ಬೆಂಗಳೂರು, [ನ.27]: ಡಿಸೆಂಬರ್‌ 12 ರಂದು ನಡೆಯಲಿರುವ ಕರ್ನಾಟಕ ರಾಜ್ಯಸಭಾ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ  ಕಾಂಗ್ರೆಸ್ ನಿಂದ ಅನರ್ಹಗೊಂಡಿರುವವರನ್ನೇ ಬಿಜೆಪಿ ಪಕ್ಷಕ್ಕೆ ಕರೆದುಕೊಂಡು ಉಪಚುನಾವಣೆ ಟಿಕೆಟ್ ಕೊಟ್ಟಿದೆ. ಗೆದ್ರೆ ಮಂತ್ರಿ ಮಾಡುವುದಾಗಿಯೂ ಸಹ ಸಿಎಂ ಯಡಿಯೂರಪ್ಪ ಘಂಟಾಘೋಷವಾಗಿ ಹೇಳಿದ್ದಾರೆ.

ಕರ್ನಾಟಕ ಸೇರಿ 2 ರಾಜ್ಯಸಭಾ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆ

ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯಸಭಾ ಉಪಚುನಾವಣೆಗೂ ಸಹ ಕಾಂಗ್ರೆಸ್ ಗೆ ರಾಜೀನಾಮೆ ನೀಡಿಬಂದ ನಾಯಕನನ್ನೇ ಅಭ್ಯರ್ಥಿಯನ್ನಾಗಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ.

ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿದ್ದ ಕೆ.ಸಿ. ರಾಮಮೂರ್ತಿ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.  ಕೆ.ಸಿ. ರಾಮಮೂರ್ತಿ ಅವರು ಇತ್ತೀಚೆಗೆ ಕಾಂಗ್ರೆಸ್ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. 

ಕಾಂಗ್ರೆಸ್‌ಗೆ ಬಿಗ್ ಶಾಕ್: ಕರ್ನಾಟಕ ರಾಜ್ಯಸಭೆ ಸದಸ್ಯ ರಾಜೀನಾಮೆ

ಈ ಹಿನ್ನೆಲೆಯಲ್ಲಿ ಉಪಚುನಾವಣೆ ಎದುರಾಗಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಅವರೇ ಕಣಕ್ಕಿಳಿಯುತ್ತಿದ್ದಾರೆ. ರಾಜ್ಯಸಭಾ ಸದಸ್ಯತ್ವ ತೊರೆದು ಬಿಜೆಪಿ ಸೇರಿದ ರಾಮಮೂರ್ತಿ ಅವರೇ ಅಭ್ಯರ್ಥಿಯಾಗುತ್ತಾರೆಂಬ ನಿರೀಕ್ಷೆ ಇತ್ತು. ಅದರಂತೆ ಕೇಂದ್ರ ಬಿಜೆಪಿ ಚುನಾವಣಾ ಸಮಿತಿಯು ರಾಮಮೂರ್ತಿ ಅವರನ್ನು ಬುಧವಾರ ಅಭ್ಯರ್ಥಿಯನ್ನಾಗಿ ಘೋಷಿಸಿದೆ. 

ವಿಧಾನಸಭೆಯಲ್ಲಿ ಬಿಜೆಪಿಯ  ಸಂಖ್ಯಾಬಲದ ಆಧಾರದಲ್ಲಿ ರಾಮಮೂರ್ತಿ ಅವರ ಆಯ್ಕೆ ಸುಲಭವಾಗಿದೆ. ಆದ್ರೆ, ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸುವುದು ಅನುಮಾನವಾಗಿದೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿಯನ್ನು ಶೀಘ್ರದಲ್ಲಿಯೇ ಪ್ರಕಟಿಸುವ ಸಾಧ್ಯತೆಗಳಿವೆ.

ಕಾಂಗ್ರೆಸ್‌ಗೆ ರಾಜೀನಾಮೆ: ಕಾರಣದ ಜತೆಗೆ ಮಹತ್ವದ ಸುಳಿವು ಕೊಟ್ಟ ರಾಮಮೂರ್ತಿ

ಇನ್ನು ಉತ್ತರ ಪ್ರದೇಶ ರಾಜ್ಯಸಭಾಗೂ ಸಹ ಉಪಚುನಾವಣೆ ನಡೆಯಲಿದ್ದು, ಅರುಣ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಅಧಿಸೂಚನೆ ಹೊರಡಿಸಿರುವಂತೆ ಡಿಸೆಂಬರ್ 2 ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಡಿಸೆಂಬರ್ 3 ರಂದು ನಾಮಪತ್ರ ಪರಿಶೀಲನೆ ನಡೆಸಲಾಗುತ್ತದೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ ಡಿಸೆಂಬರ್ 5 ಆಗಿದ್ದು, ಡಿಸೆಂಬರ್ 12 ರಂದು [ಬೆಳಿಗ್ಗೆ 9 ರಿಂದ ಸಂಜೆ 4 ವರೆಗೆ] ಮತದಾನ ನಡೆಯಲಿದೆ. ಅದೇ ದಿನ ಸಂಜೆ ಮತ ಎಣಿಕೆಯೂ ನಡೆಯಲಿದ್ದು, 16ಕ್ಕೆ ಚುನಾವಣಾ ಪ್ರಕ್ರಿಯೆ ಕೊನೆ ಆಗಲಿದೆ.