Asianet Suvarna News Asianet Suvarna News

33 ಲಕ್ಷ ಮನೆಗಳ ಮೇಲೆ ಧ್ವಜ ಹಾರಿಸಿದ ಬಿಜೆಪಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಬಿಜೆಪಿ ವತಿಯಿಂದ ಜ.2ರಿಂದ 12ರ ವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ‘ಬೂತ್‌ ವಿಜಯ ಅಭಿಯಾನ’ದಲ್ಲಿ 33 ಲಕ್ಷದ 883 ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಲಾಗಿದೆ ಎಂದು ಬೂತ್‌ ವಿಜಯ ಅಭಿಯಾನದ ಸಂಚಾಲಕ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

BJP Booth Vijaya Will get Success Minister Kota Srinivas Poojary Said gvd
Author
First Published Jan 15, 2023, 3:40 AM IST

ಬೆಂಗಳೂರು (ಜ.15): ಬಿಜೆಪಿ ವತಿಯಿಂದ ಜ.2ರಿಂದ 12ರ ವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ‘ಬೂತ್‌ ವಿಜಯ ಅಭಿಯಾನ’ದಲ್ಲಿ 33 ಲಕ್ಷದ 883 ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಲಾಗಿದೆ ಎಂದು ಬೂತ್‌ ವಿಜಯ ಅಭಿಯಾನದ ಸಂಚಾಲಕ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಈ ಅಭಿಯಾನದಲ್ಲಿ 51,872 ಬೂತ್‌ ಸಮಿತಿ ರಚಿಸಲಾಗಿದೆ. 13,21,792 ಪೇಜ್‌ ಪ್ರಮುಖರ ನೇಮಿಸಲಾಗಿದೆ. ಪ್ರತಿ ಪೇಜ್‌ 30 ಮತದಾರರನ್ನು ಒಳಗೊಂಡಿರಲಿದೆ. ಕಾರ್ಯಕರ್ತರಿಗಾಗಿ 50,260 ವಾಟ್ಸಾಪ್‌ ಗ್ರೂಪ್‌ ರಚಿಸಲಾಗಿದೆ. 

ಈ ಅಭಿಯಾನದಲ್ಲಿ ರಾಜ್ಯದ 32 ಲಕ್ಷದ 883 ಮನೆಗಳ ಮೇಲೆ ಧ್ವಜ ಹಾರಿಸಲಾಗಿದೆ. ಇದರಲ್ಲಿ 15,93,848 ಕಾರ್ಯಕರ್ತರ ಶ್ರಮವಿತ್ತು. ಇವರೆಲ್ಲಾ ತಮ್ಮ ತನು, ಮನ, ಧನದ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಬಿಜೆಪಿ ಗೆಲುವು ಖಾತ್ರಿಪಡಿಸಲು ಡಬಲ್‌ ಎಂಜಿನ್‌ ಸರ್ಕಾರಗಳ ಸಾಧನೆ ಮತ್ತು ಅಭಿವೃದ್ಧಿ ವಿಚಾರಗಳನ್ನು ತಿಳಿಸಲು ಶ್ರಮಿಸಲಿದ್ದೇವೆ. ಕಾರ್ಯಕರ್ತರಲ್ಲಿ ರಣೋತ್ಸಾಹ, ಪ್ರೀತಿ, ನಂಬಿಕೆ ಇದೆ. 50 ಲಕ್ಷಕ್ಕೂ ಹೆಚ್ಚು ಅಧಿಕ ಧ್ವಜ ಹಾರಿಸುವ ಗುರಿ ಮೀರಿ ಸಾಧನೆ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದಲ್ಲಿನ ಕೆಲವರ ಅಸಮಾಧಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಣ್ಣ ಗುಡುಗು, ಮಿಂಚು ಸಹಜ. 

ಮಂತ್ರಿ ಸ್ಥಾನಕ್ಕಿಂತ ಎತ್ತರದ ಸ್ಥಾನ ಸುಧಾಕರ್‌ಗೆ ಸಿಗಲಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾರೈಕೆ

ಅದು ಮಳೆಯ ಬಳಿಕ ತಣ್ಣಗಾಗಲಿದೆ ಎಂದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಭಿಯಾನದ ಸಹ ಸಂಚಾಲಕ ಮಹೇಶ್‌ ಟೆಂಗಿನಕಾಯಿ ಮಾತನಾಡಿ, ಕೇಂದ್ರ ಸಚಿವ ಅಮಿತ್‌ ಶಾ ಅವರು ಬೂತ್‌ ಗೆಲುವಿನ ಮೂಲಕ ರಾಜ್ಯದಲ್ಲಿ ಗೆಲುವಿನ ಗುರಿ ನೀಡಿದ್ದಾರೆ. ಪಕ್ಷದ ಎಲ್ಲ ನಾಯಕರು ಒಂದು ಬೂತ್‌ಗೆ ಹೋಗಿ ಅಲ್ಲಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರೂ ಇದರಲ್ಲಿ ಭಾಗವಹಿಸಿದ್ದು ವಿಶೇಷ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ: ಸಂಸದ ತೇಜಸ್ವಿ ಸೂರ್ಯ

ಬೂತ್‌ ಅಭಿಯಾನದ ಯಶಸ್ಸಿಗಾಗಿ 65,320 ಸಭೆಗಳನ್ನು ಮಾಡಿದ್ದೇವೆ. 615 ವೆಬೆಕ್ಸ್‌ ಸಭೆಗಳನ್ನೂ ನಡೆಸಲಾಗಿದೆ. ಈ ಮೂಲಕ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಳ್ಳುವಂತೆ ನೋಡಿಕೊಂಡಿದ್ದೇವೆ. ಬಿಜೆಪಿಯ ಆರು ಮೋರ್ಚಾಗಳ ಪದಾಧಿಕಾರಿಗಳು, ಎಲ್ಲಾ ಪ್ರಕೋಷ್ಠಗಳನ್ನು ಒಳಗೊಂಡಂತೆ 312 ಮಂಡಲಗಳಲ್ಲಿ ಕೆಲಸ ಮಾಡಿದ್ದಾರೆ. ಇದೊಂದು ಬಹು ದೊಡ್ಡ ಅಭಿಯಾನ. ಫಲಾಪೇಕ್ಷೆ ಇಲ್ಲದ ಕಾರ್ಯಕರ್ತರು ನಮ್ಮಲ್ಲಿದ್ದಾರೆ. ಮಿಷನ್‌ 150 ಗುರಿ ನಮ್ಮ ಎದುರಿಗಿದ್ದು, ಅದನ್ನು ಸಾಧಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರ ಬಲದ ಮೇಲೆ ಪಕ್ಷವು ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow Us:
Download App:
  • android
  • ios