ರಾಹುಲ್‌ ಕರ್ನಾಟಕ ಪ್ರವಾಸದಿಂದ ಬಿಜೆಪಿಗೆ ಲಾಭ: ನಳಿನ್‌ ಕುಮಾರ್‌ ಕಟೀಲ್‌

ರಾಹುಲ್‌ ಗಾಂಧಿ ಅವರು ದ.ಕ.ಜಿಲ್ಲೆಗೆ ಆಗಮಿಸಿ ಭಾಷಣ ಮಾಡಿದರೆ ಏನೂ ಆಗುವುದಿಲ್ಲ. ಇದರಿಂದ ಬಿಜೆಪಿಗೆ ಯಾವ ತೊಡಕೂ ಇಲ್ಲ. ಹಾಗಾಗಿ ಅವರು ಎಲ್ಲ ಕಡೆ ಭೇಟಿ ನೀಡಿ ಭಾಷಣ ಮಾಡುವುದು ಒಳಿತು ಎಂದ ನಳಿನ್‌ ಕುಮಾರ್‌ ಕಟೀಲ್‌. 

BJP Benefits from Rahul Gandhi's Campaign in Karnataka Says Nalin Kumar Kateel grg

ಮಂಗಳೂರು(ಏ.28):  ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಅವರು ದ.ಕ.ಜಿಲ್ಲೆ ಮಾತ್ರವಲ್ಲ, ಕರ್ನಾಟಕದ ಎಲ್ಲ ಅಸೆಂಬ್ಲಿ ವಿಧಾನಸಭಾ ಕ್ಷೇತ್ರಗಳಿಗೂ ತೆರಳಿ ಚುನಾವಣಾ ಪ್ರಚಾರ ಭಾಷಣ ಮಾಡಬೇಕು. ಅವರು ಭೇಟಿ ನೀಡಿದ ಕಡೆಗಳಲ್ಲೆಲ್ಲ ಬಿಜೆಪಿಗೆ ಲಾಭವಾಗುತ್ತದೆ ಎಂದು ಪಕ್ಷದ ರಾಜಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಗುರುವಾರ ಮಂಗಳೂರಿನಲ್ಲಿ ಪ್ರಧಾನಿ ಮೋದಿ ಅವರು ಕಾರ್ಯಕರ್ತರ ಜತೆ ವಿಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗಾರರಲ್ಲಿ ಮಾತನಾಡಿ, ರಾಹುಲ್‌ ಗಾಂಧಿ ಅವರು ದ.ಕ.ಜಿಲ್ಲೆಗೆ ಆಗಮಿಸಿ ಭಾಷಣ ಮಾಡಿದರೆ ಏನೂ ಆಗುವುದಿಲ್ಲ. ಇದರಿಂದ ಬಿಜೆಪಿಗೆ ಯಾವ ತೊಡಕೂ ಇಲ್ಲ. ಹಾಗಾಗಿ ಅವರು ಎಲ್ಲ ಕಡೆ ಭೇಟಿ ನೀಡಿ ಭಾಷಣ ಮಾಡುವುದು ಒಳಿತು ಎಂದರು.

ಗ್ಯಾರಂಟಿ ಈಡೇರಿಸದಿದ್ದರೆ ಓಟು ಕೇಳಲು ಬರಲ್ಲ: ಡಿ.ಕೆ.ಶಿವಕುಮಾರ್‌ ಶಪಥ

ಕೈಗೆ ಮತ್ತೊಮ್ಮೆ ಸವಾಲು:

