Asianet Suvarna News Asianet Suvarna News

ರಾಜಕೀಯ ನಾಯಕರ ಬೀದಿ ಕಾಳಗ; ಪರಸ್ಪರ ವಾಗ್ದಾಳಿ

ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಹಾಗೂ ಬಿಜೆಪಿ ಜನಸಂಕಲ್ಪ ಯಾತ್ರೆ ಬುಧವಾರ ರಾಜಕೀಯ ನಾಯಕರ ಬೀದಿ ಕಾಳಗಕ್ಕೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು

Bjp congress political fight janasankalpa  bharat jodo yatre karnataka rav
Author
First Published Oct 13, 2022, 10:52 AM IST

ಬೆಂಗಳೂರು (ಅ.13) : ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಹಾಗೂ ಬಿಜೆಪಿ ಜನಸಂಕಲ್ಪ ಯಾತ್ರೆ ಬುಧವಾರ ರಾಜಕೀಯ ನಾಯಕರ ಬೀದಿ ಕಾಳಗಕ್ಕೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು. ಸಿದ್ದರಾಮಯ್ಯನವರು ಮೋದಿ ಪಾದದೂಳಿಗೂ ಸಮಾನರಲ್ಲ, ರಾಹುಲ್‌ಗಾಂಧಿ ಬಚ್ಚಾ ಎಂಬ ಬಿಎಸ್‌ವೈ ಹೇಳಿಕೆಗೆ ಕಿಡಿ ಕಾರಿದ ಸಿದ್ದರಾಮಯ್ಯ, ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಅರಳು ಅರಳು ಎಂದರು. ಇದರ ಜತೆಗೆ ಇತರ ಕಾಂಗ್ರೆಸಿಗರೂ ಬಿಎಸ್‌ವೈ ವಿರುದ್ಧ ಮುಗಿಬಿದ್ದರು. ಇದೇ ವೇಳೆ, ಬೊಮ್ಮಾಯಿ ಅವರು ಸಿದ್ದು ವಿರುದ್ಧ ಕಿಡಿ ಕಾರಿದ್ದು, ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್‌ನವರು ತತ್ತರಿಸಿ ಹೋಗಿದ್ದಾರೆ ಎಂದಿದ್ದಾರೆ.

ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್‌ ತತ್ತರ: ಸಿಎಂ ಬೊಮ್ಮಾಯಿ

ನೆಹರೂ ಪಾದಕ್ಕೆ ಮೋದಿ ಸಮಾನ ಅಲ್ಲ ಅಂತ ಹೇಳಕಾಗುತ್ತಾ?  ಬಿಎಸ್‌ವೈಗೆ ಸಿದ್ದು ಟಾಂಗ್‌

ಯಡಿಯೂರಪ್ಪ ಏನೋ ಹೇಳ್ತಾರೆ ಅಂತ ನಾನು ನೆಹರೂ ಪಾದಕ್ಕೆ ಮೋದಿ ಸಮಾನ ಅಲ್ಲ ಅಂತ ಹೇಳೋಕೆ ಆಗುತ್ತಾ? ಯಡಿಯೂರಪ್ಪ ಅವರ ಮಟ್ಟಕ್ಕೆ ಇಳಿದು ನಾನು ಮಾತನಾಡೋಕೆ ಹೋಗಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಭಾರತ್‌ ಜೋಡೋ ಪಾದಯಾತ್ರೆ ವೇಳೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೋದಿ ಪಾದ ಧೂಳಿಗೆ ಸಿದ್ದರಾಮಯ್ಯ ಸಮ ಆಗುವುದಿಲ್ಲ ಎಂಬ ಯಡಿಯೂರಪ್ಪ ಅವರ ಮಾತಿಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದರು. ಮೋದಿಯವರು ಪ್ರಧಾನಿ. ಅವರ ಬಗ್ಗೆ ಹಾಗೆ ಮಾತಾಡಲ್ಲ. ಅದೇ ರೀತಿ, ಯಡಿಯೂರಪ್ಪ ಅವರು ರಾಹುಲ… ಗಾಂಧಿ ಪಾದಕ್ಕೂ ಸಮಾನ ಅಲ್ಲ ಅಂತ ನಾನು ಹೇಳುವುದಿಲ್ಲ. ಅದು ಕೀಳು ಅಭಿರುಚಿಯಾಗುತ್ತದೆ. ರಾಜ್ಯದ ಮುಖ್ಯಮಂತ್ರಿಯಾದವರು ಈ ತರಹ ಮಾತನಾಡಬಾರದು. ಅದರಲ್ಲೂ ಯಡಿಯೂರಪ್ಪನವರು ಇಷ್ಟೊಂದು ಕೀಳುಮಟ್ಟಕ್ಕೆ ಇಳಿದು ಮಾತನಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಅವರಿಗೆ ವಯಸ್ಸಾಗಿದೆ ಅರುಳು ಮರುಳಾಗಿರಬಹುದೇನೋ ಗೊತ್ತಿಲ್ಲ ಎಂದರು.

