ಕೊಡಗು: ಕಮಲ ಭದ್ರಕೋಟೆಯ ರಕ್ಷಣೆಗಾಗಿ ಬಿಜೆಪಿ ಕಸರತ್ತು; ಸೋಲುವ ಭೀತಿ ಎಂದ ಕಾಂಗ್ರೆಸ್

ಕಳೆದ 25 ವರ್ಷಗಳಿಂದಲೂ ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ. ತನ್ನ ಆ ಉಕ್ಕಿಕೋಟೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿಯು ಈಗಾಗಲೇ ತನ್ನ ಒಂದೊಂದು ಪ್ರಯತ್ನಗಳನ್ನು ನಡೆಸುತ್ತಿದೆ. 

BJP has many workout to keep the seat in Kodagu madikeri assembly constituency rav

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಫೆ.27): ಕಳೆದ 25 ವರ್ಷಗಳಿಂದಲೂ ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ. ತನ್ನ ಆ ಉಕ್ಕಿಕೋಟೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿಯು ಈಗಾಗಲೇ ತನ್ನ ಒಂದೊಂದು ಪ್ರಯತ್ನಗಳನ್ನು ನಡೆಸುತ್ತಿದೆ. 

ಜನೆವರಿ ಆರಂಭದಲ್ಲಿಯೇ ಬೂತ್ ಮಟ್ಟದ ವಿಜಯ ಸಂಕಲ್ಪ ಯಾತ್ರೆ(Vijaya sankalpa)ಗೆ ಕೊಡಗು(Kodagu) ಉಸ್ತುವಾರಿ ಸಚಿವ ಬಿ.ಸಿ ನಾಗೇಶ್(BC Nagesh) ಅವರು ಚಾಲನೆ ನೀಡಿದ್ದರು. ಬಳಿಕ ಶಾಸಕರು, ಬಿಜೆಪಿ ಮುಖಂಡರು ಒಂದು ತಿಂಗಳಿನಿಂದಲೂ ಬೂತ್ ವಿಜಯ ಸಂಕಲ್ಪಯಾತ್ರೆ ನಡೆಸಿ ಜನರಿಗೆ ಈಗಾಗಲೇ ಒಂದು ಹಂತದ ಪ್ರಚಾರ ಮಾಡಿದ್ದಾರೆ. 

ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್‌ಗೆ ಹಾಸನ ಟಿಕೆಟ್ ಗೊಂದಲ ಸ್ಪೀಡ್ ಬ್ರೇಕರ್ ಆಗಿದ್ದು ಹೇಗೆ?

ಬೂತ್ ವಿಜಯ ಸಂಕಲ್ಪ ಯಾತ್ರೆ ಮುಗಿಸಿರುವ ಬಿಜೆಪಿ ಮುಖಂಡರು ಸೋಮವಾರ ಪ್ರಗತಿರಥ ಯಾತ್ರೆ(Pragati rathayatre)ಗೆ ಚಾಲನೆ ನೀಡಿದ್ದಾರೆ. ಜಿಲ್ಲಾ ಕೇಂದ್ರ ಮಡಿಕೇರಿಯ ಕಾಫಿ ಕೃಪ ಕಟ್ಟಡದಲ್ಲಿರುವ ಪಕ್ಷದ ಕಚೇರಿ ಬಳಿಯಿಂದ ಆರಂಭಗೊಂಡ ಪ್ರಗತಿ ರಥಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ(KG Bopaiah) ಚಾಲನೆ ನೀಡಿದರು. ರಥಕ್ಕೆ ಪುಷ್ಪಾರ್ಚನೆ ಮಾಡಿದ ಶಾಸಕ ಕೆ.ಜಿ. ಬೋಪಯ್ಯ ಮತ್ತು ಜಿಲ್ಲಾಧ್ಯಕ್ಷ ರಾಬಿನ್  ದೇವಯ್ಯ ನಂತರ ಬಿಜೆಪಿ ಬಾವುಟವನ್ನು ತೋರಿಸುವ ಮೂಲಕ ಪ್ರಗತಿ ರಥಕ್ಕೆ ಚಾಲನೆ ನೀಡಿದರು. 

ಸೋಮವಾರದಿಂದ ಆರಂಭವಾಗಿರುವ ಪ್ರಗತಿ ರಥ ಚುನಾವಣಾ ನೀತಿ ಸಂಹಿತೆ ಜಾರಿಯಾಗುವವರೆಗೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ(Assembly constituency)ದಲ್ಲಿ ಸಂಚರಿಸಲಿದೆ. ಈ ವೇಳೆ ಬಿಜೆಪಿ ಸರ್ಕಾ(BJP Govt)ರದ ಸಾಧನೆಗಳು, ಇದಕ್ಕೂ ಮುಂಚೆ ಇದ್ದ ಕಾಂಗ್ರೆಸ್(Congress) ಸರ್ಕಾರದ ವೈಫಲ್ಯಗಳು ಮತ್ತು ವಿರೋಧ ಪಕ್ಷದವಾಗಿ ಕಾಂಗ್ರೆಸ್ನ ತಪ್ಪುಗಳನ್ನು ಪ್ರಗತಿ ರಥದಲ್ಲಿರುವ ಎಲ್ಇಡಿ ಷೋನಲ್ಲಿ ಮಾಹಿತಿ ಇರಲಿದೆ. 

