 70 ವರ್ಷ ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಮಾಡದಿರುವ ಅಭಿವೃದ್ಧಿ ಕೆಲಸಗಳನ್ನು ನನ್ನ ಅಧಿಕಾರವಧಿಯಲ್ಲಿ ಆಗಿದ್ದು ಇದಕ್ಕೆ ಸೂಕ್ತ ದಾಖಲೆ ಇದೆ, ತಮ್ಮದೇನಾದರೂ ಕೊಡುಗೆ ಇದ್ದರೆ ತಿಳಿಸಿ ಎಂದು ಸಚಿವರು ಬಹಿರಂಗ ಸವಾಲು ಹಾಕಿ, ಪ್ರತಿಪಕ್ಷಗಳಿಗೆ ಕೆಲಸವಿಲ್ಲದರಿಂದ ವಿನಾಕಾರಣ ಟೀಕೆ ಮಾಡುತ್ತ ನಾಡಿನಲ್ಲಿ ಗಲಾಟೆ, ದೊಂಬಿಗಳನ್ನು ಎಬ್ಬಿಸುತ್ತಿವೆ ಎಂದು ಕಾಂಗ್ರೆಸ್ ಗುರಿಯಾಗಿಸಿ ಖಾರವಾಗಿ ನುಡಿದರು.
ಲೋಕಾ ಬಲಗೊಳಿಸಲು ಚಿಂತನೆ ಎಂದ ಗೋವಿಂದ ಕಾರಜೋಳ
ಕೇಂದ್ರ ಸಣ್ಣ ರೈತರ ಖಾತೆಗಳಿಗೆ 10 ಸಾವಿರ, ಮುದ್ರಾ, ಆಯುಶ್ಮಾನ, ರೈತ ಸಮ್ಮಾನ ಮುಂತಾದವುಗಳಿಗೆ 2090 ಕೋಟಿ, ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಸರ್ಕಾರಗಳು ಸೇರಿ ಪ್ರತಿ ಕ್ಷೇತ್ರಕ್ಕೆ 100ಕೋಟಿ, ಅಲ್ಲದೆ ಎರಡು ವರ್ಷಗಳಲ್ಲಿ ದೇಶದ ಪ್ರತಿ ಮನೆಗೂ ಜಲ ಜೀವನ ಯೋಜನೆಯ ಶುದ್ಧ ಕುಡಿಯುವ ನೀರು ಪೂರೈಕೆ ಹೀಗೆ ನೂರಾರು ಯೋಚನೆಗಳಿಂದ ದೇಶದ ಮೆಚ್ಚಿನ ಪ್ರಧಾನಿಳಾಗಿ ಮತ್ತು ವಿಶ್ವದ ಶ್ರೇಷ್ಠ ನಾಯಕರಲ್ಲಿ ಮೋದಿಯವರು ಗುರುತಿಸುವಂತಾಗಿ, ದೇಶದ ಆಸ್ತಿಯಾಗಿ, ಘನತೆ ಗೌರವ ಹೆಚ್ಚಿಸಿದ್ದಾರೆ. ಬರುವ ದಿನಗಳಲ್ಲಿ ಕ್ಷೇತ್ರದ ಪ್ರತಿ ಹಳ್ಳಿ, ಪಟ್ಟಣಗಳಿಗೂ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ನೀಡಲಾಗುವುದು ಎಂದರು.
