ಆಘಾತಕಾರಿ ವಿಷಯ ಸೃಷ್ಟಿಸಿ ಮತ ಪಡೆಯುವ ಕಲೆ ಬಿಜೆಪಿಗಿದೆ : ಪ್ರಿಯಾಂಕ ವಾಗ್ದಾಳಿ
ಚುನಾವಣೆ ಸಮಿಪಿಸುತ್ತಿದ್ದಂತೆ ದೇಶದಲ್ಲಿ ವಿವಿಧ ಆಘಾತಕಾರಿ ವಿಷಯಗಳನ್ನು ಸೃಷ್ಟಿಸಿ ಅವುಗಳ ಆಧಾರದ ಮೇಲೆ ಮತದಾರರ ಮತ ಪಡೆಯುವ ಕಲೆ ಬಿಜೆಪಿಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಪಾದಿಸಿದರು.
ದಾಂಡೇಲಿ (ಏ.30) : ಚುನಾವಣೆ ಸಮಿಪಿಸುತ್ತಿದ್ದಂತೆ ದೇಶದಲ್ಲಿ ವಿವಿಧ ಆಘಾತಕಾರಿ ವಿಷಯಗಳನ್ನು ಸೃಷ್ಟಿಸಿ ಅವುಗಳ ಆಧಾರದ ಮೇಲೆ ಮತದಾರರ ಮತ ಪಡೆಯುವ ಕಲೆ ಬಿಜೆಪಿಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ(Priyanka gandhi) ಆಪಾದಿಸಿದರು.
ನಗರದ ಡಿಎಫ್‌ಎ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಧಾನಸಭೆಯ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು.
ರಾಹುಲ್ ಕೈಲಿ ಅಧಿಕಾರ ಇದ್ದಿದ್ರೆ ಲಸಿಕೆ ಸಿಗ್ತಿತ್ತಾ? ಸ್ಮೃತಿ ಇರಾನಿ ಪ್ರಶ್ನೆ
ಕಳೆದ 9 ವರ್ಷದಿಂದ ಕೇಂದ್ರದಲ್ಲಿ ಹಾಗೂ ಮೂರುವರೆ ವರ್ಷಗಳಿಂದ ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ. ಬೆಲೆ ಏರಿಕೆ, ಧರ್ಮ, ಜಾತಿಗಳೊಳಗೆ ವೈಷಮ್ಯ ಬಿತ್ತುವುದು ಬಿಟ್ಟರೆ ಇವರು ಯಾವ ಅಭಿವೃದ್ಧಿ ಕೆಲಸವನ್ನೂ ಮಾಡಿಲ್ಲ. ಇಂದು ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಲಂಚಾವತಾರ ತಾಂಡವಾಡುತ್ತಿದೆ. ಶೇ. 40 ಪರ್ಸೆಂಟ್ ಸರ್ಕಾರ ಎನ್ನುವುದು ಈಗಾಗಲೇ ದೃಢಪಟ್ಟಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಅಡಿಗೆ ಅನಿಲ ದರ 1200 ರೂ. ಮುಟ್ಟಿದೆ. ಪೆಟ್ರೋಲ್ ಬೆಲೆ ಗಗನಕ್ಕೆ ಮುಟ್ಟಿದೆ. ಬಡವರು, ಜನಸಾಮಾನ್ಯರು ಬದುಕು ಸಾಗಿಸುವುದು ಕಷ್ಟಸಾಧ್ಯವಾಗಿದೆ. ಆದರೆ ಅದನ್ನು ಲೆಕ್ಕಿಸದೇ ಶ್ರೀಮಂತ ಬಂಡವಾಳದಾರರಿಗೆ ಇನ್ನು ಹೆಚ್ಚಿನ ಅನುಕೂಲ ಮಾಡಿಕೊಟ್ಟು ಹಣ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಅದಾನಿ, ಅಂಬಾನಿಯಂತವರನ್ನು ಬೆಳಸುತ್ತಿದೆ ಎಂದು ಆರೋಪಿಸಿದ ಅವರು, ಎಲ್ಲ ರಂಗದಲ್ಲಿ ಭ್ರಷ್ಟತೆಯನ್ನೇ ತನ್ನ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯುವ ಸಮಯ ಈಗ ಬಂದಿದೆ ಎಂದರು.
