Asianet Suvarna News Asianet Suvarna News

ದಲಿತರಿಗೆ ಸಿಗಬೇಕಾದ ಭೂಮಿ ಕಿತ್ತುಕೊಂಡು, ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ: ಖರ್ಗೆ ವಿರುದ್ಧ ಪಿ ರಾಜೀವ್ ಕಿಡಿ

ಕಲಬುರಗಿಯಲ್ಲಿ ಕೆಐಡಿಬಿಯ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆಂದು ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ವಾಗ್ದಾಳಿ ನಡೆಸಿದರು.

bjp former mla p rajeev spark against kharge family at vijayapur rav
Author
First Published Aug 29, 2024, 6:42 AM IST | Last Updated Aug 29, 2024, 6:42 AM IST

ವಿಜಯಪುರ (ಆ.29): ಕಲಬುರಗಿಯಲ್ಲಿ ಕೆಐಡಿಬಿಯ ಭೂಮಿಯನ್ನು ಅಕ್ರಮವಾಗಿ ಪಡೆದಿದ್ದಾರೆಂದು ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ ಖರ್ಗೆ ತಮ್ಮ ಕುಟುಂಬದ ಟ್ರಸ್ಟ್‌ಗೆ ಕೆಐಡಿಬಿ ಭೂಮಿ ಪಡೆದುಕೊಂಡಿದ್ದಾರೆ. ದಲಿತರ ಬಗ್ಗೆ, ದಲಿತರ ಅಭಿವೃದ್ಧಿ ಬಗ್ಗೆ ಮಾತನಾಡುವ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರು ದಲಿತರು ಕೇವಲ ಇವರ ಕುಟುಂಬವನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಇರುವ ಸಮೂಹವೆಂದು ತಿಳಿದುಕೊಂಡಿದ್ದಾರೆ. ಇದರಿಂದಾಗಿ ಬಡ ದಲಿತ ಉದ್ದಿಮೆದಾರರಿಗೆ ಸಿಗಬೇಕಾದ ಭೂಮಿಯನ್ನು ಖರ್ಗೆ ಕುಟುಂಬ ಕಿತ್ತುಕೊಂಡಿದೆ. ನೂರಾರು ದಲಿತ ಕುಟುಂಬಗಳು ಮತ್ತೆ ಬಡವರಾಗಿಯೇ ಉಳಿಯುವಂತೆ ಮಾಡಿದ್ದಾರೆ. ಅಭಿವೃದ್ಧಿ ಹೊಂದಬೇಕಿದ್ದ ನೂರಾರು ದಲಿತ ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಉಳಿಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಸೆ.2 ರಿಂದ ದೇಶಾದ್ಯಂತ ಸದಸ್ಯತ್ವ ಅಭಿಯಾನ:

ಸೆ.2ರಂದು ಪ್ರಧಾನಿ ನರೇಂದ್ರ ಮೋದಿಜಿ ಅವರು ಮೊದಲ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ಬೂತ್‌ನಲ್ಲಿ ಸೇರಿದಂತೆ ಇಡಿ ದೇಶದಲ್ಲಿ 10 ಕೋಟಿ ಬಿಜೆಪಿ ಸದಸ್ಯರನ್ನು ನೇಮಕ ಮಾಡುವ ಗುರಿಯನ್ನು ಹೊಂದಲಾಗಿದೆ. ಜಿಲ್ಲೆಯಲ್ಲಿ ಪ್ರತಿಯೊಂದು ವಿದಾನಸಭಾ ಮತಕ್ಷೇತ್ರದಲ್ಲಿ ಕನಿಷ್ಟ 40 ಸಾವಿರ ಮತದಾರರನ್ನು ಬಿಜೆಪಿ ಸದಸ್ಯರನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಅದರ ಕುರಿತು ಇಂದು ಕಾರ್ಯಾಗಾರ ನಡೆಸಲಾಗಿದೆ. ಪ್ರತಿ ಬೂತ್‌ನಲ್ಲಿ ಕಾರ್ಯಕರ್ತರು ಮನೆಮನೆಗೆ ಹೋಗಿ ಮನವೊಲಿಸಿ ಸದಸ್ಯರನ್ನಾಗಿಬೇಕಿದೆ. 100 ಸದಸ್ಯತ್ವ ನೀಡುವ ಮೂಲಕ ಒಬ್ಬೊಬ್ಬರು 50 ಜನ ಸದಸ್ಯರನ್ನು ನೇಮಕ ಮಾಡುವವರನ್ನು ಸಕ್ರಿಯ ಸದಸ್ಯರು ಎಂದು ಗುರುತಿಸಲಾಗುತ್ತದೆ ಎಂದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಒಬ್ಬ ರೌಡಿಶೀಟರ್: ಎಂ ಲಕ್ಷ್ಮಣ್

ಒಳ ಮೀಸಲಾತಿ ವಿಚಾರ:

ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿಯ ಕುರಿತು ತೀರ್ಪು ಕೊಟ್ಟಿದೆ. ಜನಸಂಖ್ಯೆಗೆ ಆಧಾರವಾಗಿ, ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಆಗಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಹಾಗಾಗಿ ಹಿಂದಿನ ಆಯೋಗಗಳು ಪ್ರಚಲಿತ ಜನಸಂಖ್ಯೆ ಆಧಾರ ಹೊಂದಿರುವುದಿಲ್ಲ. ಹೊಸದಾದ ಜಾತಿಗಣತಿ ಆಧಾರದಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಒಳಮೀಸಲಾತಿ ಕೊಡಬೇಕಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಚಿವರು ಯಾವುದೇ ಭಾಗದಲ್ಲಿ ಕ್ರಿಮಿಲೇಯರ್ ಅಳವಡಿಸುವ ಪ್ರಸ್ತಾಪ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಜನಸಂಖ್ಯೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಆಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಅವಕಾಶ ಕೊಡಲಾಗಿದೆ. ಜನಗಣತಿಯ ಆಧಾರದ ಮೇಲೆ ಜನಸಂಖ್ಯೆಗೆ ಆಧರಿಸಿ ಪ್ರತಿಯೊಂದು ಜನಾಂಗಕ್ಕೆ ಸರಿಯಾದ ಮೀಸಲಾತಿ ಸಿಕ್ಕೆ ಸಿಗುತ್ತದೆ, ಈ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ ಎಂದರು.

Latest Videos
Follow Us:
Download App:
  • android
  • ios