ಬಿಜೆಪಿ ಎಂದಿಗೂ ಲಿಂಗಾಯತ, ವೀರಶೈವ ಎಂದು ವಿಭಜಿಸಿಲ್ಲ. ಆದರೆ, ಕಾಂಗ್ರೆಸ್‌ ಅವರಿಗೆ ಅವಮಾನ ಮಾಡಿದೆ, ಮಾತ್ರವಲ್ಲ ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಅವರು ಈ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಮೊನ್ನೆ ಕೂಡ ಸಿದ್ದರಾಮಯ್ಯ ಅವರು ಲಿಂಗಾಯತರ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಮೂವರು ಲಿಂಗಾಯತರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ. ಅಲ್ಲದೆ, ಮುಂದೆ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡುವುದಾಗಿ ಹೇಳಿದೆ. ತಾಕತ್ತಿದ್ದರೆ ಲಿಂಗಾಯತ ಅಥವಾ ವೀರಶೈವ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕಾಂಗ್ರೆಸ್‌ ಮೊದಲೇ ಘೋಷಣೆ ಮಾಡಲಿ ಎಂದು ಕಟೀಲ್‌ ಸವಾಲು ಹಾಕಿದರು.

ಬಹುಮತದ ಸರ್ಕಾರ: 

ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿದೆ. ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಇದಕ್ಕಾಗಿ ಕಾರ್ಯಕರ್ತರು ಅಹೋರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳು 15ಕ್ಕೂ ಅಧಿಕ ಬಾರಿ ರಾಜ್ಯ ಪ್ರವಾಸ ನಡೆಸುತ್ತಿದ್ದಾರೆ. ಇದರಿಂದಾಗಿ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗಲಿದೆ. ಈಗ ರಾಜ್ಯದಲ್ಲಿ ಬಿಜೆಪಿ ಅಲೆ ಎದ್ದಿದ್ದು, ಈ ಬಾರಿ ಬಹುಮತದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದರು.

ಸರಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಕಾಂಗ್ರೆಸ್ 5 ಗ್ಯಾರಂಟಿ ಯೋಜನೆ ಘೋಷಿಸಿದ ರಾಹುಲ್

ಕಾರ‍್ಯಕರ್ತರಿಗೆ ಮೋದಿ ಮಾತು ಪ್ರೇರಣೆ

ಪ್ರಧಾನಿ ಮೋದಿ ಅವರು ಕಾರ್ಯಕರ್ತರ ಜತೆ ವಿಡಿಯೋ ಸಂವಾದ ನಡೆಸಿರುವುದು ಎಲ್ಲರಿಗೂ ಪ್ರೇರಣೆ. ಮನೆ ಮನೆಗೆ ತೆರಳಿ ಯಾವ ರೀತಿ ಪ್ರಚಾರ ಮಾಡಬೇಕು, ಸರ್ಕಾರದ ಸಾಧನೆಯನ್ನು ಹೇಗೆ ಹೇಳಬೇಕು, ಕಾಂಗ್ರೆಸ್‌ನ ಭ್ರಷ್ಟಾಚಾರ, ಗ್ಯಾರಂಟಿ ಕಾರ್ಡ್‌ ಸುಳ್ಳನ್ನು ಜನತೆಗೆ ಹೇಗೆ ತಿಳಿಸಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಹೊಸ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲ 224 ಕ್ಷೇತ್ರಗಳಲ್ಲೂ ಚುನಾವಣೆಯಲ್ಲಿ ಪ್ರಚಾರ ಅಭಿಯಾನಕ್ಕೆ ಪ್ರಧಾನಿ ಮಾತುಗಳು ನೆರವಾಗಲಿವೆ ಎಂದರು.

ಕಾಂಗ್ರೆಸ್‌ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದ್ದು, ಮತದಾರರು ಈಗಾಗಲೇ ಕಾಂಗ್ರೆಸ್‌ ನಿವಾರಣೆಗೆ ನಿರ್ಧರಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನ ಗೆಲ್ಲುವ ಗುರಿ ಇದ್ದು, 140 ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ. ವರುಣದಲ್ಲಿ ಸಿದ್ದರಾಮಯ್ಯ ಸೋಲುತ್ತಾರೆ, ಕನಕಪುರದಲ್ಲಿ ಬಂಡೆ ಪುಡಿಯಾಗುತ್ತದೆ. ದ.ಕ.ದಲ್ಲಿ ಎಲ್ಲ ಎಂಟು ಸ್ಥಾನಗಳನ್ನೂ ಬಗಲಿಗೆ ಹಾಕಿಕೊಳ್ಳುತ್ತೇವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios