ರಾಜಾಹುಲಿ ಭಾಷಣಕ್ಕೆ ಕಾಂಗ್ರೆಸ್ ತತ್ತರ: ಸಿಎಂ ಬೊಮ್ಮಾಯಿ
ನಿನ್ನೆಯ ನಮ್ಮ ರಾಜಾಹುಲಿ ಯಡಿಯೂರಪ್ಪನವರ ಭಾಷಣಕ್ಕೆ ಕಾಂಗ್ರೆಸ್‌ನವರು ತತ್ತರಿಸಿ ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜನ ಸಂಕಲ್ಪಯಾತ್ರೆಯಲ್ಲಿ ಮಾತನಾಡಿ, ಬಿಎಸ್‌ವೈಗೆ ಅರಳು, ಮರಳು ಅಂತಿದ್ದಾರೆ. ಆದರೆ, ರಾಜಾಹುಲಿ ಯಾರಿಗೂ ಜಗ್ಗಲ್ಲ ಬಗ್ಗಲ್ಲ. ಸದಾ ಅರಳುತ್ತದೆ. ಸಿದ್ದರಾಮಯ್ಯನವರಿಗೇ ಅರಳು, ಮರಳು ಎಂದು ಲೇವಡಿ ಮಾಡಿದರು.
ಹೊಸಪೇಟೆ (ಅ.13) : ನಿನ್ನೆಯ ನಮ್ಮ ರಾಜಾಹುಲಿ ಯಡಿಯೂರಪ್ಪನವರ ಭಾಷಣಕ್ಕೆ ಕಾಂಗ್ರೆಸ್‌ನವರು ತತ್ತರಿಸಿ ಹೋಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜನ ಸಂಕಲ್ಪಯಾತ್ರೆಯಲ್ಲಿ ಮಾತನಾಡಿ, ಬಿಎಸ್‌ವೈಗೆ ಅರಳು, ಮರಳು ಅಂತಿದ್ದಾರೆ. ಆದರೆ, ರಾಜಾಹುಲಿ ಯಾರಿಗೂ ಜಗ್ಗಲ್ಲ ಬಗ್ಗಲ್ಲ. ಸದಾ ಅರಳುತ್ತದೆ. ಸಿದ್ದರಾಮಯ್ಯನವರಿಗೇ ಅರಳು, ಮರಳು ಎಂದು ಲೇವಡಿ ಮಾಡಿದರು.
ಬಚ್ಚಾ ರಾಹುಲ್ ಗಾಂಧಿ ಪ್ರಧಾನಿ ಟೀಕೆ ಮಾಡ್ತಾನೆ, ಕಾಂಗ್ರೆಸ್ ವಿರುದ್ಧ ಗುಡುಗಿದ ಬಿಎಸ್‌ವೈ !
ಬಿಎಸ್‌ವೈಗೆ ಇಂದಿಗೂ ಅದೇ ಸ್ಫೂರ್ತಿ ಇದೆ. ಬಿಎಸ್‌ವೈ ಅವರನ್ನ ಅಧಿಕಾರದಿಂದ ಇಳಿಸಲು ಏನೆಲ್ಲಾ ಮಾಡಿದ್ರೀ ಗೊತ್ತಿದೆ. ಕೇಸ್ ಹಾಕಿಸಿದ್ರು ಶಾಶ್ವತವಾಗಿ ಅಧಿಕಾರದಿಂದ ದೂರ ಇಡಲು ಯತ್ನಿಸಿದ್ರು, ಕರ್ನಾಟಕದ ಹೃದಯ ಸಿಂಹಾಸನದಲ್ಲಿ ಬಿಎಸ್‌ವೈ ಇದ್ದಾರೆ. ಸಿದ್ದರಾಮಯ್ಯನವರದ್ದು ವಿತಂಡವಾದ. ಮೋದಿ, ನೆಹರುಗೆ ಸಮಾನರಲ್ಲ ಅಂತಾರೆ. ನಾವು ಮಾತನಾಡಬಹುದು. ಮಹಾತ್ಮ ಗಾಂಧಿ ಪಾದದ ಧೂಳಿಗೆ ನೆಹರು ಸಮಾನರಾ? ಎಂದು ಗುಡುಗಿದರು.
