ಎಸ್‌ಟಿ ಸಮುದಾಯಕ್ಕೆ ಬಿಜೆಪಿ ನ್ಯಾಯ ಒದಗಿಸಿದೆ: ಸಂಸದ ಮುನಿಸ್ವಾಮಿ

ಎಸ್‌ಟಿ ಸಮುದಾಯಕ್ಕೆ ಯಾವುದೇ ಪಕ್ಷಗಳು ನ್ಯಾಯ ಒದಗಿಸಿಲ್ಲ. ಕೇವಲ ಬಿಜೆಪಿ ಮಾತ್ರ ನ್ಯಾಯ ಒದಗಿಸಿದೆ ಎಸ್‌.ಟಿ ಸಮುದಾಯದ ಮುರ್ಮ ಅವರನ್ನು ರಾಷ್ಟ್ರಪತಿ ಮಾಡಿದ್ದು ಸಹ ಬಿಜೆಪಿ ಈ ಮೂಲಕ ನಿಜವಾದ ಸಾಮಾಜಿಕ ಸಮಾನತೆ ಅನುಷ್ಠಾನಗೊಳಿಸಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.

BJP has provided justice to the ST community says mp muniswamy gvd

ಶ್ರೀನಿವಾಸಪುರ (ನ.04): ಎಸ್‌ಟಿ ಸಮುದಾಯಕ್ಕೆ ಯಾವುದೇ ಪಕ್ಷಗಳು ನ್ಯಾಯ ಒದಗಿಸಿಲ್ಲ. ಕೇವಲ ಬಿಜೆಪಿ ಮಾತ್ರ ನ್ಯಾಯ ಒದಗಿಸಿದೆ ಎಸ್‌.ಟಿ ಸಮುದಾಯದ ಮುರ್ಮ ಅವರನ್ನು ರಾಷ್ಟ್ರಪತಿ ಮಾಡಿದ್ದು ಸಹ ಬಿಜೆಪಿ ಈ ಮೂಲಕ ನಿಜವಾದ ಸಾಮಾಜಿಕ ಸಮಾನತೆ ಅನುಷ್ಠಾನಗೊಳಿಸಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು. ನ. 20 ರಂದು ಬಳ್ಳಾರಿಯಲ್ಲಿ ನಡೆಯುವ ಎಸ್‌.ಟಿ ಸಮಾವೇಶದ ಸಂಬಂಧ ಬುಧವಾರ ಪಟ್ಟಣದ ಮಾರುತಿ ಸಭಾಭವನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ ಪಕ್ಷ ಅಂಬೇಡ್ಕರ್‌ ಅವರಿಗೆ ಮೋಸ ಮಾಡಿದೆ ಅಂತಹ ಪಕ್ಷದಿಂದ ಎಸ್ಸಿ, ಎಸ್ಟಿಸಮುದಾಯಗಳಿಗೆ ಯಾವ ನ್ಯಾಯ ನೀರಿಕ್ಷೀಸಬಹುದು ಎಂದರು.

ಎಲ್ಲ ಸಮುದಾಯಗಳ ಅಭಿವೃದ್ಧಿ: ಭಾರತೀಯ ಜನತಾ ಪಕ್ಷ ಎಲ್ಲಾ ಸಮುದಾಗಳ ಅಭಿವೃದ್ದಿಗೆ ಶ್ರಮಿಸುತ್ತಿದೆ ಕಾಂಗ್ರೆಸ್‌ ನೈಪತ್ಯಕ್ಕೆ ಸರಿಯುತ್ತಿದೆ ಜೋಡೋ ಯಾತ್ರೆ ಮೂಲಕ ಹೊಸ ವೇಶದಲ್ಲಿ ಜನತೆ ಮುಂದೆ ಬಂದಿರುವ ಕಾಂಗ್ರೆಸ್‌ ಸ್ವಾತಂತ್ರತ್ರ್ಯ ಪೂರ್ವದಲ್ಲಿ ದೇಶವನ್ನು ಒಡೆದು ಪಾಕಿಸ್ಥಾನ ಬಾಂಗ್ಲಾ ಸೇರಿದಂತೆ ಚಿನಾಗೂ ಭೂ ಬಾಗ ಬಿಟ್ಟುಕೊಟ್ಟಕಾಂಗ್ರೆಸ್‌ ಈಗ ಜೋಡೋ ಯಾತ್ರೆ ಮಾಡುತ್ತಿದೆ ಎಂದರು. ಸುರುಪುರದ ಶಾಸಕ ರಾಜುಗೌಡ ಮಾತನಾಡಿ, 50-60 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳಿಗೆ ಎಸ್‌.ಟಿ ಸಮುದಾಯಗಳಿಗೆ ಮೀಸಲಾತಿ ಒದಗಿಸಲು ಸಾಧ್ಯವಾಗಿಲ್ಲ ಅದನ್ನು ಮಾಡಲು ಬಿಜೆಪಿ ಸರ್ಕಾರವೆ ಬರಬೇಕಾಯಿತು ಎಂದರು.

