Asianet Suvarna News Asianet Suvarna News

Hijab Case: ಹಿಜಾಬ್‌ ಕುರಿತು ಬಾರದ ತೀರ್ಪು, ವಿಸ್ತ್ರತ ಪೀಠಕ್ಕೆ ಪ್ರಕರಣ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್‌ ಪ್ರಕರಣದ ತೀರ್ಪನ್ನು ಸುಪ್ರೀ ಕೋರ್ಟ್‌ ಗುರುವಾರ ಪ್ರಕಟಿಸಿದೆ. ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಕಾರಣ, ಪ್ರಕರಣದಲ್ಲಿ ವಿಸ್ತ್ರತ ಪೀಠಕ್ಕೆ ವರ್ಗಾವಣೆಯಾಗಿದೆ.
 

Supreme Court to pronounce judgment in the hijab case split verdict san
Author
First Published Oct 13, 2022, 10:40 AM IST

ನವದೆಹಲಿ (ಅ.13): ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತನ್ನ ಆದೇಶವನ್ನು ಪ್ರಕಟಿಸಿದೆ. ಹಿಜಾಬ್‌ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಕಾರಣ ಪ್ರಕರಣವನ್ನು ವಿಸ್ತ್ರತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹಾಗೂ ಹೇಮಂತ್‌ ಗುಪ್ತಾ ನೇತೃತ್ವದ ನ್ಯಾಯಪೀಠ ಬೆಳಗ್ಗೆ 10.30ಕ್ಕೆ ಐತಿಹಾಸಿಕ ತೀರ್ಪನ್ನು ಪ್ರಕಟಿಸಿತು. ಆದರೆ, ಇಬ್ಬರು ನ್ಯಾಯಾಧೀಶರು ತಮ್ಮ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಾರ್ಚ್‌ 15 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ ಎಂದು ಹೇಳುವ ಮೂಲಕ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಅನ್ನು ನಿಷೇಧಿಸಿತ್ತು.  ಕೋರ್ಟ್‌ ಹಾಲ್‌ ನಂ.6ರಲ್ಲಿ ಪ್ರಕರಣದ ತೀರ್ಪು ನೀಡಲಾಯಿತು. ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ಮುಸ್ಲಿ ವಿದ್ಯಾರ್ಥಿನಿಯರ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದ್ದಾರೆ. ಇನ್ನೊಂದೆಡೆ, ಸುಧಾಂಶು ದುಲಿಯಾ ರಾಜ್ಯ ಸರ್ಕಾರ ನೀಡಿದ್ದ ಹಿಜಾಬ್‌ ಆದೇಶವನ್ನು ರದ್ದುಗೊಳಿದ್ದಾರೆ.

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ಮೇಲೆ ಸುಪ್ರೀಂ ಕೋರ್ಟ್ (supreme court) ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ ವಿಭಜಿತ ತೀರ್ಪು ನೀಡಿದೆ. ಹಿಜಾಬ್ (Islam) ಇಸ್ಲಾಂ (Hijab ಧರ್ಮದ ಅತ್ಯಗತ್ಯ ಆಚರಣೆಯಲ್ಲ ಮತ್ತು ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸುವುದನ್ನು ನಿಷೇಧಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ 26 ಮೇಲ್ಮನವಿಗಳನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತಾ ವಜಾಗೊಳಿಸಿದ್ದಾರೆ. ಆದರೆ, ತಮ್ಮ ಅಭಿಪ್ರಾಯದಲ್ಲಿನ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಕರ್ನಾಟಕ ಹೈಕೋರ್ಟ್ (Karnataka High Court) ತೀರ್ಪನ್ನು ತಳ್ಳಿ ಹಾಕಿದ್ದಾರೆ. ವಿವಾದಕ್ಕೆ ಅಗತ್ಯವಾದ ಧಾರ್ಮಿಕ ಆಚರಣೆಯ ಸಂಪೂರ್ಣ ಪರಿಕಲ್ಪನೆಯು ಅನಿವಾರ್ಯವಲ್ಲ ಎಂದು ಹೇಳಿದರು. "ಹೈಕೋರ್ಟ್ ತಪ್ಪು ದಾರಿ ಹಿಡಿದಿದೆ ಎಂದನಿಸಿದೆ. ಇದು ಅಂತಿಮವಾಗಿ ಆರ್ಟಿಕಲ್ 14 ಅಡಿಯಲ್ಲಿ ಆಯ್ಕೆಯ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Hijab Case: ಹಿಜಾಬ್‌ ಕುರಿತು ಬರದ ತೀರ್ಪು, ವಿಸ್ತ್ರತ ಪೀಠಕ್ಕೆ ಪ್ರಕರಣ
ವಿಚಾರಣೆಯ ವೇಳೆ ನ್ಯಾಯಪೀಠದ ಮುಂದೆ ಎದುರಾದ ಪ್ರಶ್ನೆಗಳು

