Asianet Suvarna News Asianet Suvarna News

ಬಿಜೆಪಿಗೆ ಸಮರ್ಥ ನಾಯಕತ್ವ ಇಲ್ಲ: ರೇಣು ಮತ್ತೆ ರೆಬೆಲ್‌

ವಿಧಾನಸಭೆ ಚುನಾವಣೆ ವೇಳೆ ಯಡಿಯೂರಪ್ಪನವರಿಗೆ ಕಡೆಗಣಿಸಿದ್ದರಿಂದ ಏನಾಗಿದೆಯೆಂಬುದು ಎಲ್ಲರಿಗೂ ಗೊತ್ತಿದೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪನವರಿಗೆ ಮೂಲೆಗುಂಪು ಮಾಡುವ ಬದಲಿಗೆ, ಆ ಹಿರಿಯ ನಾಯಕನ ಕೈಗೆ ಅಧಿಕಾರ, ಜವಾಬ್ದಾರಿ, ಹೊಣೆಗಾರಿಕೆಯನ್ನು ಕೊಟ್ಟು ನೋಡಿ ಎಂದು ಪಕ್ಷದ ವರಿಷ್ಟರಿಗೆ ಅವರು ಒತ್ತಾಯಿಸಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ

BJP Does Not Have Competent Leadership in Karnataka Says MP Renukacharya grg
Author
First Published Oct 15, 2023, 5:21 AM IST

ದಾವಣಗೆರೆ(ಅ.15):  ಬಿಜೆಪಿಯನ್ನು ಕಟ್ಟಿದ ಬಿ.ಎಸ್‌. ಯಡಿಯೂರಪ್ಪ ಕೈಗಳನ್ನು ಕಟ್ಟಿ ಹಾಕಿದ್ದು, ರಾಜ್ಯ ಪ್ರವಾಸಕ್ಕೂ ಅವಕಾಶ ನೀಡದ್ದರಿಂದ ರಾಜ್ಯದಲ್ಲಿ ಪಕ್ಷಕ್ಕೆ ಸಮರ್ಥ ನಾಯಕತ್ವವೇ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷದ ವಿರುದ್ಧವೇ ಮತ್ತೆ ಗುಡುಗಿದ್ದಾರೆ.

ನಗರದಲ್ಲಿ ಶನಿವಾರ ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದಂತಹ ಯಡಿಯೂರಪ್ಪ ಸೇರಿದಂತೆ ಅನೇಕರನ್ನು ಮೂಲೆಗುಂಪು ಮಾಡಿದ್ದಾರೆ ಎಂದರು.

ಕಾಂಗ್ರೆಸ್‌ನವರಿಗೆ ಕೇಸರಿ ಅಂದ್ರೆ ಆಗಲ್ಲ, ಮುಸ್ಲಿಮರ ಟೋಪಿಯನ್ನು ಹಾಕಿಕೊಳ್ಳುತ್ತಾರೆ: ಸಿ.ಟಿ.ರವಿ

ವಿಧಾನಸಭೆ ಚುನಾವಣೆ ವೇಳೆ ಯಡಿಯೂರಪ್ಪನವರಿಗೆ ಕಡೆಗಣಿಸಿದ್ದರಿಂದ ಏನಾಗಿದೆಯೆಂಬುದು ಎಲ್ಲರಿಗೂ ಗೊತ್ತಿದೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಡಿಯೂರಪ್ಪನವರಿಗೆ ಮೂಲೆಗುಂಪು ಮಾಡುವ ಬದಲಿಗೆ, ಆ ಹಿರಿಯ ನಾಯಕನ ಕೈಗೆ ಅಧಿಕಾರ, ಜವಾಬ್ದಾರಿ, ಹೊಣೆಗಾರಿಕೆಯನ್ನು ಕೊಟ್ಟು ನೋಡಿ ಎಂದು ಪಕ್ಷದ ವರಿಷ್ಟರಿಗೆ ಅವರು ಒತ್ತಾಯಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಎಂಬುದಾಗಿ ನಾವು ಹೇಳುತ್ತಿದ್ದೆವು. ಆದರೆ, ಇಂದು ಬಿಜೆಪಿಯೇ ಮುಳುಗುತ್ತಿರುವ ಹಡಗು ಎಂಬುದಾಗಿ ನಮ್ಮವರೇ ಹೇಳುವ ಕಾಲ ಬಂದಿದೆ. ಬಿಜೆಪಿಯಲ್ಲಿ ಕಾರ್ಪೋರೇಟ್ ರೀತಿ ತಂಡವನ್ನು ಕಟ್ಟಿಕೊಂಡು, ಕೆಲಸ ಮಾಡುತ್ತಿದ್ದಾರೆ. ಗೆದ್ದಲುಗಳು ಕಟ್ಟಿದ ಹುತ್ತದಲ್ಲಿ ಹಾವುಗಳು ಹೊಕ್ಕು, ವಾಸ ಮಾಡಿದಂತೆ ಆಗಿದೆ ಎಂದು ಸ್ವಪಕ್ಷದ ಕೆಲವರ ವಿರುದ್ಧ ಅವರು ಆಕ್ರೋಶ ಹೊರ ಹಾಕಿದರು.