ರಾಜ್ಯದ ಸಮಗ್ರ ಅಭಿವೃದ್ಧಿಯೇ ‘ಪಂಚರತ್ನ’ ಗುರಿ: ಎಚ್‌.ಡಿ.ಕುಮಾರಸ್ವಾಮಿ

ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್‌,ತಾಲೂಕು ಬಿಜೆಪಿ ಅಧ್ಯಕ್ಷ ಆಶೋಕ್‌ ರೆಡ್ಡಿ, ಎಂ.ಎಲ್ಸಿ ಕೇಶವಪ್ರಸಾದ್‌,ಮಾಜಿ ಶಾಸಕ ವೆಂಕಟಮುನಿಯಪ್ಪ, ನಾರಯಣಸ್ವಾಮಿ, ಮುಖಂಡರಾದ ಎಸ್‌.ಎಲ್‌.ಎನ್‌.ಮಂಜು,ರೋಣೂರು ಚಂದ್ರು,ಸಿದ್ದರಾಜು, ಕೋಳಿನಾಗರಾಜ್‌,ನಾಗದೇನಹಳ್ಳಿಚಂದ್ರು, ರಮೇಶ್‌ ರೆಡ್ಡಿ, ಪುರಸಭೆ ಸದಸ್ಯ ರಾಮಾಂಜಿ,ಸುಲೋಚನ ಮುಂತಾದವರು ಇದ್ದರು.

ನಾನು ಅಂದೋರು ಯಾರೂ ಉಳಿದಿಲ್ಲ: ನಾನು ಅಂದೋರು ಯಾರೂ ಭೂಮಿ ಮೇಲೆ ಉಳಿದಿಲ್ಲ. ಜನ ಆಶೀರ್ವಾದ ನೀಡಿದಾಗ ತಗ್ಗಿ ಬಗ್ಗಿ ನಡೆದರೆ ಮಾತ್ರ ಉಳಿಯಲು ಸಾಧ್ಯ. ಇಲ್ಲದಿದ್ದರೆ ನಿನ್ನ ನಡೆ ಮನೆ ಕಡೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿಗೆ ಸಂಸದ ಎಸ್‌.ಮುನಿಸ್ವಾಮಿ ಎಚ್ಚರಿಕೆ ನೀಡಿದರು.

ಕೆಂಪೇಗೌಡ ರಥಯಾತ್ರೆಗೆ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷಾತೀತವಾಗಿ ನಡೆಯುತ್ತಿರುವ ಕೆಂಪೇಗೌಡರ ರಥಯಾತ್ರೆಯಲ್ಲಿ ಬುಧವಾರ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ನಡೆದುಕೊಂಡ ರೀತಿಯ ವಿರುದ್ಧ ಕಿಡಿಕಾರಿದರು. ಜನಪ್ರತಿನಿಧಿಯಾಗಿ ರಥಕ್ಕೆ ಕಾಯಬೇಕೆ ವಿನಃ ರಥ ಇವರಿಗಾಗಿ ಕಾಯುವುದಲ್ಲ. ಒಂದು ಗಂಟೆ ರಥವನ್ನು ಕಾಯಿಸಿ ಶಾಸಕರು ಕೆಂಪೇಗೌಡರಿಗೆ ಅಪಮಾನ ಮಾಡಿದ್ದಾರೆ. ಇಂಥವರಿಂದ ನಿಷ್ಠಾವಂತ ಜನಪ್ರತಿನಿಧಿಗಳಿಗೂ ಕೆಟ್ಟಹೆಸರು ಬರುತ್ತದೆ ಎಂದರು.

Kolar: ವಿದ್ಯುತ್ ತಂತಿ ತಗುಲಿ ಅಣ್ಣ ತಮ್ಮಂದಿರ ಸಾವು

ಅಧಿಕಾರಿಗಳು ಯಾರಿಗೂ ಹೆದರಬೇಡಿ: ಕೆಂಪೇಗೌಡರ ಇತಿಹಾಸವನ್ನು ಪ್ರಪಂಚಕ್ಕೆ ತಿಳಿಸಲು ಹಾಗೂ ಯಾರೇ ಬೆಂಗಳೂರಿಗೆ ಬಂದರೂ ಮೊದಲು ಕೆಂಪೇಗೌಡರಿಗೆ ತಲೆ ಬಾಗಿ ಬರಲೆಂದು 108 ಅಡಿ ಎತ್ತರದ ಪ್ರತಿಮೆ ಸ್ಥಾಪನೆಗೆ ಸರ್ಕಾರ ವ್ಯವಸ್ಥೆ ಮಾಡಿದೆ. ಇದರಲ್ಲಿ ಪಕ್ಷ ಭೇದವಿಲ್ಲ. ಆದರೆ ಇಲ್ಲಿನ ಶಾಸಕರು ಬಂಗಾರಪೇಟೆ ಕೆಂಪೇಗೌಡ ಎಂದು ಫೋಸು ನೀಡಿರುವುದು ನಾಚಿಕೆಯಾಗಬೇಕು ಎಂದರು. ಇದಕ್ಕೂ ಮುನ್ನ ಕೆಂಪೇಗೌಡ ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಥಯಾತ್ರೆ ಸಾಗಿ ಬಂದಾಗ ಮಹಿಳೆಯರೂ ಪೂರ್ಣಕುಂಭ ಸ್ವಾಗತ ನೀಡಿದರು.ನೂರಾರು ಸಾರ್ವಜನಿಕರು ಕಲಾ ತಂಡಗಳು ಮೆರವಣಿಗೆಯಲ್ಲಿ ಬಂದರು. ಕುವೆಂಪು ವೃತ್ತದಲ್ಲಿ ಸಂಸದ ಮುನಿಸ್ವಾಮಿ ಹಾಗೂ ಮುಖಂಡರು ಜಡಿ ಮಳೆಯಲ್ಲಿ ಕುಣಿದರು.

Latest Videos
Follow Us:
Download App:
  • android
  • ios