ಪೊಲೀಸರು ಕಾಂಗ್ರೆಸ್ ಶಾಸಕರ ಮನೆಯ ಏಜೆಂಟ್ ತರ ಕೆಲಸ ಮಾಡುತ್ತಿದ್ದಾರೆ: ಮಾಜಿ ಶಾಸಕ ಪಿ ರಾಜೀವ್ ಆರೋಪ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪೊಲೀಸರು ಕಾಂಗ್ರೆಸ್ ಶಾಸಕರ ಮನೆಯ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಪೊಲೀಸರ ವರ್ತನೆ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕೋಡಿ (ಡಿ.31): ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪೊಲೀಸರು ಕಾಂಗ್ರೆಸ್ ಶಾಸಕರ ಮನೆಯ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ ಪೊಲೀಸರ ವರ್ತನೆ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪಿ ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಲಕ್ಷ್ಮಣ್ ಸವದಿಗೆ ಅವಾಚ್ಯವಾಗಿ ನಿಂದಿಸಿರುವ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತ ಅರುಣ್ ಟಕ್ಕಣ್ಣವರನ್ನು ವಶಕ್ಕೆ ಪಡೆದಿರುವ ಹಾರಗೇರಿ ಪೊಲೀಸರು. ಯಾವುದೇ FIR ಆಗದಿದ್ದರೂ, ಅರುಣ್ ಟಕ್ಕಣ್ಣವರನ್ನು ವಶಕ್ಕೆ ಪಡೆಯಲಾಗಿದೆ. ಬೆಳಗ್ಗೆ 6 ಗಂಟೆಯಿಂದ 10:30 ಗಂಟೆವರೆಗೆ ಪೊಲೀಸ್ ವಶದಲ್ಲಿರುವ ಬಿಜೆಪಿ ಕಾರ್ಯಕರ್ತ. ಲಕ್ಷ್ಮಣ್ ಸವದಿ ನಿವಾಸಕ್ಕೆ ಹೋಗಿ ಕ್ಷಮೆ ಕೇಳುವಂತೆ ಒತ್ತಾಯಿಸಿರುವ ಪೊಲೀಸರು. ಹಾರುಗೇರಿ ಪೊಲೀಸರು ಸವದಿ ಮನೆ ಏಜೆಂಟರಾ? ಎಂದು ಕಿಡಿಕಾರಿದರು. ಎಫ್‌ಐಆರ್ ದಾಖಲಿಸದೇ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
'ಮೋದಿ ಗೆಲ್ಲಿಸಿ, ಭಾರತ ಉಳಿಸಿ' ಅಭಿಯಾನಕ್ಕೆ ಸಂಸದ ಜೊಲ್ಲೆ ಗೈರು; ಆಂದೋಲ ಶ್ರೀಗಳು ಕಿಡಿ!
ವಿಧಾನಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ. ಅಧಿಕಾರ, ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಸರ್ಕಾರವನ್ನು ಪ್ರಶ್ನಿಸುವ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವ, ಅಕ್ರಮವಾಗಿ ವಶಕ್ಕೆ ಪಡೆಯುವ ಕೆಲಸ ಮಾಡುತ್ತಿದೆ. ಹಿಂದಿನ ಚುನಾವಣೆ ದ್ವೇಷ ಇಟ್ಟುಕೊಂಡು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಶಾಸಕರ ಏಜೆಂಟರಂತೆ ಕೆಲಸ ಮಾಡಿ ಹಾಕಿರುವ ಯುನಿಫಾರ್ಮ್ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಈ ಘಟನೆ ಸಂಬಂಧ ಸ್ಥಳದಲ್ಲೇ ನಿಂತು ಎಸ್ಪಿ ಐಜಿ ಗೆ ದೂರು ನೀಡಿದರು.
ಹಿಂದೂ ಸಮಾಜ ಮುಂದೊಂದು ದಿನ ಮಸೀದಿಗಳನ್ನು ಒಡೆದು ಪುಡಿಪುಡಿ ಮಾಡುತ್ತೆ: ಕೆಎಸ್ ಈಶ್ವರಪ್ಪ ಮತ್ತೆ ಪ್ರಚೋದನಕಾರಿ ಮಾತು!