ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ಯಾವ ನೈತಿಕ ಹಕ್ಕಿಲ್ಲ. ಇದೀಗ ಎಲ್ಲಾ ಹೊರಗೆ ಬರುತ್ತಿದೆ. ಬಿಜೆಪಿಯ ಯತ್ನಾಳ್‌ರಿಂದಲೇ ಮಾಹಿತಿ ಪಡೆದು ತನಿಖೆ ಮಾಡಿದಲ್ಲಿ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದರು. 

ಕುಶಾಲನಗರ (ಡಿ.29): ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ಯಾವ ನೈತಿಕ ಹಕ್ಕಿಲ್ಲ. ಇದೀಗ ಎಲ್ಲಾ ಹೊರಗೆ ಬರುತ್ತಿದೆ. ಬಿಜೆಪಿಯ ಯತ್ನಾಳ್‌ರಿಂದಲೇ ಮಾಹಿತಿ ಪಡೆದು ತನಿಖೆ ಮಾಡಿದಲ್ಲಿ ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದರು. 

ನಗರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿದ್ದರಾಮಯ್ಯನವರ ಸರ್ಕಾರ ತನಿಖೆ ಸಮಿತಿ ರಚಿಸಿದೆ. ತನಿಖೆಯೂ ನಡೆಯುತ್ತಿದೆ ಎಂದರು. ಇನ್ನು, ಕೋವಿಡ್‌ ಸಂದರ್ಭ ಬಿಜೆಪಿಯ 40 ಪರ್ಸೆಂಟ್ ಸರ್ಕಾರದ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು ಎಂದು ನೆನಪಿಸಿದರಲ್ಲದೆ, ಇದಕ್ಕೆ ಪೂರಕವಾಗಿ ಬಿಜೆಪಿ ಸರ್ಕಾರದ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್ 40,000 ಕೋಟಿ ರು. ಅಕ್ರಮ ಆರೋಪಿಸಿದ್ದಾರೆ. ಈ ವಿಚಾರದ ಬಗ್ಗೆ ಯತ್ನಾಳ್ ಸರಿಯಾದ ದಾಖಲೆ ಕೊಟ್ಟರೆ ತನಿಖೆಗೆ ಅನುಕೂಲ ಆಗಲಿದೆ ಎಂದವರು ಹೇಳಿದರು.

ಮಾದಿಗ ಸಮಾಜದ ಬೆನ್ನಿಗೆ ಬಿಜೆಪಿ ನಿಂತ್ರೆ, ಕಾಂಗ್ರೆಸ್‌ ಮತಬೇಟೆಗೆ ಮಾತ್ರ ಸೀಮಿತ: ಸಚಿವ ನಾರಾಯಣಸ್ವಾಮಿ

ತಾಕತ್ತಿದ್ದರೆ ಶೆಟ್ಟರ್‌ ₹200 ಕೋಟಿ ತರಲಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನನಗೆ ಹಾಕಿರುವ ಸವಾಲನ್ನು ಸ್ವೀಕರಿಸುತ್ತೇನೆ. ಅವರಿಗೆ ತಾಕತ್ತಿದ್ದರೆ ಅವರದೇ ಸರ್ಕಾರವಿದೆ. ₹200- 300 ಕೋಟಿ ತಂದು ಸೆಂಟ್ರಲ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸವಾಲೆಸೆದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ತಾಕತ್‌ ಇದ್ದರೆ ₹10 ಕೋಟಿ ಅನುದಾನ ತಂದು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಅದನ್ನು ನಾನು ಸ್ವೀಕರಿಸುತ್ತೇನೆ. ಶೀಘ್ರದಲ್ಲೇ ಅನುದಾನ ತಂದು ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ಕಾಂಗ್ರೆಸ್‌ ಪಕ್ಷದ್ದೇ ಸರ್ಕಾರವಿದೆ. 

