ಬಿಜೆಪಿ ಸಹ ಸಂಸದೆ ಸುಮಲತಾ ಅಂಬರೀಶ್ ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆ. ವಿಧಾನಸಭೆ ಗೆಲ್ಲೋಕೆ ಬಿಜೆಪಿ ಮೆಗಾ ಪ್ಲಾನ್ ಮಾಡಿದ್ದು, ಗೌಡರ ಕೋಟೆ ಬೇಧಿಸೋಕೆ ಗೌಡ್ತಿ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಹಾಗಾದ್ರೆ, ಕೇಸರಿಧಾರಿಣಿ ಆಗ್ತಾರಾ ಸುಮಲತಾ ಅಂಬರೀಶ್..?
ಬೆಂಗಳೂರು/ಮಂಡ್ಯ, (ಏ.26): ವಿಧಾಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಮಂಡ್ಯ ರಾಜಕಾರಣ ಗರಿಗೆದರಿದೆ. ಚುನಾವಣೆಗೂ ಮುನ್ನ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಆಯ್ಕೆಗೊಂಡ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಯಾವ ಪಕ್ಷ ಸೇರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈ ನಡುವೆ ಸುಮಲತಾ ಬಿಜೆಪಿ (BJP) ಸೇರ್ಪಡೆ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದು, ಬೆಂಬಲಿಗರ ಮೂಲಕ ಬಿಜೆಪಿ ಸೇರುವ ಬಗ್ಗೆ ಸುಮಲತಾ ಸುಳಿವು ನೀಡ್ತಿದ್ದಾರ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಅಂಬರೀಶ್?
ಇತ್ತ ಬಿಜೆಪಿ ಸಹ ಸಂಸದೆ ಸುಮಲತಾ ಅಂಬರೀಶ್ ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆ. ವಿಧಾನಸಭೆ ಗೆಲ್ಲೋಕೆ ಬಿಜೆಪಿ ಮೆಗಾ ಪ್ಲಾನ್ ಮಾಡಿದ್ದು, ಗೌಡರ ಕೋಟೆ ಬೇಧಿಸೋಕೆ ಗೌಡ್ತಿ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಹಾಗಾದ್ರೆ, ಕೇಸರಿಧಾರಿಣಿ ಆಗ್ತಾರಾ ಸುಮಲತಾ ಅಂಬರೀಶ್..?
