ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ
ಹಿಂದುಳಿದ ಈ ಭಾಗದ ವಿಕಾಸಕ್ಕೆ ಸಂವಿಧಾನದ ವಿಶೇಷ ರಕ್ಷಣೆ ಕಾಂಗ್ರೆಸ್ ಪಕ್ಷ ನೀಡಿದೆ. ಸಂಸತ್ತಿನಲ್ಲಿ ಈ ವಿಚಾರ ಮಂಡಿಸಿ ಎಲ್ಲರ ಮನ ಗೆದ್ದಿದ್ದೇವೆ. ಈ ವಿಷಯವೇ ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ: ರಣದೀಪಸಿಂಗ್ ಸುರ್ಜೆವಾಲಾ
ಕಲಬುರಗಿ(ಡಿ.02): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಬಿಜೆಪಿಗೆ ಬೇಡವಾಗಿದೆ. ಈ ಪಕ್ಷ ಹಿಂದುಳಿದ ನೆಲದ ಪ್ರಗತಿಗೆ ಬಹುದೊಡ್ಡ ಅಡಚಣೆæಯಾಗಿದೆ ಎಂದು ದೂರಿರುವ ಎಐಸಿಸಿ ಪ್ರ. ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಬಿಜೆಪಿ ಕಲಂ 371 (ಜೆ) ಗೆ ತೀವ್ರ ವಿರೋಧಿಸಿತ್ತು, ಅಂದಿನ ಉಪ ಪ್ರಧಾನಿ ಎಲ್. ಕೆ. ಆಡ್ವಾಣಿ ಬೇಡಿಕೆ ತಿರಸ್ಕರಿಸಿದ್ರು, ಕಾಂಗ್ರೆಸ್ ಪಕ್ಷ ಈ ಭಾಗದ ಜನರ ಬೇಡಿಕೆ ಈಡೇರಿಸಿದೆ. ಇದೇ ಸೇಡಿನಿಂದಾಗಿ ಕಲ್ಯಾಣ ನಾಡಿನ ಪ್ರಗತಿಗೆ ಬಿಜೆಪಿ ವಿರೋಧಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಈ ಭಾಗದ ವಿಕಾಸಕ್ಕೆ ಸಂವಿಧಾನದ ವಿಶೇಷ ರಕ್ಷಣೆ ಕಾಂಗ್ರೆಸ್ ಪಕ್ಷ ನೀಡಿದೆ. ಸಂಸತ್ತಿನಲ್ಲಿ ಈ ವಿಚಾರ ಮಂಡಿಸಿ ಎಲ್ಲರ ಮನ ಗೆದ್ದಿದ್ದೇವೆ. ಈ ವಿಷಯವೇ ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಒಂದಿಲ್ಲೊಂದು ರೂಪದಲ್ಲಿ ಕಲ್ಯಾಣ ನಾಡಿನ ಕಲಬುರಗಿಯಿಂದ ಹಿಡಿದು ವಿಜಯನಗರವರೆಗಿನ 7 ಜಿಲ್ಲೆಗಳ ಪ್ರಗತಿಗೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ, ಅಸಡ್ಡೆ ತೋರುತ್ತಿದೆ ಎಂದರು.
ನನ್ನ, ಸಿದ್ದರಾಮಯ್ಯ ಮಧ್ಯೆ ಬಿರುಕಿಲ್ಲ: ಡಿ.ಕೆ.ಶಿವಕುಮಾರ್
2013 ರಿಂದ ಇಲ್ಲಿಯವರೆಗೆ ಈ ಬಾಗದ 35 ರಿಂದ 36 ಸಾವಿರ ಯುವಕರು ವೈದ್ಯಕೀಯ ಪ್ರವೇಶ ಪಡೆದಿದ್ದಾರೆ, ಇಂಜಿನಿಯರಿಂಗ್‌ನಲ್ಲಿ ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಪಡೆದು ಶಿಕ್ಷಣ ಹೊಂದಿದ್ದಾರೆ. ಕೆಕೆಆರ್‌ಡಿಬಿ ರಚನೆಯಾಗಿದ್ದು ಸಾಕಷ್ಟುಅನುದಾನ ಬರುವಂತಾಗಿದೆ. ಕಲ್ಯಾಣದ ಭಾಗದಲ್ಲಿ ಉತಂಗಭದ್ರಾ ಅಣೆಕಟ್ಟೆ, ಕಲಬುರಗಿ ಇಎಸ್‌ಐಸಿ ಆಸ್ಪತ್ರೆ, ರಾಯಚೂರಿನ ಶಾಖೋತ್ಪನ್ನ ಕೇಂದ್ರ ಸೇರಿದಂತೆ ಅನೇಕ ಬೃಹತ್ ಯೋಜನೆಗಳನ್ನು ಮಾಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ. ಇಲ್ಲಿನ ಅನೇಕ ಯೋಜನೆಗಳನ್ನು ಬಿಜೆಪಿ ಕಿತ್ತುಕೊಂಡು ಹೋಗಿದೆ. ಅದೇ ಆ ಪಕ್ಷದ ಸಾಧನೆ ಎಂದು ಗೇಲಿ ಮಾಡಿದರು.