ವಿಧಾನಪರಿಷತ್ ಸದಸ್ಯರು, ಬಿಜೆಪಿ ರಾಜ್ಯಾಧ್ಯಕ್ಷರು, ಯಾರ ತಂಡದಲ್ಲಿ ಗುರುತಿಸಿಕೊಂಡವರು ಅಂತಾ ಗೊತ್ತಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಬಳಿ ಸುಳ್ಳು ಮಾಹಿತಿ ನೀಡಿ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಕೆಲವರು ಕಾರಣರಾಗಿದ್ದಾರೆ. ಸಮರ್ಥ ನಾಯಕನನ್ನು ಆಯ್ಕೆ ಮಾಡಿದರೆ, ಪಕ್ಷದಲ್ಲಿ ಮತ್ತೆ ಹೊಸತನ ಬಂದೇ ಬರುತ್ತದೆ ಎಂದು ಹೇಳಿದರು.

ಹೊಸಬರಿಗೆ ಪಕ್ಷದ ನಾಯಕತ್ವ ನೀಡಿದರೆ, ಪಕ್ಷ ಸಂಘಟನೆಗೂ ಸಹಕಾರಿಯಾಗುತ್ತದೆ. ಹೊಸ ತಂಡವೂ ರಚನೆಯಾಗುತ್ತದೆ. ರಾಜ್ಯದಲ್ಲಿ ಈಗಿರುವ ಪರಿಸ್ಥಿತಿಯೇ ಮುಂದುವರಿದರೆ, ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿಯನ್ನು ಬಿಡುವವರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ನಾನಂತೂ ಪಕ್ಷ ಬಿಡುತ್ತೇನೆಂದು ಎಲ್ಲಿಯೂ ಹೇಳಿಲ್ಲ ಎಂದು ರೇಣುಕಾಚಾರ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಲಿಂಗಾಯತರ ಕಡೆಗಣನೆ: ನನಗೆ ಯಾವ ಹೈಕಮಾಂಡೂ ಇಲ್ಲ, ಶಾಮನೂರು ಕಿಡಿ

ಟೊಮ್ಯಾಟೋಗೆ ಬೆಂಬಲ ಬೆಲೆಗೆ ಒತ್ತಾಯ

ದಾವಣಗೆರೆ: ನ್ಯಾಮತಿ ತಾ. ಬೆಳಗುತ್ತಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೊಮ್ಯಾಟೋ ಬೆಳೆಗಾರ ರೈತರ ಸಂಕಷ್ಟ ಆಲಿಸಿದರು. ಇದೇ ವೇಳೆ ಮಾತನಾಡಿದ ಬೆಳೆಗಾರ ರೈತರು, 20 ಕೆಜಿ ಬಾಕ್ಸ್‌ಗೆ 3 ಸಾವಿರ ರು. ಇದ್ದ ಟೊಮ್ಯಾಟೋ ಈಗ 75 ರು. ಗೆ ಬಾಕ್ಸ್ ಆಗಿದೆ. ರೈತರು ಬೆಳೆದ ಟೊಮ್ಯಾಟೋ ಕೇಳುವವರೇ ಇಲ್ಲದಂತಾಗಿದೆ ಎಂದು ಮಾಜಿ ಸಚಿವರ ಗಮನಕ್ಕೆ ತಂದರು.

ರೈತರ ಅಹವಾಲು ಆಲಿಸಿದ ರೇಣುಕಾಚಾರ್ಯ, ಟೊಮ್ಯಾಟೋ ಬೆಲೆ ಕುಸಿದ ಹಿನ್ನೆಲೆಯಲ್ಲಿ ಸರ್ಕಾರವು ಬೆಂಬಲ ಬೆಲೆ ಘೋಷಿಸಬೇಕು. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ನೆರವಾಗಬೇಕು. ಟೊಮ್ಯಾಟೋ ಬೆಳೆದ ರೈತರು ನಷ್ಟ ಅನುಭವಿಸುತ್ತಿದ್ದು, ಸರ್ಕಾರ ನೆರವಿಗೆ ಧಾವಿಸಲಿ ಎಂದು ಒತ್ತಾಯಿಸಿದರು.

Follow Us:
Download App:
  • android
  • ios