ಮಂತ್ರಿ ಸ್ಥಾನಕ್ಕಿಂತ ಎತ್ತರದ ಸ್ಥಾನ ಸುಧಾಕರ್‌ಗೆ ಸಿಗಲಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾರೈಕೆ
ಮತ್ತೊಮ್ಮೆ 2023ರ ಸಾರ್ವತ್ರಿಕ ಚುನಾವಣೆ ಮೂಲಕ ವಿಧಾನಸಭೆ ಪ್ರವೇಶಿಸಿ ಸಚಿವ ಡಾ.ಕೆ.ಸುಧಾಕರ್ ಮಂತ್ರಿ ಸ್ಥಾನಕ್ಕಿಂತ ಎತ್ತರದ ಸ್ಥಾನ ಆಲಂಕರಿಸಲಿ ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾರೈಸಿದರು.
ಚಿಕ್ಕಬಳ್ಳಾಪುರ (ಜ.14): ಮತ್ತೊಮ್ಮೆ 2023ರ ಸಾರ್ವತ್ರಿಕ ಚುನಾವಣೆ ಮೂಲಕ ವಿಧಾನಸಭೆ ಪ್ರವೇಶಿಸಿ ಸಚಿವ ಡಾ.ಕೆ.ಸುಧಾಕರ್ ಮಂತ್ರಿ ಸ್ಥಾನಕ್ಕಿಂತ ಎತ್ತರದ ಸ್ಥಾನ ಆಲಂಕರಿಸಲಿ ಎಂದು ರಾಜ್ಯ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾರೈಸಿದರು. ಚಿಕ್ಕಬಳ್ಳಾಪುರ ಉತ್ಸವದ 7ನೇ ದಿನದ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ನಗರದ ಸರ್.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಧಾಕರ್ ಒಬ್ಬ ಸಮಾಜಮುಖಿ ಹಾಗೂ ದೂರದೃಷ್ಠಿವುಳ್ಳ ರಾಜಕಾರಣಿ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ: ಸಚಿವ ಡಾ.ಕೆ.ಸುಧಾಕರ್ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ದಾಖಲೆ ಆಗಿವೆ. ಪ್ರಧಾನಿ ನರೇಂಧ್ರ ಮೋದಿ ದೂರಗಾಮಿ, ಸಮರ್ಥವಾಗಿ ಸಮೃದ್ದ, ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ ಶ್ರಮಿಸುವ ರೀತಿಯಲ್ಲಿ ಸಚಿವ ಸುಧಾಕರ್, ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಸರ್ವ ರೀತಿಯಲ್ಲಿ ಅಭಿವೃದ್ದಿಗೆ ಕಂಕಣ ತೊಟ್ಟು ಕೆಲಸ ಮಾಡುತ್ತಿದ್ದಾರೆ. ಮಂತ್ರಿಯಾಗಿ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸಮರ್ಥವಾಗಿ ಕೆಲಸ ಮಾಡಿ ಸಾಕಷ್ಟುಆನಾಹುತಗಳನ್ನು ತಪ್ಪಿಸಿದರು. ಕರ್ನಾಟಕದಲ್ಲಿ ಕೋವಿಡ್ ವೇಳೆ ಜನತೆಗೆ ಧೈರ್ಯ ಕೊಟ್ಟರು ಸುಧಾಕರ್ ಎಂದು ಶ್ಲಾಘಿಸಿದರು.
ಚಿಕ್ಕಬಳ್ಳಾಪುರ ಉತ್ಸವ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯಲಿ: ಸಚಿವ ಆರ್.ಅಶೋಕ್
ಈ ಹಿಂದೆ ದಿ.ಮಾಜಿ ಸಿಎಂ ದೇವರಾಜ ಅರಸು ಹೇಳಿತ್ತಿದ್ದಂತೆ ನಡೆಯುವ ದಾರಿ, ಕುಡಿಯುವ ನೀರು, ಸಾವು ಬದುಕಿನ ನಡುವೆ ಹೋರಾಡುವ ರೋಗಿ ವಿಚಾರದಲ್ಲಿ ಯಾರೂ ರಾಜಕಾರಣ ತರಬಾರದು. ದೇವರಾಜ ಅರಸು ರೀತಿ ಸುಧಾಕರ್ ಮಂತ್ರಿ ಆಗಿ ಜನರ ಮಧ್ಯೆ ಕೆಲಸ ಮಾಡುತ್ತಾ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ದೂರ ಮಾಡಿದ್ದಾರೆ. ಅವರು ಮಂತ್ರಿಯಾದ ಮೇಲೆ ಜಿಲ್ಲೆಯ ಕೆರೆ, ಕೊಳೆ ತುಂಬಿವೆ , 1,600, 1700 ಅಡಿ ಅಳಕ್ಕೆ ಹೋಗಿದ್ದ ಜಿಲ್ಲೆಯ ಅಂತರ್ಜಲ ಈಗ ಬರೀ 200 ಅಡಿಗೆ ನೀರು ಸಿಗುತ್ತಿದೆ. ಚಿಕ್ಕಬಳ್ಳಾಪುರ ಸಮೃದ್ಧಿಯತ್ತ ಸಾಗುತ್ತಿದೆ. ಅವರು ಸಚಿವರಾದ ಬಳಿಕ ಸರ್ಕಾರಿ ವೈದ್ಯಕೀಯ ಕಾಲೇಜ್ ರೂಪಗೊಂಡಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ರವರ ಮೂಲಕ ಉದ್ಘಾಟನೆಗೊಳ್ಳಲಿದೆ ಎಂದರು.
