*   ತೀರ್ಪು ಖಂಡಿಸಿದವರ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ*   ಶಾಂತಿಯುತ ಬಂದ್‌ ಹತ್ತಿಕ್ಕಲಾಗದು: ಸಿದ್ದು*  ಹೈಕೋರ್ಟ್‌ ಆದೇಶ ಬಂದಮೇಲೆ ಗೈರಾದವರಿಗೆ ಮರುಪರೀಕ್ಷೆ ಇಲ್ಲ 

ಬೆಂಗಳೂರು(ಮಾ.18):  ಹೈಕೋರ್ಟ್‌(High Court of Karnataka) ಅಂತಿಮ ಆದೇಶದ ಹೊರತಾಗಿಯೂ ಶಾಲೆಗಳಲ್ಲಿ ಹಿಜಾಬ್‌ಗಾಗಿ(Hijab) ಒತ್ತಾಯಿಸಿ ಬಂದ್‌ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ(BJP) ಸದಸ್ಯರು ಒತ್ತಾಯಿಸಿದ್ದು, ಇದಕ್ಕೆ ಪ್ರತಿಯಾಗಿ ಶಾಂತಿಯುತವಾಗಿ ಬಂದ್‌ನ್ನು ಸರ್ಕಾರ ಹತ್ತಿಕ್ಕಲಾಗದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಂದ್‌ ಸಮರ್ಥಿಸಿದ್ದರಿಂದ ಗುರುವಾರ ಸದನದಲ್ಲಿ ಬಿಜೆಪಿ-ಕಾಂಗ್ರೆಸ್‌(Congress) ನಡುವೆ ಕೆಲಕಾಲ ವಾಗ್ವಾದ ನಡೆಯಿತು.

ಗುರುವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ರಘುಪತಿ ಭಟ್‌, ಹೈಕೋರ್ಟ್‌ನ ಅಂತಿಮ ಆದೇಶದ ಹೊರತಾಗಿಯೂ ಬಂದ್‌ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ(JV Madhuswamy), ಹೈಕೋರ್ಟ್‌ ಆದೇಶದ ವಿರುದ್ಧ ಬಂದ್‌, ಪ್ರತಿಭಟನೆ ನಡೆಸುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದರು. ಆಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಶಾಂತಿಯುತ ಬಂದ್‌ ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕು. ಹೈಕೋರ್ಟ್‌ ಆದೇಶಕ್ಕೆ ಅಗೌರವ ತೋರಬಾರದು ಆದರೆ ಅಸಮಾಧಾನವನ್ನು ವ್ಯಕ್ತಪಡಿಸಬಹುದು. ಅದನ್ನು ಹತ್ತಿಕ್ಕಲಾಗದು ಎಂದು ಹೇಳಿದರು.

Hijab Verdict: ಹೈಕೋರ್ಟ್‌ ಆದೇಶದ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿನಿಯರು

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌(Jagadish Shettar), ಕೋರ್ಟ್‌ ತೀರ್ಪಿನ ವಿರುದ್ಧ ಪ್ರತಿಭಟನೆ ಬಂದ್‌ ಮಾಡುವುದು ಸರಿಯಲ್ಲ. ಇದು ನ್ಯಾಯಾಂಗಕ್ಕೆ ತೋರುವ ಅಗೌರವ. ನ್ಯಾಯಾಲಯದ ತೀರ್ಪಿನ ವಿರುದ್ಧವೇ ಬಂದ್‌ಗೆ ಕರೆ ನೀಡುತ್ತಾರೆಂದರೆ ನ್ಯಾಯಾಲಯಕ್ಕೆ(Court) ಕಿಮ್ಮತ್ತಿಲ್ಲವೇ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಮಾತಿಗೆ ಸಿ.ಟಿ. ರವಿ, ರಘುಪತಿ ಭಟ್‌ ಸೇರಿದಂತೆ ಬಿಜೆಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ವಾಗ್ವಾದ ನಡೆಯಿತು.

