Asianet Suvarna News Asianet Suvarna News

ಕರ್ನಾಟಕ ಸೇರಿ 2 ರಾಜ್ಯಸಭಾ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆ

ಕಾಂಗ್ರೆಸ್​ ರಾಜ್ಯಸಭಾ ಸದಸ್ಯ ಕೆಸಿ ರಾಮಮೂರ್ತಿ ಬಿಜೆಪಿಗೆ ಸೇರ್ಪಡನೆಯಾದ ಪರಿಣಾಮ ತೆರವಾಗಿದ್ದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ಆಯೋಗ ದಿನಾಂಕ ಪ್ರಕಟಿಸಿದೆ. 

election-commission announces Karnataka And UP Rajya Sabha By Election Date
Author
Bengaluru, First Published Nov 14, 2019, 9:29 PM IST

ನವದೆಹಲಿ (ನ.14):  ಕರ್ನಾಟಕದ ಒಂದು ಸ್ಥಾನದ ಜೊತೆಗೆ ಉತ್ತರ ಪ್ರದೇಶದ ಒಂದು ರಾಜ್ಯಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣೆ ಆಯೋಗ ದಿನಾಂಕ ನಿಗದಿಪಡಿಸಿದೆ.

 ಕಾಂಗ್ರೆಸ್​ ರಾಜ್ಯಸಭಾ ಸದಸ್ಯರಾಗಿದ್ದ ಕೆಸಿ ರಾಮಮೂರ್ತಿ ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡಯಾದ್ದರು. ಇನ್ನು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ತಜೀಮಾ ಫತ್ಮಾ ವಿಧಾನಸಭಾ ಚುನಾವಣಾ ಚುನಾವಣೆಗೆ ಸ್ಪರ್ಧೆ ಮಾಡಲು ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕಾಂಗ್ರೆಸ್‌ಗೆ ಬಿಗ್ ಶಾಕ್: ಕರ್ನಾಟಕ ರಾಜ್ಯಸಭೆ ಸದಸ್ಯ ರಾಜೀನಾಮೆ

ತೆರವಾಗಿರುವ ಈ ಎರಡು ಸ್ಥಾನಗಳಿಗೆ ಡಿ. 2 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ರೆ, ಡಿ.3ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ಇನ್ನು ಡಿ.5 ನಾಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಡಿ.12ರಂದು ಚುನಾವಣೆ ನಡೆಯಲಿದ್ದು, ಅಂದೇ ಸಂಜೆ 5ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಐಪಿಎಸ್​ ಅಧಿಕಾರಿಯಾಗಿದ್ದ ಕೆ.ಸಿ.ರಾಮಮೂರ್ತಿ ಅವರು ಕಾಂಗ್ರೆಸ್​ 2016ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು. 

ಕಾಂಗ್ರೆಸ್‌ಗೆ ರಾಜೀನಾಮೆ: ಕಾರಣದ ಜತೆಗೆ ಮಹತ್ವದ ಸುಳಿವು ಕೊಟ್ಟ ರಾಮಮೂರ್ತಿ

ನರೇಂದ್ರ ಮೋದಿಯವರ ಆಡಳಿತ ಮೆಚ್ಚಿ ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್​ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

election-commission announces Karnataka And UP Rajya Sabha By Election Date

Follow Us:
Download App:
  • android
  • ios