1. ಇಸ್ಲಾಂನಲ್ಲಿ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ?

2. ಆರ್ಟಿಕಲ್ 25 ರ ರಕ್ಷಣೆಯನ್ನು ಪಡೆಯಲು ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ ಎಂದು ಸ್ಥಾಪಿಸುವ ಅಗತ್ಯವಿದೆಯೇ?

Hijab ban; ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿ ಪರಿಶೀಲನೆಗೆ ಸುಪ್ರೀಂ ಒಪ್ಪಿಗೆ

3. ಹಿಜಾಬ್ ಧರಿಸುವ ಹಕ್ಕನ್ನು ಆರ್ಟಿಕಲ್ 19(1)(ಎ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಮತ್ತು ಆರ್ಟಿಕಲ್ 21 ರ ಅಡಿಯಲ್ಲಿ ಗೌಪ್ಯತೆ ಮತ್ತು ಘನತೆಯ ಹಕ್ಕಿನ ಭಾಗವಾಗಿ ಹೇಳಿಕೊಳ್ಳಬಹುದೇ?

4. ಫೆಬ್ರವರಿ 5 ರ ಸರ್ಕಾರಿ ಆದೇಶವನ್ನು ಆರ್ಟಿಕಲ್ 19(2) ಅಡಿಯಲ್ಲಿ ಸಮಂಜಸವಾದ ನಿರ್ಬಂಧಗಳ ಆಧಾರದ ಮೇಲೆ ಸಮರ್ಥಿಸಬಹುದೇ?
 

