Asianet Suvarna News Asianet Suvarna News

ಲೋಕ ಸಮರಕ್ಕೆ ಕಮಲ ಪಡೆ ಭರ್ಜರಿ ತಯಾರಿ: ಎಂಪಿ ಕ್ಷೇತ್ರಗಳಿಗೆ ಬಿಜೆಪಿ ಉಸ್ತುವಾರಿ ನೇಮಕ

ಬಿಜೆಪಿ ಕರ್ನಾಟಕ ಸೇರಿ 23 ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಕರ್ನಾಟಕ ಉಸ್ತುವಾರಿಯಾಗಿ ರಾಜ್ಯಸಭಾ ಸದಸ್ಯ ರಾಧಾಮೋಹನ್, ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ನೇಮಕವಾಗಿದೆ.

BJP Appointed in Charge of MP Constituencies of Lok Sabha Elections 2024 grg
Author
First Published Jan 28, 2024, 11:47 AM IST

ಬೆಂಗಳೂರು(ಜ.28):  ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿ ಸಿರುವ ಬಿಜೆಪಿ, ಇದೀಗ 28 ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿ ಮತ್ತು ಸಂಚಾಲಕ ರನ್ನು ನೇಮಕ ಮಾಡಿ ಆದೇಶಿಸಿದೆ. ಮೈಸೂರು ಕ್ಷೇತ್ರಕ್ಕೆ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಉಸ್ತುವಾರಿ ಮತ್ತು ರವಿಶಂಕರ್‌ ಹಾಗೂ ರಾಬಿನ್ ದೇವಯ್ಯ ರನ್ನು ಸಂಚಾಲಕರಾಗಿ ನೇಮಕ ಮಾಡಲಾ ಗಿದೆ. ಚಾಮರಾಜನಗರ ಉಸ್ತುವಾರಿ ಯಾಗಿಎನ್.ವಿ.ಪನೀಶ್, ಸಂಚಾಲಕರಾಗಿ ಮಲ್ಲಿಕಾರ್ಜುನಪ್ಪ, ಮಂಡ್ಯ ಉಸ್ತುವಾರಿ ಯಾಗಿ ಸುನಿಲ್ ಸುಬ್ರಮಣಿ, ಸಂಚಾಲಕ ರಾಗಿ ಸಿ.ಪಿ. ಉಮೇಶ್, ಹಾಸನ ಉಸ್ತು ರಿಯಾಗಿ ಎಂ.ಕೆ. ಪ್ರಾಣೇಶ್, ಸಂಚಾಲ ಕರಾಗಿ ಪ್ರಸನ್ನ. ದಕ್ಷಿಣ ಕನ್ನಡ ಉಸ್ತುವಾರಿ ಯಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಚಾಲಕರಾಗಿ ನಿತಿನ್ ಅವ ರನ್ನು ನೇಮಕ ಮಾಡಲಾಗಿದೆ.

ಉಡುಪಿ- ಚಿಕ್ಕಮಗಳೂರು ಉಸ್ತುವಾ ರಿಯಾಗಿ ಆರಗ ಜ್ಞಾನೇಂದ್ರ, ಸಂಚಾಲಕರಾಗಿ ಕುಟ್ಯಾರು ನವೀನ್ ಶೆಟ್ಟಿ, ರವೀಂದ್ರ ಸಿದ್ದು ಸವದಿ. ವಿಜಯಪುರ ಉಸ್ತುವಾರಿ ಬೆಳವಾಡಿ. ಶಿವಮೊಗ್ಗ ಉಸ್ತುವಾರಿಯಾಗಿ ರಘುಪತಿ ಭಟ್, ಸಂಚಾಲಕರಾಗಿ ಗಿರೀಶ್ ಪಟೇಲ್.ಉತ್ತರ ಕನ್ನಡ ಉಸ್ತುವಾರಿಯಾಗಿ ಹರತಾಳು ಹಾಲಪ್ಪ, ಸಂಚಾಲಕರಾಗಿ ಗೋವಿಂದ ನಾಯಕ್. ಧಾರವಾಡ ಉಸ್ತು ವಾರಿಯಾಗಿ ಈರಣ್ಣ ಕಡಾಡಿ, ಸಂಚಾಲಕ ರಾಗಿ ನಾಗರಾಜ್, ಹಾವೇರಿ ಉಸ್ತುವಾರಿ ಯಾಗಿ ಬೆಲ್ಲದ್, ಸಂಚಾಲಕರಾಗಿ ಕಳಕಪ್ಪ ಬಂಡಿ. ಚಿಕ್ಕೋಡಿ ಉಸ್ತುವಾರಿಯಾಗಿ ಅಭಯ್ ಪಾಟೀಲ್, ಸಂಚಾಲಕರಾಗಿ ರಾಜೇಶ್‌ರನ್ನು ನಿಯೋಜಿಸಲಾಗಿದೆ.