ಪ್ರಪಂಚದಲ್ಲಿ ಕೋವಿಡ್ ಆವರಿಸಿತ್ತು. ಆದರೆ, ಮೋದಿಯವರು ದೇಶದ ಜನರ ಆರೋಗ್ಯದ ಸುರಕ್ಷತೆಗೆ ಗಮನ ನೀಡಿದರು. ಪ್ರವಾಹಕ್ಕೆ ಸ್ಪಂದಿಸಿದ್ದಾರೆ. ಆರೋಗ್ಯಕ್ಕೆ ಗಮನ ಹರಿಸಿದ್ದಾರೆ. ಬೇಟಿ ಪಢಾವೋ, ಬೇಟಿ ಬಚಾವೋ ಸೇರಿದಂತೆ ಹಲವಾರು ಯೋಜನೆಗಳನ್ನು ಮಾಡಿದ್ದಾರೆ ಎಂದರು.
ಬೆಕ್ಕು ಅಡ್ಡ ಬರುತ್ತೆ ಅಂದ್ರೆ ಮನೆಯಿಂದ ಹೊರಗೆ ಬರೋಕೆ ಇರದೇ ಆಗುತ್ತಾ. ಬೆಕ್ಕು ಅಲ್ಲ ಹುಲಿ ಅಡ್ಡ ಬಂದ್ರೂ ನಾವೂ ಹೆದರಲ್ಲ. ನೀವೂ ಸಮುದಾಯ ಒಡೆಯುವ ಪ್ರಯತ್ನ ಮಾಡಿದ್ರೀ. ಲಿಂಗಾಯತ- ವೀರಶೈವ ಅಂತಾ ಧರ್ಮ ಒಡೆದರು. ನಮ್ಮ ಸರ್ಕಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಸಾಗಿ ಅಂತಿದ್ದೇವೆ ಎಂದರು.
ನಿಮ್ಮ ಸರ್ಕಾರದಲ್ಲಿ ದಲಿತ ಮಕ್ಕಳ ಹಾಸಿಗೆ ದಿಂಬು ಸಹ ಬಿಡದೇ ಭ್ರಷ್ಟಾಚಾರ ಮಾಡಿದ್ರಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ದುಡ್ಡೇ ಖರ್ಚು ಮಾಡಲಿಲ್ಲ. ನಮ್ಮ ಸರ್ಕಾರದಲ್ಲಿ ಯಾರಿಗೂ ಭಯ ಇಲ್ಲ. ನಿಮ್ಮ ಸರ್ಕಾರ ಇದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆ ಆಯ್ತು. ಆದ್ರೆ ಈಗ ಅ ಭಯ ಇಲ್ಲ ಎಂದರು.
ಮೋದಿ ವಿಶ್ವ ಗುರು ಅಲ್ಲ ಪುಕ್ಕಲು ಗುರು: ಸಿದ್ದರಾಮಯ್ಯ
ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ಮಾಡಿ ಅಂತಾರೆ, ನಾವೂ ಲೋಕಾಯುಕ್ತಕ್ಕೆ ಬಲ ನೀಡಿದ್ದೆವು. ನಿಮ್ಮ ಸರ್ಕಾರ ಇದ್ದಾಗ ಕೇಸ್ ಬೀಳ್ತಾ ಇದ್ವು. ಸಚಿವರ ಮೇಲೆ ಕೇಸ್ ಆಗ್ತಾ ಇದ್ವು, ಅದಕ್ಕೆ ಎಸಿಬಿಯನ್ನ ಅರಂಭ ಮಾಡಿದ್ರೀ, ಈಗ ಲೋಕಾಯುಕ್ತ ಮತ್ತೆ ಬಂದ ಮೇಲೆ ನಿಮ್ಮ ಹಗರಣಗಳು ತನಿಖೆ ಆಗುತ್ತವೆ. ಆಗ ಕಾಂಗ್ರೆಸ್‌ನ ಭ್ರಷ್ಟಾಚಾರದ ಬಣ್ಣ ಬಯಲಾಗುತ್ತದೆ ಎಂದು ಎಚ್ಚರಿಸಿದರು.