ಶ್ರೀರಾಮುಲು ಕಾಲು ಹಿಡಿದು ಕೊಂಡು ನಿಮಗೆ ಅನ್ಯಾಯ ಮಾಡಿಬಿಟ್ಟೆವು ಎಂದು ಅಭಿಮಾನಿಗಳು ಅತ್ತಿದ್ದಾರೆ. ಅಭಿಮಾನಿಗಳನ್ನ ಸಮಾಧಾನ ಮಾಡುವಲ್ಲಿ ಶ್ರೀರಾಮುಲು ಕೂಡ ಕ್ಷಣಕಾಲ ಗದ್ಗದಿತರಾಗಿ ಕಣ್ಣಿರು ಹಾಕಿದ್ದಾರೆ. ಬಳ್ಳಾರಿಯ ಗ್ರಾಮೀಣ ಭಾಗದಲ್ಲಿ ಹಳ್ಳಿಗಳಲ್ಲಿ ಅಭಿಮಾನಿಗಳು ಕಣ್ಣಿರು ಹರಿಸುತ್ತಿದ್ದಾರೆ. 

ಬಳ್ಳಾರಿ(ಮೇ.16): ಅಭಿಮಾನಿಗಳ ಕಣ್ಣಿರಿಗೆ ಶ್ರೀರಾಮುಲು ಅವರು ಭಾವುಕರಾದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೌದು, ಶ್ರೀರಾಮುಲು ಸೋಲಿಗೆ ಅಭಿಮಾನಿಗಳು ಬಿಕ್ಕಿ‌ ಬಿಕ್ಕಿ ಅತ್ತಿರೋ ವಿಡಿಯೋ ವೈರಲ್ ಭಾರೀ ವೈರಲ್‌ ಆಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀರಾಮುಲು ಕಾಲು ಹಿಡಿದು ಕೊಂಡು ನಿಮಗೆ ಅನ್ಯಾಯ ಮಾಡಿಬಿಟ್ಟೆವು ಎಂದು ಅಭಿಮಾನಿಗಳು ಅತ್ತಿದ್ದಾರೆ. ಅಭಿಮಾನಿಗಳನ್ನ ಸಮಾಧಾನ ಮಾಡುವಲ್ಲಿ ಶ್ರೀರಾಮುಲು ಕೂಡ ಕ್ಷಣಕಾಲ ಗದ್ಗದಿತರಾಗಿ ಕಣ್ಣಿರು ಹಾಕಿದ್ದಾರೆ. ಬಳ್ಳಾರಿಯ ಗ್ರಾಮೀಣ ಭಾಗದಲ್ಲಿ ಹಳ್ಳಿಗಳಲ್ಲಿ ಅಭಿಮಾನಿಗಳು ಕಣ್ಣಿರು ಹರಿಸುತ್ತಿದ್ದಾರೆ. ಸೋಲಿನ ಬಳಿಕ‌ ಶ್ರೀರಾಮುಲು ಹಳ್ಳಿಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. 

ಶ್ರೀರಾಮುಲು ಅವರಂತ ದೊಡ್ಡ ನಾಯಕನನ್ನು ಸೋಲಿಸಿರುವೆ, ನಾನು ಮಂತ್ರಿ ಆಕಾಂಕ್ಷಿ: ನಾಗೇಂದ್ರ

ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಿ 30,000 ಮತಗಳ ಅಂತರದಿಂದ ಶಾಸಕ ನಾಗೇಂದ್ರ ವಿರುದ್ಧ ಶ್ರೀರಾಮುಲು ಸೋಲು ಕಂಡಿದ್ದಾರೆ. 1999ರಲ್ಲಿ ರಾಜಕೀಯ ಜೀವನಕ್ಕೆ ಬಂದಿರೋ ಶ್ರೀರಾಮುಲು ಮೊದಲ‌ ಬಾರಿ ಸೋತ್ರು 2004ರಿಂದ ಈವರೆಗೆ ‌ಸೋತಿರಲಿಲ್ಲ. 2004 ಬಳ್ಳಾರಿ ನಗರ, 2008, 2011ರ ಉಪಚುನಾವಣೆ 2013 ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರದಲ್ಲಿ ಗೆದ್ದಿದ್ರು. 2014ರಲ್ಲಿ‌ ಕ್ಷೇತ್ರ ಬಿಟ್ಟು ಎಂಪಿಯಾಗಿದ್ದ ಶ್ರೀರಾಮುಲು 2018ರಲ್ಲಿ ಮೊಳಕಾಲ್ಮೂರಿನಿಂದ ಗೆದ್ದು ಇದೀಗ ಸ್ವಕ್ಷೇತ್ರದಲ್ಲಿ ಸೋತಿದ್ದಾರೆ.