ಹೀಗಾಗಿ, ತಮ್ಮ ಸರ್ಕಾರದಲ್ಲಿ ಶೆಟ್ಟರ್‌ಗೆ ತಾಕತ್ತಿದ್ದರೆ ₹200-300 ಕೋಟಿ ಅನುದಾನ ತಂದು ಸೆಂಟ್ರಲ್‌ ಕ್ಷೇತ್ರದ ಅಭಿವೃದ್ಧಿ ಮಾಡಲಿ. ಅನುದಾನ ತಂದರೆ ನಾನೇ ಅವರ ಮನೆಗೆ ಹೋಗಿ ಸನ್ಮಾನಿಸಿ ಬರುತ್ತೇನೆ ಎಂದರು. ನನ್ನ ಕ್ಷೇತ್ರದ ₹30 ಕೋಟಿ ತಡೆ ಹಿಡಿಯಲಾಗಿದೆ ಎಂದು ಆರೋಪಿಸಿದ್ದೇನೆ. ಅದಕ್ಕೆ ಈಗಲೂ ಬದ್ಧವಾಗಿದ್ದೇನೆ. ಶೆಟ್ಟರ್‌ ಅವರೇ ತಾಂತ್ರಿಕ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಅದೇನು ತಾಂತ್ರಿಕ ಕಾರಣ? 224 ಕ್ಷೇತ್ರಗಳಲ್ಲಿ ನನ್ನ ಒಬ್ಬನ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ತಾಂತ್ರಿಕ ಕಾರಣ ಎದುರಾಗುತ್ತದೆಯಾ? ಎಂಬುದನ್ನು ಜನರಿಗೆ ತಿಳಿಸಲಿ. ಕುತಂತ್ರದಿಂದಲೇ ನನ್ನ ಕ್ಷೇತ್ರದ ಅನುದಾನ ತಡೆ ಹಿಡಿಸಿದ್ದಾರೆ ಎಂದು ಆರೋಪಿಸಿದರು.

ನಾವು ಇಂಗ್ಲೆಂಡಲ್ಲಿ ಇದ್ದೀವಾ, ಫಲಕಗಳಲ್ಲಿ ಶೇ.60ರಷ್ಟು ಕನ್ನಡ ನಿಯಮ ಸೂಕ್ತ: ಸಚಿವ ಜೋಶಿ

ನಾನು ರೆಡಿಮೇಡ್‌ ಕ್ಷೇತ್ರವನ್ನೇನೂ ತೆಗೆದುಕೊಂಡಿಲ್ಲ. ಬದಲಿಗೆ ಶೆಟ್ಟರ್‌ ಅವರನ್ನು ರೆಡಿ ಮಾಡಲು ಸಾಕಷ್ಟು ಕಾರ್ಯಕರ್ತರು ಬಲಿಯಾಗಿದ್ದಾರೆ ಎಂದು ತಿರುಗೇಟು ನೀಡಿದ ಅವರು, ನಾನು ಯಾವಾಗಲೂ ಟಫ್‌ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವುದು. ಹಿಂದೆಯೂ ನನಗೆ ಟಫ್‌ ಕ್ಷೇತ್ರಗಳಲ್ಲೇ ಉಸ್ತುವಾರಿಗಳನ್ನಾಗಿ ನೇಮಿಸಿದ್ದುಂಟು. ಆದರೆ, ಈ ಕ್ಷೇತ್ರದಲ್ಲಿ 30 ವರ್ಷದಿಂದ ಆಯ್ಕೆಯಾಗಿ ಬಂದವರನ್ನು ರೆಡಿ ಮಾಡಲು ಸಾಕಷ್ಟು ಜನ ಬಲಿಯಾಗಿದ್ದಾರೆ. ಚೆನ್ನಮ್ಮ ಸರ್ಕಲ್‌ ಗಲಭೆ ವೇಳೆ ನಡೆದ ಗೋಲಿಬಾರ್‌ನಲ್ಲಿ 6 ಜನ ಬಲಿಯಾಗಿದ್ದರು. ಅದನ್ನೆಲ್ಲ ಈಗ ಅವರು ಮರೆತ್ತಿದ್ದಾರೆ ಎಂದು ಕಿಡಿಕಾರಿದರು.