ಬಿಜೆಪಿಯಲ್ಲೇ ಇದ್ದರೂ ನನ್ನನ್ನು ರಾಜ್ಯ ಕಾರಕಾರಿಣಿಗೆ ಕರೆದಿಲ್ಲ: ಎಸ್.ಟಿ.ಸೋಮಶೇಖರ್

ಕಾಂಗ್ರೆಸ್‌ಗೆ ಸೇರುತ್ತೇನೆ ಎಂದು ಯಾವತ್ತೂ ಹೇಳಿಲ್ಲ. ಕಾರ್ಯಕಾರಿಣಿ ಸಭೆಗೆ ಯಾಕೆ ಕರೆದಿಲ್ಲ ಎಂಬುದು ಗೊತ್ತಿಲ್ಲ. ಅವರನ್ನೇ ಕೇಳಬೇಕು. ನಾನು ಈಗಲೂ ಬಿಜೆಪಿಯಲ್ಲಿಯೇ ಇದ್ದೇನೆ. ಬೇರೆಯವರನ್ನು ಸಭೆಗೆ ಕರೆದಿದ್ದಾರೋ, ಇಲ್ಲವೋ? ಎನ್ನುವುದರ ಬಗ್ಗೆ ನಾನು ಯಾರನ್ನು ಕೇಳಿಲ್ಲ. ನನ್ನದೇನಿದ್ದರೂ ಕ್ಷೇತ್ರದಲ್ಲಿ ಓಡಾಡಿ ಕೆಲಸ ಮಾಡುವುದು ಮಾತ್ರ ಎಂದು ತಿಳಿಸಿದ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ 

Former Minister ST Somashekhar Talks Over BJP grg

ಬೆಂಗಳೂರು(ಜ.28): ನಗರದ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಯಾಕೆ ಆಹ್ವಾನಮಾಡಿಲ್ಲ ಎಂಬುದುಗೊತ್ತಿಲ್ಲ. ಆದರೆ, ನಾನುಈಗಲೂ ಬಿಜೆಪಿಯಲ್ಲಿಯೇ ಇದ್ದೇನೆ ಎಂದು ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. 

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸೇರುತ್ತೇನೆ ಎಂದು ಯಾವತ್ತೂ ಹೇಳಿಲ್ಲ. ಕಾರ್ಯಕಾರಿಣಿ ಸಭೆಗೆ ಯಾಕೆ ಕರೆದಿಲ್ಲ ಎಂಬುದು ಗೊತ್ತಿಲ್ಲ. ಅವರನ್ನೇ ಕೇಳಬೇಕು. ನಾನು ಈಗಲೂ ಬಿಜೆಪಿಯಲ್ಲಿಯೇ ಇದ್ದೇನೆ. ಬೇರೆಯವರನ್ನು ಸಭೆಗೆ ಕರೆದಿದ್ದಾರೋ, ಇಲ್ಲವೋ? ಎನ್ನುವುದರ ಬಗ್ಗೆ ನಾನು ಯಾರನ್ನು ಕೇಳಿಲ್ಲ. ನನ್ನದೇನಿದ್ದರೂ ಕ್ಷೇತ್ರದಲ್ಲಿ ಓಡಾಡಿ ಕೆಲಸ ಮಾಡುವುದು ಮಾತ್ರ ಎಂದು ತಿಳಿಸಿದರು. 

ಡಿಕೆಶಿ ಮನೆಗೆ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಭೇಟಿ; ಪದೇಪದೆ ಭೇಟಿಗೆ ಕಾರಣ ಇಲ್ಲಿದೆ ನೋಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದಿಗೂ ಕಾಂಗ್ರೆಸ್‌ಗೆ ಬನ್ನಿ ಎಂದು ಕರೆದಿಲ್ಲ. ಯಶವಂತಪುರ ಕ್ಷೇತ್ರ ಅಭಿವೃದ್ಧಿಯಾಗಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದೇ ಶೇ.100ರಷ್ಟು ಕಾರಣವಾಗಿದೆ. ಹೀಗಾಗಿ ಆಗಿನಿಂದಲೂ ಅದೇ ಗೌರವ ಅವರ ಮೇಲೆ ಇದೆ ಎಂದರು.

Latest Videos
Follow Us:
Download App:
  • android
  • ios