ಹೈಕೋರ್ಟ್‌ ಆದೇಶ ಬಂದಮೇಲೆ ಗೈರಾದವರಿಗೆ ಮರುಪರೀಕ್ಷೆ ಇಲ್ಲ

ಹಿಜಾಬ್‌ ಧರಿಸಲು ಅನುಮತಿಸಿಲ್ಲ ಎಂಬ ಕಾರಣಕ್ಕೆ ಪರೀಕ್ಷೆಗೆ ಗೈರಾಗಿರುವ ವಿದ್ಯಾರ್ಥಿನಿಯರು(Students) ಹಿಜಾಬ್‌ ತೆಗೆದಿಟ್ಟು ಬಂದರೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಬಿಜೆಪಿ ಶಾಸಕ ರಘುಪತಿ ಭಟ್‌ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಹೈಕೋರ್ಟ್‌ ಅಂತಿಮ ಆದೇಶ ಬರುವ ಮೊದಲು ಹಿಜಾಬ್‌ಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಪರೀಕ್ಷೆಗೆ(Exam) ಗೈರಾದವರಿಗೆ ಮತ್ತೊಂದು ಅವಕಾಶ ನೀಡಲು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಆದರೆ ಹೈಕೋರ್ಟ್‌ ಅಂತಿಮ ಆದೇಶದ ಬಳಿಕವೂ ಪರೀಕ್ಷೆ ಬಹಿಷ್ಕರಿಸಿ ಹೊರ ಹೋದವರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನ ಸರಿಯಲ್ಲ: ಉಪರಾಷ್ಟ್ರಪತಿ ನಾಯ್ಡು

ಬೆಂಗಳೂರು: ಕರ್ನಾಟಕದಲ್ಲಿ(Karnataka) ನಡೆಯುತ್ತಿರುವ ವಿದ್ಯಮಾನಗಳು ಸರಿಯಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(Venkaiah Naidu) ಅವರು ವಿಷಾದವನ್ನು ವ್ಯಕ್ತಪಡಿಸಿದ್ದರು. 

Hijab Row: ಹಿಜಾಬ್‌ ತೀರ್ಪಿನ ವಿರುದ್ಧ ಇಂದು ಕರ್ನಾಟಕ ಬಂದ್‌

ಫೆ.27 ರಂದು ಬೆಂಗಳೂರು(Bengaluru) ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರದ ಬಳಿ ಇರುವ ಗ್ರೀನ್ ವುಡ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ್ದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನ ಒಳ್ಳೆಯದಲ್ಲ. ಧರ್ಮದ(Religion) ಬಗ್ಗೆ ಗೌರವವಿರಲಿ ಆದರೆ ಶಾಲಾ-ಕಾಲೇಜುಗಳಲ್ಲಿ ವಿವಾದ ಬೇಡ ಶಾಲೆಗಳು ಮಾಡಿರುವ ಕ್ರಮಗಳನ್ನು ವಿದ್ಯಾರ್ಥಿಗಳು(Students) ಅಳವಡಿಸಿಕೊಳ್ಳಬೇಕು ಅಂತ ಕರೆ ನೀಡಿದ್ದರು. 

ಪ್ರತಿಯೊಂದು ಶಾಲಾ-ಕಾಲೇಜುಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆ ಹೊಂದಬೇಕು. ಇಡೀ ದೇಶದ ಶೈಕ್ಷಣಿಕ ಸಂಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಪರಿಸರ ಕಾಳಜಿ ರೇಡಿಯೋ ಹವಾಮಾನ ಸೇರಿದಂತೆ ಹಲವು ವಿಚಾರಗಳಿಗೆ ಒಳಪಡಿಸಬೇಕು. ನಾವು ಮೊದಲು ಭಾರತೀಯರು ಶಾಲೆಯಲ್ಲಿ ಯಾವುದೇ ಜಾತಿ ಮತ ಭಾಷೆ ಇಲ್ಲ, ಭಾರತೀಯತೆ ನಮ್ಮದಾಗಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜೊತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thawar Chand Gehlot) ಸಚಿವ ಮುನಿರತ್ನ ನಾಯ್ಡು ಅವರು ಸಾಥ್ ನೀಡಿದ್ದರು.