ಈ ಕುರಿತು ಮಾತನಾಡಿದ ಕಳೆದ 8 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ ಮತ್ತು ಮೂರು ವರ್ಷಗಲ್ಲಿ ನಮ್ಮ ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಕೆಲಸ ಮಾಡುತ್ತೇವೆ. ಜೊತೆಗೆ ಸರ್ವೇ ಜನ ಸುಖಿನೋಭಂವತು ಎನ್ನುವುದು ಹಿಂದೂ ಧರ್ಮ. ಹೀಗಾಗಿ ಹಿಂದೂತ್ವದ ಮತ್ತು ಅಭಿವೃದ್ಧಿ ಕೆಲಸಗಳನ್ನು ಜಿಲ್ಲೆಯ ಪ್ರತೀ ಬೂತಿನ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಇದು ರಾಜ್ಯದೆಲ್ಲೆಡೆ ನಡೆಯುತ್ತಿದ್ದು, ಆ ಮೂಲಕ ರಾಜ್ಯದಲ್ಲಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದಿದ್ದಾರೆ. ಆದರೆ ಕಾಂಗ್ರೆಸ್ಸಿನ ಮುಖಂಡರು ಇದನ್ನು ತೀವ್ರವಾಗಿ ಟೀಕಿಸಿದ್ದಾರೆ. 

ಸಿದ್ದರಾಮಯ್ಯ(Siddaramaiah) ಅವರು ಸಿಎಂ ಆಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಕೆಲಸವನ್ನು ಕೇಂದ್ರ ಬಿಜೆಪಿ ಸರ್ಕಾರವೂ ಹೊಗಳಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅದರ ವೈಫಲ್ಯವನ್ನು ಬಿಜೆಪಿ ಯಾಕೆ ತೋರಿಸುವ ಕೆಲಸ ಮಾಡಲಿಲ್ಲ. ಅದುಬಿಟ್ಟು ಅವರ ಸರ್ಕಾರದಲ್ಲಿ ಆಗಿರುವ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿ ಈಗ ಪ್ರಗತಿ ರಥ ಮಾಡಲು ಹೊರಟ್ಟಿರುವುದು ನಾಚಿಕೆಗೇಡಿನ ಸಂಗತಿ. ನಮ್ಮ ರಾಷ್ಟ್ರನಾಯಕರಾದ ರಾಹುಲ್ ಗಾಂಧಿ(Rahul gandhi) ಅವರು ಭಾತ್ ಜೋಡೋ ಯಾತ್ರೆ(Bharat jodo yatre) ಮಾಡಿದರು. ಈಗ ಕೆಪಿಸಿಸಿ(KPCC)ಯಿಂದ ಪ್ರಜಾಧ್ವನಿಯಾತ್ರೆ(Prajadhwani yatre)ಗೆ ಅಭೂತಪೂರ್ವ ಸ್ಪಂದನೆ ದೊರೆಯಿತು. ಇದೆಲ್ಲವೂ ಬಿಜೆಪಿಗೆ ಭಯ, ನಡುಕು ಹುಟ್ಟಿಸಿದೆ. ಯಾವುದೇ ಕಾರಣಕ್ಕೂ ನಾವು ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಆತಂಕ ಶರುವಾಗಿದೆ. ಹೀಗಾಗಿಯೇ ಇಂತಹ ಯಾತ್ರೆಗಳನ್ನು ಅವರು ಮಾಡಲು ಆರಂಭಿಸಿದ್ದಾರೆ ಎಂದು ಕಾಂಗ್ರೆಸ್ಸಿನ ವೀಣಾ ಅಚ್ಚಯ್ಯ(Veena achhaiah) ವ್ಯಂಗ್ಯ ಮಾಡಿದ್ದಾರೆ. 

BS Yediyurappa Birthday: ಯಡಿಯೂರಪ್ಪರಿಗೆ ನೀರು ನೀಡಿದ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಏನು ಹೇಳಿದರು?

ಈಗಾಗಲೇ ಜೆಡಿಎಸ್ ನಿಂದಲೂ ಮುಖಂಡ ಮುತ್ತಪ್ಪ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ಹೆಸರಿನಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ(Madikeri Assembly constituency)ದಲ್ಲಿ ಸುತ್ತಾಡುತ್ತಿದೆ. ಮತ್ತೊಂದೆಡೆ ಜನಸ್ಪಂದನಾ ಸಭೆ ಹೆಸರಿನಲ್ಲಿ ಕಾಂಗ್ರೆಸ್ ಕೂಡ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾರರನ್ನು ಓಲೈಸುವ ಕೆಲಸ ಮಾಡುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಮೂರು ಪಕ್ಷಗಳು ತಮ್ಮ ತಮ್ಮ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಆರಂಭಿಸಿದ್ದು ಜನರು ಯಾರಿಗೆ ಜೈ ಎನ್ನುತ್ತಾರೆ ಕಾದು ನೋಡಬೇಕಾಗಿದೆ.

Latest Videos
Follow Us:
Download App:
  • android
  • ios