ಬಿಜೆಪಿಯಲ್ಲೇ ಇದ್ದರೂ ನನ್ನನ್ನು ರಾಜ್ಯ ಕಾರಕಾರಿಣಿಗೆ ಕರೆದಿಲ್ಲ: ಎಸ್.ಟಿ.ಸೋಮಶೇಖ

ಬಾಗಲಕೋಟೆ ಉಸ್ತುವಾರಿಯಾಗಿ ಲಿಂಗರಾಜು ಪಾಟೀಲ್, ಸಂಚಾಲಕರಾಗಿ ರಾಜಶೇಖರ್‌ ಶೀಲವಂತ್, ಸಂಚಾ ಲಕರಾಗಿ ಅರುಣ್ ಶಹಪುರ. ಬೀದರ್ ಉಸ್ತುವಾರಿಯಾಗಿ ಅಮರನಾಥ್ ಪಾಟೀಲ್, ಸಂಚಾಲಕರಾಗಿ ಅರಹಂತ ಸಾವೆ, ಕಲಬುರಗಿ ಉಸ್ತುವಾರಿಯಾಗಿ ರಾಜುಗೌಡ, ಸಂಚಾಲಕರಾಗಿ ಶೋಭಾ ಬನಿ. ರಾಯಚೂರು ಉಸ್ತುವಾರಿಯಾಗಿ ದೊಡ್ಡನಗೌಡಪಾಟೀಲ್, ಸಂಚಾಲಕರಾಗಿ ಗುರು ಕಾಮ. ಕೊಪ್ಪಳ ರಘುನಾಥ್ ರಾವ್ ಮಲ್ಕಾಪುರೆ, ಸಂಚಾಲಕರಾಗಿ ಗಿರಿಗೌಡ, ಬಳ್ಳಾರಿ ಉಸ್ತುವಾರಿಯಾಗಿ ಎನ್. ರವಿಕುಮಾರ್, ಸಂಚಾಲಕರಾಗಿ ವೈ.ಎಂ. ಸತೀಶ್, ದಾವಣಗೆರೆ ಉಸ್ತುವಾರಿಯಾಗಿ

ಮಾಜಿ ಸಚಿವ ಭೈರತಿ ಬಸವರಾಜ್, ಸಂಚಾಲಕರಾಗಿ ವೀರೇಶ್ ಹನಗವಾಡಿ. ಚಿತ್ರದುರ್ಗ ಉಸ್ತುವಾರಿಯಾಗಿ ಚನ್ನಬಸಪ್ಪ, ಸಂಚಾಲಕರಾಗಿ ಲಿಂಗ ಮೂರ್ತಿರನ್ನು ನಿಯೋಜಿಸಲಾಗಿದೆ.

ತುಮಕೂರು ಉಸ್ತುವಾರಿಯಾಗಿ ಗೋಪಾಲಯ್ಯ, ಸಂಚಾಲಕರಾಗಿ ಬೈರಣ್ಣ. ಚಿಕ್ಕಬಳ್ಳಾಪುರ ಕ್ಷೇತ್ರದ ಕಟ್ಟಾಸುಬ್ರಮಣ್ಯ ನಾಯ್ಡು, ಸಂಚಾಲಕರಾಗಿ ಎ.ವಿ. ನಾರಾ ಯಣಸ್ವಾಮಿ, ಕೋಲಾರ ಉಸ್ತುವಾರಿ ಯಾಗಿಬಿ.ಸುರೇಶ್‌ ಗೌಡ, ಸಂಚಾಲಕರಾಗಿ ನಾರಾಯಣಸ್ವಾಮಿ. ಬೆಂ. ಗ್ರಾಮಾಂತರ ಉಸ್ತುವಾರಿಯಾಗಿ ನಿರ್ಮಲ್ ಸುರಾನಾ, ಸಂಚಾಲಕರಾಗಿ ಮುನಿರತ್ನ, ಬೆಂ.ದಕ್ಷಿಣ ಉಸ್ತುವಾರಿಯಾಗಿ ಎಂ. ಕೃಷ್ಣಪ್ಪ, ಸಂಚಾ ಲಕರಾಗಿ ಉಮೇಶ್ ಶೆಟ್ಟಿ. ಬೆಂ. ಕೇಂದ್ರ ಉಸ್ತುವಾರಿಯಾಗಿ ಗುರುರಾಜ್ ಗಂಟಿ ಹೊಳೆ, ಸಂಚಾಲಕರಾಗಿ ಗೌತಮ್ ಕುಮಾ ರ್‌ಜೈನ್.ಬೆಂ. ಉತ್ತರ ಉಸ್ತುವಾರಿಯಾಗಿ ವಿಶ್ವನಾಥ್, ಸಂಚಾಲಕರಾಗಿಸಚ್ಚಿದಾನಂದ ಮೂರ್ತಿರನ್ನು ನೇಮಕ ಮಾಡಲಾಗಿದೆ.

ರಾಜ್ಯ ಬಿಜೆಪಿಗೆ ದಾಸ್ ಉಸ್ತುವಾರಿ

ನವದೆಹಲಿ: ಬಿಜೆಪಿ ಕರ್ನಾಟಕ ಸೇರಿ 23 ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಕರ್ನಾಟಕ ಉಸ್ತುವಾರಿಯಾಗಿ ರಾಜ್ಯಸಭಾ ಸದಸ್ಯ ರಾಧಾಮೋಹನ್, ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ನೇಮಕವಾಗಿದೆ.

Latest Videos
Follow Us:
Download App:
  • android
  • ios