ಪ್ರಿಯಾಂಕ್ ಖರ್ಗೆ ಸೋಲಿಗಾಗಿ ಪಣ: ಮೊಣಕಾಲ ಮೇಲೆ ತಿರುಮಲ ಬೆಟ್ಟ ಹತ್ತಿ ಹರಕೆ ಹೊತ್ತ ಬಿಜೆಪಿ ಮುಖಂಡ
ಕಲಂ 71 (ಜೆ) ಮೀಸಲು ನೀತಿಯಂತೆ ಇಂದಿಗೂ ಬಿಜೆಪಿ ಸರ್ಕಾರ ನಿಯಮಗಳ ಅನುಷ್ಠಾನಕ್ಕೆ ಮನಸ್ಸು ಮಾಡಿಲ್ಲ, ಸರ್ಕಾರಿ ಹುದ್ದೆ ಭರ್ತಿ ಮಾಡುತ್ತಿಲ್ಲ. ನೀರಾವರಿ ಯೋಜನೆಳ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಹಿಂದುಳಿದ ನೆಲ, ಬಡವರ ಪ್ರತಿ ಬಿಜೆಪಿಗೆ ಅಸಡ್ಡೆ ಇದೆ ಎಂದು ತಿವಿದರು. ಕಲ್ಯಾಣ ನಾಡಿನ ಜನತೆಗೆ ಈಗ ಅರಿವಾಗಿದೆ. ಬಿಜೆಪಿ ವಿಶ್ವಾಸಘಾತ ಮಾಡಿರೋದು ಅನುಭವಕ್ಕೆ ಬಂದಿದೆ. ಬರೋ ಚುನಾವಣೆಯಲ್ಲಿ ಅದೇ ಮತಾಸ್ತ್ರದಿಂದ ಜನತೆ ಕಲ್ಯಾಣ ನಾಡಿನಿಂದ ಬಿಜೆಪಿಯನ್ನು ಕಿತ್ತು ಎಸೆಯಲಿದ್ದಾರೆಂದರು.
10ರಂದು ಕಲ್ಯಾಣ ಕ್ರಾಂತಿ:
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡುತ್ತ ಡಿ. 10 ಕ್ಕೆ ಕಲಬುರಗಿಯಲ್ಲಿ ಕಾಂಗ್ರೆಸ್ ಪಕ್ಷ ಕಲ್ಯಾಣ ನಾಡಿನ ಸಮಾವೇಶ ಹಮ್ಮಿಕೊಂಡಿದೆ. ಇದು ಈ ಬಾಗದಲ್ಲಿ ಪಕ್ಷದ ಸಂಘಟನೆ, ಶಕ್ತಿ ಹೆಚ್ಚಿಸಲಿದೆ ಎಂದರು. ಡಾ. ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಈ ಭಾಗದ ಸಾಮಾನ್ಯ ಕಾರ್ಯಕರ್ತ ದೇಶದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರೋದು ದೊಡ್ಡ ಸಾಧನೆ, ಅವರ ಕಲಬುರಗಿ ಬೇಟಿಯನ್ನೇ ಕಾಂಗ್ರೆಸ್ ಪಕ್ಷದ ಕಲ್ಯಾಣ ಕ್ರಾಂತಿ ಸಮಾವೇಶ ರೂಪದಲ್ಲಿ ಸಂಘಟಿಸಲಾಗುತ್ತಿದೆ ಎಂದರು. ಕೆಪಿಸಿಸಿ ಪ್ರಚಾರ ಸಮೀತಿಯ ಎಂಬಿ ಪಾಟೀಲ್, ಮಾಜಿ ಸಚಿವ ಶರಣಪ್ರಕಾಶ ಪಾಟೀಲ್, ಶಾಸಕ ಎಂವೈ ಪಾಟೀಲ್, ಡಾ. ಅಜಯ್ ಸಿಂಗ್, ಅಲ್ಲಂಪ್ರಭು ಪಾಟೀಲ್ ಇದ್ದರು.