ಮೋದಿ ಟೀಕಿಸಿದ್ದಕ್ಕೆ ರಾಹುಲ್‌ ಗಾಂಧಿಗೆ ಬಚ್ಚಾ ಎಂದಿರುವೆ: ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿ ವಿಶ್ವವೇ ಮೆಚ್ಚುವ ನಾಯಕರಾಗಿದ್ದಾರೆ. ಅವರ ಬಗ್ಗೆ ಯಾರೇ ಹಗುರ ಹೇಳಿಕೆ ನೀಡಿದರೂ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಬೇಕು. ಮೋದಿ ಅವರನ್ನು ಎಐಸಿಸಿ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಕ್ಕೆ ನಾನು ಅವರನ್ನು ಬಚ್ಚಾ ಎಂದಿರುವೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಹೊಸಪೇಟೆ ಹಾಗೂ ಕುಷ್ಟಗಿಯಲ್ಲಿ ಮಾತನಾಡಿದ ಅವರು, ರಾಹುಲ್‌ ಗಾಂಧಿಯವರನ್ನು ಬಚ್ಚಾ ಅಂತ ನಾನು ಕರೆದಿದ್ದು, ಸರಿಯಲ್ಲ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ನಾನು, ಬಚ್ಚಾ ಅನ್ನೋ ಪದ ಬಳಸಿದ್ದೇನೆ. ರಾಹುಲ್‌ ಗಾಂಧಿಯವರೇ ಹಾಗೆ ಮಾತನಾಡೋ ಹಾಗೆ ಮಾಡಿಕೊಂಡ್ರು. ದೇಶದಲ್ಲಿ ಇತ್ತೀಚಿನ ಸರ್ವೇ ಪ್ರಕಾರ ಶೇ.73 ಜನ ಮೋದಿ ಪರ ಇದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಡ್ರೆಸ್‌ಗೆ ಇರೋಲ್ಲ. ಸಿದ್ದರಾಮಯ್ಯ, ಡಿಕೆಶಿ ಅವರು ಏನೇ ಕಸರತ್ತು ಮಾಡಲಿ, ರಾಹುಲ್‌ ಗಾಂಧಿ ಅಷ್ಟೇ ಅಲ್ಲ ಸೋನಿಯಾಗಾಂಧಿ ಅವರನ್ನೇ ಕರೆತಂದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.

ಎಲೆಕ್ಷನ್‌ ವೇಳೆ ಬಿಜೆಪಿಗೆ ದಲಿತರು ನೆನಪಾಗ್ತಾರೆ: ಸಿದ್ದು

ಬಿಜೆಪಿಯವರಿಗೆ ದಲಿತರ ಉದ್ದಾರ ಬೇಕಿಲ್ಲ. ಈ ದೇಶವನ್ನು ಹಿಂದೂರಾಷ್ಟ್ರ ಮಾಡುವುದು ಅವರ ಬಯಕೆ. ರಾಯಚೂರಿನಲ್ಲಿ ಮತಾಂತರಗೊಂಡ ದಲಿತ ಕುಟುಂಬದ ಮನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಉದ್ದೇಶಿತ ಭೇಟಿಯನ್ನು ರದ್ದು ಮಾಡಿರುವುದು ಇದಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಭಾರತ್‌ ಜೋಡೋ ಪಾದಯಾತ್ರೆ ವೇಳೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ,ಎಲೆಕ್ಷನ್‌ ವೇಳೆ ಬಿಜೆಪಿಗೆ ದಲಿತರು ನೆನಪಾಗ್ತಾರೆ. ಇನ್ಮೇಲೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಳಿ ಅವರು ಹೆಚ್ಚು ಹೋಗುತ್ತಾರೆ. ಆದರೆ, ಇದುವರೆಗೂ ಆ ಸಮುದಾಯಗಳಿಗೆ ಏನೂ ಕೆಲಸ ಮಾಡಿಲ್ಲ. ಬಿಜೆಪಿಯದು ದ್ವೇಷದ ರಾಜಕಾರಣ. ಧರ್ಮವನ್ನು ಒಡೆಯುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಸರ್ಕಾರ ಎಂದರು.

ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್‌ನವರು ತತ್ತರಿಸಿ ಹೋಗಿದ್ದಾರೆ: ಸಿಎಂ

ನಿನ್ನೆಯ ನಮ್ಮ ರಾಜಾಹುಲಿ ಯಡಿಯೂರಪ್ಪನವರ ಭಾಷಣಕ್ಕೆ ಕಾಂಗ್ರೆಸ್‌ನವರು ತತ್ತರಿಸಿ ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಜನ ಸಂಕಲ್ಪಯಾತ್ರೆಯಲ್ಲಿ ಮಾತನಾಡಿ, ಸಿದ್ದು ಅವರು ಬಿಎಸ್‌ವೈಗೆ ಅರಳು, ಮರಳು ಅಂತಿದ್ದಾರೆ. ಆದರೆ, ರಾಜಾಹುಲಿ ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ಸದಾ ಅರಳುತ್ತದೆ. ಸಿದ್ದರಾಮಯ್ಯನವರಿಗೇ ಅರಳು, ಮರಳು ಆಗಿದೆ. ಬಿಎಸ್‌ವೈಗೆ ಇಂದಿಗೂ ಅದೇ ಸ್ಫೂರ್ತಿ ಇದೆ ಎಂದರು.

ಬಿಎಸ್‌ವೈ ಅವರನ್ನು ಅಧಿಕಾರದಿಂದ ಇಳಿಸಲು ಎನೆಲ್ಲಾ ಮಾಡಿದ್ರಿ ಎನ್ನುವುದು ಗೊತ್ತಿದೆ. ಕೇಸ್‌ ಹಾಕಿಸಿದ್ರು, ಅವರನ್ನು ಶಾಶ್ವತವಾಗಿ ಅಧಿಕಾರದಿಂದ ದೂರ ಇಡಲು ಯತ್ನಿಸಿದ್ರು. ಇದು ದ್ವೇಷದ ರಾಜಕಾರಣ ಅಲ್ವಾ ಎಂದರು. ಸಿದ್ದರಾಮಯ್ಯನವರದ್ದು ವಿತಂಡವಾದ. ಮೋದಿ, ನೆಹರುಗೆ ಸಮಾನರಲ್ಲ ಅಂತಾರೆ. ನಾವು ಮಾತನಾಡಬಹುದು. ಮಹಾತ್ಮ ಗಾಂಧಿ ಪಾದದ ಧೂಳಿಗೆ ನೆಹರು ಸಮಾನರಾ..? ಎಂದು ಗುಡುಗಿದರು.

ವಿಶ್ವಬ್ಯಾಂಕ್‌ ವರದಿ ಬಂದಿದೆ. ಬೇರೆ ಎಲ್ಲ ದೇಶಗಳಲ್ಲಿ ಆರ್ಥಿಕ ಹಿಂಜರಿತ ಕಂಡಿದೆ. ಆದರೆ, ಭಾರತ ಆರ್ಥಿಕ ಸಮಾನತೆ ಕಂಡುಕೊಂಡು ಸದೃಢವಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ. ಮೀಸಲಾತಿ ವಿಚಾರವಾಗಿ ಕಾಂಗ್ರೆಸ್‌ ಯಾವತ್ತೂ ಯೋಚನೆ ಮಾಡಲಿಲ್ಲ. ಲಿಂಗಾಯತ, ವೀರಶೈವ ಅಂತ ಧರ್ಮ ಒಡೆದ್ರಿ. ಆದರೆ, ನಮ್ಮ ಸರ್ಕಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಸಾಗಿ ಅಂತಿದ್ದೇವೆ ಎಂದರು.

Hijab Case: ಹಿಜಾಬ್‌ ಕುರಿತು ಬಾರದ ತೀರ್ಪು, ವಿಸ್ತ್ರತ ಪೀಠಕ್ಕೆ ಪ್ರಕರಣ

ನಿಮ್ಮ ಸರ್ಕಾರದಲ್ಲಿ ದಲಿತ ಮಕ್ಕಳ ಹಾಸಿಗೆ ದಿಂಬು ಸಹ ಬಿಡದೆ ಭ್ರಷ್ಟಾಚಾರ ಮಾಡಿದ್ರಿ. ನಿಮ್ಮ ಸರ್ಕಾರ ಇದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆ ಆಯ್ತು. ಆದ್ರೆ ಈಗ ಆ ಭಯ ಇಲ್ಲ ಎಂದರು. ನಿಮ್ಮ ಸರ್ಕಾರ ಇದ್ದಾಗ ಕೇಸ್‌ ಬಿಳ್ತಾ ಇದ್ವು. ಅದಕ್ಕೆ ಎಸಿಬಿಯನ್ನು ಆರಂಭ ಮಾಡಿದ್ರೀ. ಈಗ ಲೋಕಾಯುಕ್ತ ಮತ್ತೆ ಬಂದ ಮೇಲೆ ನಿಮ್ಮ ಹಗರಣಗಳ ತನಿಖೆ ಮಾಡುತ್ತೇವೆ ಎಂದರು.

Follow Us:
Download App:
  • android
  • ios