ನಿಮ್ಮ ಬದುಕು ಚೆÜನ್ನಾಗಿರಬೇಕು ಎಂದರೆ ಕಾಂಗ್ರೆಸ್‌ಗೆ ಮತ ಹಾಕಿ. ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಾವು ಅಧಿಕಾರಕ್ಕೆ ಬಂದರೆ ನಮ್ಮ ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಹಿಳೆಗೆ ಪ್ರತಿ ತಿಂಗಳು 2000 ರೂ., 200 ಯುನಿಟ್ ಉಚಿತ ವಿದ್ಯುತ್, ಪದವಿ ಮಾಡಿದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3000ರೂ., ತಿಂಗಳಿಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಗ್ಯಾರಂಟಿ ಕಾರ್ಡ್‌ನ್ನು ನೀಡಿದ್ದೇವೆ. ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯನ್ನು ಅಧಿಕಾರ ಪಡೆದ ತಕ್ಷಣದಿಂದ ಜಾರಿಗೆ ತರುತ್ತೇವೆ ಎಂದರು.
ಚುನಾವಣೆಯ ಪ್ರಚಾರಕ್ಕಾಗಿ ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯದಲ್ಲಿ ಬರುತ್ತಿದ್ದೇನೆ. ಇಲ್ಲಿ ಬರುವಾಗ ನನಗೆ ಅತೀವ ಖುಷಿಯಾಗುತ್ತದೆ. ಕರ್ನಾಟಕ ಎಷ್ಟೊಂದು ಸುಂದರ ರಾಜ್ಯವಾಗಿದೆ. ಇದು ನನಗೆ ಮತ್ತು ನನ್ನ ದೇಶಕ್ಕೆ ಎಷ್ಟೊಂದು ಸ್ವಾಭಿಮಾನದ ವಿಷಯ. ಅದರಲ್ಲೂ ದಾಂಡೇಲಿಗೆ ಬರುವಾಗ ಇಲ್ಲಿನ ಪರಿಸರ ಹಾಗೂ ಅರಣ್ಯದ ಸುಂದರತೆಯನ್ನು ಆಸ್ವಾದಿಸಿದೆ. ಈ ಪರಿಸರದಲ್ಲಿ ಇರುವ ನೀವೆಲ್ಲರೂ ಧನ್ಯರು ಎಂದ ಅವರು, ದಾಂಡೇಲಿ ನಗರ ಒಂದು ಮಿನಿ ಭಾರತವಾಗಿದೆ. ಇಲ್ಲಿ ದೇಶದ ಎಲ್ಲ ಭಾಗಗಳ ಜನರಿದ್ದಾರೆ. ಎಲ್ಲರೂ ಇಲ್ಲಿ ಕೂಡಿ ಬಾಳುತ್ತಿರುವುದನ್ನು ತಿಳಿದು ಖುಷಿಯಾಯಿತು ಎಂದರು.
Karnataka election 2023: ಮತಬೇಟೆಗೆ ಸ್ಟಾರ್ ನಾಯಕರ ವಾರ್!
ಕಾಂಗ್ರೆಸ್ ಅಭ್ಯರ್ಥಿ ಶಾಸಕ ಆರ್.ವಿ. ದೇಶಪಾಂಡೆ ಪ್ರಾಸ್ತಾವಿಕ ಮಾತನಾಡಿ ಮತಯಾಚಿಸಿದರು. ವೇದಿಕೆಯಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ, ಎಐಸಿಸಿ ಕಾರ್ಯದರ್ಶಿ ಭೂಪಾ, ಉ.ಕ. ಜಿಲ್ಲಾಧ್ಯಕ್ಷ ಸಾಯಿ ಗಾವಂಕರ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.