ಹಿಜಾಬ್ ಸಂಘರ್ಷದ ಹಾದಿ
ಜನವರಿ 31 : ಹಿಜಾಬ್​ಗೆ ಅವಕಾಶ ಕೋರಿ ಅರ್ಜಿ ಸಲ್ಲಿಕೆ
ಫೆಬ್ರವರಿ 3 :ಹೈಕೋರ್ಟ್​ ಏಕಸದಸ್ಯ ಪೀಠದಲ್ಲಿ ವಿಚಾರಣೆ ಆರಂಭ
ಫೆಬ್ರವರಿ 5: ರಾಜ್ಯ ಸರ್ಕಾರದಿಂದ ಶಿಕ್ಷಣ ಸಂಸ್ಥೆಗಳಿಗೆ ವಸ್ತ್ರ ಸಂಹಿತೆ ಬಗ್ಗೆ ಆದೇಶ
ಫೆಬ್ರವರಿ 5: ಶಾಲೆ-ಕಾಲೇಜು ಅಭಿವೃದ್ಧಿ ಸಮಿತಿಯ ವಸ್ತ್ರ ಸಂಹಿತೆ ಕಡ್ಡಾಯಗೊಳಿಸಿ ಆದೇಶ
ಫೆಬ್ರವರಿ 5: ಖಾಸಗಿ ಶಾಲಾ-ಕಾಲೇಜುಗಳಲ್ಲಿ ಆಡಳಿತ ಮಂಡಳಿಯದ್ದೇ ಅಂತಿಮ ನಿರ್ಧಾರ
ಫೆಬ್ರವರಿ 5: ರಾಜ್ಯ ಸರ್ಕಾರದಿಂದ ಶಿಕ್ಷಣ ಸಂಸ್ಥೆಗಳಿಗೆ ವಸ್ತ್ರ ಸಂಹಿತೆ ಬಗ್ಗೆ ಆದೇಶ
ಫೆಬ್ರವರಿ 8 : ಅರ್ಜಿದಾರರ ಪರ ಹೈಕೋರ್ಟ್​ನಲ್ಲಿ ದೇವದತ್ ಕಾಮತ್ ವಾದ
ಫೆಬ್ರವರಿ 9:  ವಿಸ್ತೃತ ಪೀಠಕ್ಕೆ ಅರ್ಜಿಯ ವರ್ಗಾವಣೆ
ಫೆಬ್ರವರಿ 9:  ಮುಖ್ಯ ನ್ಯಾಯಮೂರ್ತಿಗಳಿಂದ ತ್ರಿಸದಸ್ಯ ಪೀಠ ರಚನೆ
ಫೆಬ್ರವರಿ 10:  2:30ಕ್ಕೆ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ
ಫೆಬ್ರವರಿ 10:  ಸಂಜಯ್ ಹೆಗ್ಡೆ, ದೇವದತ್ ಕಾಮತ್, ರವಿಕುಮಾರ್ ವಾದ
ಫೆಬ್ರವರಿ 10:  ಮಧ್ಯಂತರ ಆದೇಶ ನೀಡಿದ್ದ ತ್ರಿಸದಸ್ಯ ಪೀಠ
ಫೆಬ್ರವರಿ 10:  ಧಾರ್ಮಿಕ ಉಡುಪು ಧರಿಸದಂತೆ ನಿರ್ಬಂಧ
ಫೆಬ್ರವರಿ 18:  ಅರ್ಜಿದಾರರ ಪರ ವಕೀಲರ ವಾದ ಮಂಡನೆ
ಫೆಬ್ರವರಿ 21: ಸರ್ಕಾರ & ಕಾಲೇಜು ಪರ ವಾದ ಮಂಡನೆ
ಫೆಬ್ರವರಿ 24: ಸರ್ಕಾರ & ಕಾಲೇಜು ಆಡಳಿತ ಮಂಡಳಿ ಪ್ರತಿವಾದ
ಫೆಬ್ರವರಿ 24: ಸುದೀರ್ಘ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಿದ ಹೈಕೋರ್ಟ್​
ಮಾರ್ಚ್​ 15: ಸಿಜೆ ರಿತುರಾಜ್ ಅವಸ್ಥಿ ಒಳಗೊಂಡ ಪೂರ್ಣ ಪೀಠದಿಂದ ತೀರ್ಪು
ಮಾರ್ಚ್​ 15: ಸರ್ಕಾರದ ವಸ್ತ್ರ ಸಂಹಿತೆ ಆದೇಶ ಎತ್ತಿಹಿಡಿದ ಹೈಕೋರ್ಟ್​
ಮಾರ್ಚ್​ 15: ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ ಎಂದ ಹೈಕೋರ್ಟ್​
ಸೆಪ್ಟೆಂಬರ್ 5: ಸುಪ್ರೀಂನಲ್ಲಿ ಹಿಜಾಬ್ ಪರ ಅರ್ಜಿದಾರರ ಮೇಲ್ಮನವಿ ವಿಚಾರಣೆ 
ಸೆಪ್ಟೆಂಬರ್ 5: ನ್ಯಾ. ಹೇಮಂತ್ ಗುಪ್ತಾ, ನ್ಯಾ. ಸುದಾಂಶು ದುಲಿಯಾ ಪೀಠದಲ್ಲಿ ವಿಚಾರಣೆ
ಸೆಪ್ಟೆಂಬರ್ 22: ಹಿಜಾಬ್ ಪರ-ವಿರೋಧದ ಮ್ಯಾರಥಾನ್ ವಿಚಾರಣೆ ಅಂತ್ಯ
ಸೆಪ್ಟೆಂಬರ್ 22: 10 ದಿನಗಳ ವಿಚಾರಣೆ ಬಳಿಕ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್​

ಹಿಜಾಬ್‌ ಕುರಿತಾಗಿ ಕರ್ನಾಟಕ ಹೈಕೋರ್ಟ್‌ ತೀರ್ಪು: Karnataka Hijab Verdict: ಸುದೀರ್ಘ 11 ದಿನಗಳ ವಿಚಾರಣೆ ಬಳಿಕ ಹೈಕೋರ್ಟ್‌ ಮಹತ್ವದ ತೀರ್ಪು!

Follow Us:
Download App:
  • android
  • ios