22 ಸಾವಿರ ನಿವೇಶನ ಹಂಚಿಕೆಗೆ ಸಿದ್ಧತೆ: ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅಧ್ಯಯನಕ್ಕೆ ರಾಜ್ಯವೆಲ್ಲಾ ಸುತ್ತಿಡಿದ್ದೇನೆ. ಆದರೆ ಒಂದು ಕ್ಷೇತ್ರದಲ್ಲಿ 22 ಸಾವಿರ ಸೈಟು ಕೊಡಲಿಕ್ಕೆ ಸಿದ್ಧತೆ ಮಾಡಿದ್ದರೆ ಅದು ಕೇವಲ ಸಚಿವ ಸುಧಾಕರ್ ಮಾತ್ರ ಎಂದು ಸಚಿವ ಕೋಟಾ ಶ್ರೀನಿವಾಸ್ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಉಪ ವಿಭಾಗಾಧಿಕಾರಿ ಡಾ.ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಸೇರಿದಂತೆ ಮತ್ತಿತರ ಗಣ್ಯರು ವೇದಿಕೆಯಲ್ಲಿ ಇದ್ದರು.
ಕರಾವಳಿ ಉತ್ಸವ ಮೀರಿದ ಚಿಕ್ಕಬಳ್ಳಾಪುರ ಉತ್ಸವ: ನಮ್ಮ ಭಾಗದ ಜನರ ಭಾವನೆಗಳನ್ನು ಹಂಚಿಕೊಳ್ಳಲು ನಾವು ಕೂಡ ಕರಾವಳಿ ಉತ್ಸವವನ್ನು ಆಚರಿಸುತ್ತೇವೆ. ಕರಾವಳಿ ಉತ್ಸವವನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದರು. ಅದೇ ರೀತಿ ಚಿಕ್ಕಬಳ್ಳಾಪುರ ಉತ್ಸವವನ್ನು ಸಿಎಂ ಉದ್ಘಾಟಿಸಿದ್ದಾರೆ. ಚಿಕ್ಕಬಳ್ಳಾಪುರ ಉತ್ಸವ ತನ್ನದೇ ಆದ ವೈಶಿಷ್ಟತೆ, ವಿಶಿಷ್ಟತೆ ಹೊಂದಿದೆ. ಈ ಸಂಭ್ರಮ ಹಣ. ಬಲದಿಂದ ಸಾಧ್ಯವಿಲ್ಲ. ಸಂಘಟನೆಯಿಂದ ಮಾತ್ರ ಸಾಧ್ಯ, ಸಚಿವ ಸುಧಾಕರ್ ಉತ್ತಮ ಸಂಘಟನೆಯ ಪಡೆಯಿಂದ ಉತ್ಸವ ಆಯೋಜಿಸಿದ್ದಾರೆ. ಕರಾವಳಿ ಉತ್ಸವ ಮೀರಿ ಚಿಕ್ಕಬಳ್ಳಾಪುರ ಉತ್ಸವ ನಡೆಯುತ್ತಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಉತ್ಸವ ಸಮಾರೋಪಕ್ಕೆ ಮಾಜಿ ಸಿಎಂ ಬಿಎಸ್‌ವೈ: ಸಚಿವ ಸುಧಾಕರ್ ಸಮಾಜಮುಖಿ ರಾಜಕಾರಣಿ, ಇತಂಹ ಉತ್ಸವವನ್ನು ಹಣ, ಜನ ಬಲದಿಂದ ಸಂಘಟಿಸಲು ಸಾಧ್ಯವಿಲ್ಲ. ಸಂಘಟನೆಯಿಂದ ಮಾತ್ರ ಸಾಧ್ಯ. ಹಚಿಕ್ಕಬಳ್ಳಾಪುರ ಉತ್ಸವದ ಸಮಾರೋಪಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದಾರೆಂದು ಇದೇ ವೇಳೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು. ಅಲ್ಲದೇ ಹಿರಿಯ ಸಚಿವರಾದ ಮಾಧುಸ್ವಾಮಿ ಕೂಡ ಬರಲಿದ್ದಾರೆಂದ ಅವರು, ಈ ಉತ್ಸವ ನೋಡಿ ನಿಜಕ್ಕೂ ರಾಜಕಾರಣದ ಜೀವನ ಸಾರ್ಥಕವಾಗಿದೆ ಎಂದರು.
Chikkaballapur Utsav: ಸುಧಾಕರ್ ದೇಶದ ಆಸ್ತಿ ಆಗಬೇಕು: ಸಚಿವ ಶಿವರಾಮ್ ಹೆಬ್ಬಾರ್
ವಸ್ತು ಪ್ರದರ್ಶನ ವೀಕ್ಷಿಸಿದ ಸಚಿವ ಕೋಟಾ: ಚಿಕ್ಕಬಳ್ಳಾಪುರ ಉತ್ಸವ ಭಾಗವಾಗಿ ನಗರದ ಹೊರ ವಲಯದ ಸಿವಿವಿ ಕ್ಯಾಂಪಸ್ ಬಳಿ ಕೃಷಿ, ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಆಕರ್ಷಕ ಫಲ ಪುಪ್ಪ ಪ್ರದರ್ಶನ ಹಾಗೂ ಕೃಷಿ ಇಲಾಖೆಯ ಮಾಹಿತಿ ವಸ್ತು ಪ್ರದರ್ಶನವನ್ನು ಇದೇ ವೇಳೆ ಸಚಿವ ಕೋಟಾ ಶ್ರೀನಿವಾಸಪೂಜಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.