ಸುನೀಲ್ ಬೋಸ್ ನಾಮಪತ್ರ ಅಸಿಂಧು ಕೋರಿ ಬಿಜೆಪಿ ದೂರು: ಕಾರಣವೇನು?
ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ಪತ್ನಿ ಹಾಗೂ ಮಗಳು ಇದ್ದರೂ ವೈವಾಹಿಕ ಜೀವನದ ಬಗ್ಗೆ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸದೆ ವಂಚಿಸಿದ್ದು, ಇವರ ನಾಮಪತ್ರವನ್ನು ಅಸಿಂಧುಗೊಳಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ದೂರು ನೀಡಿದೆ.
ಚಾಮರಾಜನಗರ (ಏ.06): ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರಿಗೆ ಪತ್ನಿ ಹಾಗೂ ಮಗಳು ಇದ್ದರೂ ವೈವಾಹಿಕ ಜೀವನದ ಬಗ್ಗೆ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸದೆ ವಂಚಿಸಿದ್ದು, ಇವರ ನಾಮಪತ್ರವನ್ನು ಅಸಿಂಧುಗೊಳಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ದೂರು ನೀಡಿದೆ. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಸುವಾಗ ನೀಡಿರುವ ಪ್ರಮಾಣ ಪತ್ರದಲ್ಲಿ ಪತ್ನಿ ಹಾಗೂ ಮಗಳ ಹೆಸರನ್ನು ಉಲ್ಲೇಖ ಮಾಡಿಲ್ಲ. ಜೊತೆಗೆ ಅವರ ಆದಾಯದ ಮೂಲಗಳನ್ನು ಸಹ ತಿಳಿಸಿಲ್ಲ. ಅವರಿಗೆ ಎಂ.ಕೆ.ಸವಿತಾ ಎಂಬ ಸರ್ಕಾರಿ ನೌಕರಿಯಲ್ಲಿರುವ ಪತ್ನಿ ಇದ್ದು, ಮಗಳು ಸಹ ಇದ್ದಾರೆ. ಈಗಾಗಲೇ ಚುನಾವಣಾಧಿಕಾರಿ ಸುನೀಲ್ ಬೋಸ್ ನಾಮಪತ್ರವನ್ನು ಕ್ರಮಬದ್ದಗೊಳಿಸಿದ್ದು, ಇದು ಸರಿಯಾದ ಕ್ರಮವಲ್ಲ.
ನಾವು ಸುನೀಲ್ ಬೋಸ್‌ಗೆ ಪತ್ನಿ ಹಾಗೂ ಮಗಳು ಇರುವ ಕುರಿತ ಛಾಯಾಚಿತ್ರಗಳು ಹಾಗೂ ಫೇಸ್ ಬುಕ್, ವಾಟ್ಸ್ಆಪ್, ದಾಖಲಾತಿಗಳ ಸಮೇತ ಮನವಿಯ ಸಲ್ಲಿಸಿದ್ದೇವೆ. ಇತ್ತೀಚೆಗೆ ಸಿದ್ದರಾಮಯ್ಯ ಸಹ ಸುನೀಲ್ ಬೋಸ್ ಅವರ ಮನೆಗೆ ಹೋಗಿ ಕುಟುಂಬದೊಂದಿಗೆ ಪೋಟೋ ತೆಗೆಸಿಕೊಂಡಿದ್ದಾರೆ. ಪ್ರಮಾಣ ಪತ್ರದಲ್ಲಿ ಎಂ.ಕೆ. ಸವಿತಾ ಅವರಿಂದ 1 ಲಕ್ಷ ಸಾಲ ಪಡೆದಿರುವುದಾಗಿ ತೋರಿಸಿದ್ದಾರೆ. ಈ ಎಂ. ಸವಿತಾ ಯಾರು ಎನ್ನುವುದು ಸಾರ್ವಜನಿಕ ತಿಳಿಯಬೇಕಲ್ಲವೇ?. ಒಬ್ಬ ಹೆಣ್ಣು ಮಗಳು ಸುನೀ ಬೋಸ್‌ಗೆ ಸಾಲ ಕೊಟ್ಟಿದ್ದಾರೆ. ಅವರು ಯಾರು ಎಂಬ ಪ್ರಶ್ನೆ ಬರುತ್ತದೆ. ಹೀಗಾಗಿ ಎಲ್ಲಾ ಪ್ರಶ್ನೆಗಳನ್ನು ನಾವು ಚುನಾವಣಾಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದ ತಿಳಿಸಿದ್ದೇವೆ ಎಂದು ಬಿಜೆಪಿ ಚುನಾವಣಾ ಏಜೆಂಟ್ ಆಗಿರುವ ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣ್ ಪ್ರಸಾದ್ ತಿಳಿಸಿದ್ದಾರೆ.
