ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾಗಿರುವ ವಿಶ್ವ ಹಿಂದೂ ಪರಿಷತ್‌ನ ಯುವ ಪಡೆ ಬಜರಂಗದಳ ಹನುಮ ಭಕ್ತರ ಸಂಘಟನೆಯಾಗಿದ್ದು, ಜನಸೇವೆಯಲ್ಲಿ ತೊಡಗಿದೆ. ಇಂತಹ ಸಂಘಟನೆಯನ್ನು ನಿಷೇಧಿಸುವ ಕಾಂಗ್ರೆಸ್‌ನ ಕಾರ್ಯ ನಾಚಿಗೇಡಿನ ಸಂಗತಿಯಾಗಿದೆ ಅಂತ ಕಿಡಿ ಕಾರಿದ ಪಿಯೂಶ್‌ ಗೋಯಲ್‌ 

ನವದೆಹಲಿ(ಮೇ.03): ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲಾಯಕ್‌ ಎಂದು ಕರೆದ ಪ್ರಿಯಾಂಕ್‌ ಗಾಂಧಿ ಹಾಗೂ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ಮಂಗಳವಾರ ದೂರು ನೀಡಿದೆ.

ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಅವರ ನೇತೃತ್ವದಲ್ಲಿನ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೋಯಲ್‌, ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾಗಿರುವ ವಿಶ್ವ ಹಿಂದೂ ಪರಿಷತ್‌ನ ಯುವ ಪಡೆ ಬಜರಂಗದಳ ಹನುಮ ಭಕ್ತರ ಸಂಘಟನೆಯಾಗಿದ್ದು, ಜನಸೇವೆಯಲ್ಲಿ ತೊಡಗಿದೆ. ಇಂತಹ ಸಂಘಟನೆಯನ್ನು ನಿಷೇಧಿಸುವ ಕಾಂಗ್ರೆಸ್‌ನ ಕಾರ್ಯ ನಾಚಿಗೇಡಿನ ಸಂಗತಿಯಾಗಿದೆ ಅಂತ ಕಿಡಿ ಕಾರಿದ್ದಾರೆ. 

ಖರ್ಗೆ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್‌ಗೆ ನಷ್ಟ, ಸಮೀಕ್ಷೆಯಲ್ಲಿ ಬಯಲಾಯ್ತು ರಹಸ್ಯ!

ಮೊದಲು ಮಲ್ಲಿಕಾರ್ಜುನ ಖರ್ಗೆ ಮೋದಿ ಅವರನ್ನು ವಿಷಸರ್ಪ ಎಂದು ಕರೆದರು. ಬಳಿಕ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಅವರನ್ನು ನಾಲಾಯಕ್‌ ಎಂದು ಕರೆದಿದ್ದಾರೆ. ಇಂತಹ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದೇವೆ ಎಂದು ಹೇಳಿದರು.