ಜೈಲಿಗೆ ಹೋಗಿ ಬಂದ ಕಾಂಗ್ರೆಸ್ಸಿಗರಿಂದ ಬಿಜೆಪಿಗೆ ನೈತಿಕ ಪಾಠ ಬೇಕಿಲ್ಲ: ಸಚಿವ ಕಾರಜೋಳ ವಾಗ್ದಾಳಿ
ಮುಧೋಳ ತಾಲೂಕ ಭಾಜಪ ಉಪಾಧ್ಯಕ್ಷ ಪಂಡಿತ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಸನ್ 2021-22ನೇ ಸಾಲಿನ ವಾಜಪೇಯಿ ನಗರ ವಸತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ ನಿವಾಸ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜುರಾತಿ ಮತ್ತು ಕಾಮಗಾರಿ ಆದೇಶ ಪತ್ರಗಳನ್ನು ಸಚಿವರು ವಿತರಿಸಿದರು. ಮಾಜಿ ಪಪಂ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಸದಾಶಿವ ಸಂಕ್ರಟ್ಟಿ, ಈಶ್ವರ ಅಮಾತಿ, ನಾಗಪ್ಪ ಅಂಬಿ, ಚಿಕ್ಕಪ್ಪ ನಾಯಕ, ರಂಗಪ್ಪ ಒಂಟಗೋಡಿ, ಲಕ್ಕಪ್ಪ ಮೆಡ್ಯಾಗೋಳ, ಅಲ್ಲಪ್ಪ ಸಂಕ್ರಟ್ಟಿ, ರಾಮನಗೌಡ ಪಾಟೀಲ, ಬಸವರಾಜ ದೊಡ್ಡಟ್ಟಿ, ಕೆ.ಆರ್.ಮಾಚಪ್ಪನವರ, ಆರ್.ಟಿ.ಪಾಟೀಲ, ಶ್ರೀಶೈಲಗೌಡ ಪಾಟೀಲ, ಶಿವನಗೌಡ ಪಾಟೀಲ, ಸಂಗನಗೌಡ ಪಾಟೀಲ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಇದ್ದರು. ಪಲ್ಲವಿ ಮಂಡಿ ಪ್ರಾರ್ಥಿಸಿದರು. ಅಮೃತಾ ಕುಂಬಾರ ಸ್ವಾಗತ ಗೀತೆ ಹಾಡಿದರು. ಮಲ್ಲು ಕ್ವಾಣ್ಯಾಗೋಳ ಸ್ವಾಗತಿಸಿ. ಕೆ.ಬಿ.ಕುಂಬಾಳಿ, ಕೆ.ಎ.ಧಡೂತಿ ನಿರೂಪಿಸಿದರು.
ಅಮೃತ ನಗರೋತ್ಥಾನ (ಮುನ್ಸಿಪಾಲಿಟಿ) ಹಂತ 4ರಡಿ ಲಕ್ಷಗಳಲ್ಲಿ, ಪಪಂ ನೂತನ ಕಟ್ಟಡಕ್ಕೆ -2ಕೋ.51ಲಕ್ಷ, ಸಾರ್ವಜನಿಕ ಗ್ರಂಥಾಲಯ ನಿರ್ಮಾಣ- 70ಲಕ್ಷ, ಪ.ಜಾತಿ/ಪಂಗಡಗಳಿಗೆ ಕಾಯ್ದಿರಿಸಿದ ಅನುದಾನ- 102.43ಲಕ್ಷ, ಬಡಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಅನುದಾನ-30.81ಲಕ್ಷ, ವಿಕಲಚೇತನರಿಗಾಗಿ- 21.2 5ಲಕ್ಷ, ಲೋಕೋಪಯೋಗಿ ಇಲಾಖೆ ಅಡಿ ಬೆಳಗಲಿ ಪಟ್ಟಣದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ- 150ಲಕ್ಷ, ಜಿಎಲ್ ಬಿಸಿ ಇಲಾಖೆ ಅಡಿ ದುರ್ಗಾದೇವಿ ಸಮುದಾಯ ಭವನಕ್ಕೆ -2ಕೋಟಿ. ಮಾಳಿ ಸಮುದಾಯ ಭವನಕ್ಕೆ -30ಲಕ್ಷ ಮಳಲಿ ಗ್ರಾಮದವರೆಗೆ ಸಿಸಿ ರಸ್ತೆ -1ಕೋಟಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿ ಪಟ್ಟಣದಲ್ಲಿ ಮೂರು ಅಂಗನವಾಡಿ ಕಟ್ಟಡಗಳಿಗೆ -36ಲಕ್ಷ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