ಕಾಂಗ್ರೆಸ್ ಗೆಲ್ಲಿಸಿ ಸಿದ್ದರಾಮಯ್ಯ ಕೈ ಬಲಪಡಿಸಿ: ಮಾಜಿ ಸಚಿವ ಎಚ್.ಆಂಜನೇಯ
ಸುನಿಲ್ ಬೋಸ್‌ಗೆ ಡಿಎಸ್‌ಎಸ್ ಬೆಂಬಲ: ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸುನಿಲ್‌ಬೋಸ್‌ಗೆ ದಲಿತ ಸಂಘರ್ಷ ಸಮಿತಿ ಬೆಂಬಲ ನೀಡಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಪ್ರತಿಭಾವಂತ ಯುವ ನಾಯಕರಾಗಿದ್ದು, ಬುದ್ದ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕುವೆಂಪು ಅವರ ಸಿದ್ದಾಂತದಲ್ಲಿ ನಂಬಿಕೆ, ಬದ್ಧತೆ ಇರಿಸಿಕೊಂಡಿದ್ದಾರೆ. ಸರ್ವ ಜಾತಿಯ ಬಡವರು, ರೈತರು, ಕೂಲಿಕಾರ್ಮಿಕರ ಜೀವನ ಸುಧಾರಣೆಗೆ ಶ್ರಮಿಸಿದ್ದಾರೆ ಎಂದರು.
ಕೋರ್ಟ್ ಕಲಾಪ ಅಕ್ರಮ ವಿಡಿಯೋ ಪ್ರಸಾರ: ಕೇಜ್ರಿವಾಲ್ ಪತ್ನಿ ವಿರುದ್ಧ ದೂರು ದಾಖಲು!
ಸುನಿಲ್‌ಬೋಸ್ ಅವರ ಸಮಾಜಸೇವೆ ಅತ್ಯುತ್ತಮವಾದದ್ದು, ಅವರ ಸರಳ, ಸಜ್ಜನಿಕೆ, ಶೋಷಿತರ ಬಗೆಗಿನ ಕಳಕಳಿಯನ್ನು ಪ್ರೋತ್ಸಾಹಿಸಬೇಕು ಕ್ಷೇತ್ರದ ಮತದಾರರು ಹಸ್ತದ ಗುರುತಿಗೆ ಮತ ನೀಡುವ ಮೂಲಕ ಅವರನ್ನು ಸಂಸದರನ್ನಾಗಿ ಸಂಸತ್‌ಗೆ ಕಳುಹಿಸಿ ತಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಬೇಕು ಎಂದರು. ಸಂವಿಧಾನ ಸಂರಕ್ಷಣೆ, ದೇಶದ ಹಿತದೃಷ್ಠಿಯಿಂದ ಈ ಬಾರಿಯ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಬೆಂಬಲಿಸಿ, ಕೋಮುವಾದಿ, ಹಿಂದುತ್ವವಾದಿ ಬಿಜೆಪಿ ಸೋಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಲು 20 ದಲಿತ ಸಂಘಟನೆಗಳು ಕ್ಷೇತ್ರದಲ್ಲಿ ಭೀಮಜಾಥಾ ಆರಂಭಿಸಿದೆ. ಈಗಾಗಲೇ ಮೈಸೂರಿನಲ್ಲಿ ದೊಡ್ಡಮಟ್ಟದಲ್ಲಿ ಸಭೆ ನಡೆಸಿ ಕ್ಷೇತ್ರದ ಹೋಬಳಿ, ತಾಲೂಕು ಮಟ್ಟದಲ್ಲಿ ಸಭೆ ನಡೆಸಿ, ಸುನಿಲ್‌ಬೋಸ್ ಅವರನ್ನು ಬಹುಮತದಿಂದ ಗೆಲ್ಲಿಸಲು ಶ್ರಮಿಸಲಾಗವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬೈಲಹೊನ್ನಯ್ಯ ಹಾಜರಿದ್ದರು.